Wednesday, March 19, 2025
ಅಂಕಣದಕ್ಷಿಣ ಕನ್ನಡಬೆಂಗಳೂರುಮಂಗಳೂರುಸಿನಿಮಾಸುದ್ದಿ

ಪೊಲೀಸ್ ಆಗಬೇಕೆಂಬ ಕನಸು ಹೊತ್ತಿದ್ದ ಭವ್ಯಾ ಪೂಜಾರಿ ಆಗಿದ್ದು ನಟಿ..! – ಕಹಳೆ ನ್ಯೂಸ್

ಬಣ್ಣದ ಲೋಕವೇ ಹಾಗೆ. ಇದಕ್ಕೆ ಆಕರ್ಷಿತರಾಗವರಿಲ್ಲ. ಈ ಬಣ್ಣದ ಲೋಕದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳನ್ನ ಕಾಣುತ್ತೇವೆ. ಆದರೆ ನಟನೆ ಮೂಲಕ ಪ್ರೇಕ್ಷಕನ ಮನದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಸುಲಭದ ಮಾತಲ್ಲ. ಆದ್ರೆ ಇಲ್ಲೊಬ್ಬರು ಪಟ ಪಟ ಅಂತಾನೇ ಮಾತಾಡ್ತಾ ತನ್ನ ವಿಭಿನ್ನ ನಟನೆಯ ಮೂಲಕವೇ ಪ್ರೇಕ್ಷಕರ ಮನಸ್ಸಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅವರೇ ಬೆಳ್ಳಾರೆಯ ಬೆಡಗಿ ಭವ್ಯಾ ಪೂಜಾರಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತಃ ಸುಳ್ಯ ತಾಲೂಕಿನ ಬೆಳ್ಳಾರೆಯವರಾದ ಭವ್ಯಾ ರಂಗಭೂಮಿ ಕಲಾವಿದೆ ಹಾಗೂ ಭರತನಾಟ್ಯ ಮತ್ತು ಯಕ್ಷಗಾನದಲ್ಲೂ ಪ್ರವೀಣರು. ಪೊಲೀಸ್ ಆಗಬೇಕೆಂಬ ಕನಸು ಭವ್ಯಾರದ್ದು. ಆದ್ರೆ ಬಾಲ್ಯದಲ್ಲೇ ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರಿಗೆ ಬಣ್ಣದ ಲೋಕವೇ ಆಸರೆಯಾಗಿ ನಿಂತಿದೆ. ಪುಟ್ಟಗೌರಿ ಧಾರವಾಹಿ ಖ್ಯಾತಿಯ ಅಜ್ಜಮ್ಮ ಅಂದರೆ ಚಂದ್ರಕಲಾ ಮೋಹನ್ ಇವರ ಜೀವನದ ರೋಲ್ ಮಾಡೆಲ್ ಆಗಿದ್ದು. ಇವರು ಕೂಡಾ ‘ಅವಳು’, ‘ಇಂತಿ ನಿನ್ನ ಪ್ರೀತಿಯ’, ‘ಶಾಂತA ಪಾಪಂ’, ‘ಅಣ್ಣಯ್ಯ’, ‘ಕಿನ್ನರಿ’, ‘ಕಮಲಿ’, ‘ಪತ್ತೆಧಾರಿ ಪ್ರತಿಭಾ’, ‘ಮಂಗಳಗೌರಿ ಮದುವೆ’, ‘ಅರಮನೆ ಗಿಳಿ’, ‘ಸುಂದರಿ’, ‘ನಾಗಿಣಿ-2’ ಪುಟ್ಟಕ್ಕನ ಮಕ್ಕಳು, ನೀನಾದೆನಾ ಸೇರಿದಂತೆ ತೆಲುಗು ಧಾರವಾಹಿಗಳಲ್ಲೂ ನಟಿಸಿದ್ದಾರೆ. ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟ ಪಡುವ ಭ್ಯವ್ಯಾಗೆ ಅತೀ ಹೆಚ್ಚು ವಿಲನ್ ಪಾತ್ರಗಳೇ ಸಿಕ್ಕಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇವಲ ಕಿರುತೆರೆಗಳಲ್ಲಿ ಮಾತ್ರವಲ್ಲದೇ ಸ್ಯಾಂಡಲ್ ವುಡ್ ಹಾಗೂ ಕೋಸ್ಟಲ್ ವುಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕನ್ನಡದ ತೋತಾಪುರಿ, ಹೆಜ್ಜಾರು, ಜಿಗರ್, ತುಳುವಿನ ನೆತ್ತೆರೆಕೆರೆ, ದಸ್ಕತ್ ಮೂವಿಯಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ತುಳುವಿನ ದಸ್ಕಲತ್ ಮೂವಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದೆ. ಇನ್ನು ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ನಿರ್ದೇಶನದ ನೆತ್ತರಕೆರೆ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಭವ್ಯ ಅಭಿನಯಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ.

ಬಡ ಕುಟುಂಬದಿAದ ಬಂದಿರುವ ಭವ್ಯಾ ಸಣ್ಣ ವಯಸ್ಸಿನಲ್ಲೇ ತನ್ನ ಪುಟ್ಟ ಸಂಸಾರದ ಜವಾಬ್ದಾರಿ ಹೊತ್ತು ಹಲವು ಕನಸು ಕಂಡಿದ್ದಾರೆ. ಇವರ ಕನಸು ನನಸಾಗಿ ನಟನಾ ಲೋಕದಲ್ಲಿ ಇವರಿಗೆ ಹೆಚ್ಚು ಅವಕಾಶಗಳು ಸಿಕ್ಕು ಮುಂದಿನ ಜೀವನ ಉಜ್ವಲವಾಗಲಿ ಎಂಬ ಹಾರೈಕೆ ನಮ್ಮದು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ