ವಾಮದಪದವು ಪ್ರೇರಣಾ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ 3 ತಿಂಗಳ ಉಚಿತ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮ – ಕಹಳೆ ನ್ಯೂಸ್

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ವಾಮದಪದವು ಪ್ರೇರಣಾ ಜ್ಞಾನವಿಕಾಸ ಕೇಂದ್ರದಲ್ಲಿ ನಡೆದ 3 ತಿಂಗಳ ಉಚಿತ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪುಂಜಾಲಕಟ್ಟೆ ವಲಯ ಜನಜಾಗೃತಿ ವೇದಿಕೆ ಸದಸ್ಯರಾದ ಹರಿಂದ್ರ ಪೈ ಮಾತನಾಡಿ ಉಚಿತ ಹೊಲಿಗೆ ತರಬೇತಿಯನ್ನು ಮಹಿಳೆಯರ ಏಳಿಗಾಗಿ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನೀಡಿದ್ದು ಸ್ವಲಂಬಿ ಜೀವನವನ್ನು ನಡೆಸಲು ಸಹಕಾರಿಯಾಗಿದೆ ಅಂದರು ತಾಲ್ಲೂಕು ಯೋಜನಾಧಿಕಾರೀ ಜಯಾನಂದ ಪಿ,ಜನಜಗೃತಿ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ, ಸಿ ಆರ್ ಪಿ ಚೇತನ, ಒಕ್ಕಟ ಅಧ್ಯಕ್ಷರ ಅನಿತಾ ಪ್ರಭು, ಪಂಚಾಯತ್ ಉಪಾಧ್ಯಕ್ಷರಾದ ಜಯಂತಿ, ಹೊಲಿಗೆ ತರಬೇತು ಶಿಕ್ಷಕಿ ಪವಿತ್ರ, ಗೋಪಾಲ ಕೃಷ್ಣ ಚೌಟ, ಅನಂದ ಆಚಾರ್ಯ ಸೇವಾಪ್ರತಿನಿಧಿಗಳಾದ ಮೋಹನ್ ದಾಸ್ ಗಟ್ಟಿ ಹಾಗೂ ಹೇಮಲತಾ, ಪ್ರೇರಣಾ ಹಾಗೂ ನೇಸರ ಜ್ಞಾನವಿಕಾಸ ಕೇಂದ್ರ ದ ಸದಸ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತೃಶ್ರೀ ಸ್ವ ಸಹಾಯ ಸಂಘದ ಉದ್ಘಾಟನೆ ಮಾಡಿ ಯೋಜನಾಧಿಕಾರಿ ಹಾಗೂ ವೇದಿಕೆಯಲ್ಲಿರುವ ಗಣ್ಯರು ಧಾಖಲಾತಿ ಪುಸ್ತಕವನ್ನು ಹಸ್ತಾಂತರ ಮಾಡಿದರು
ಹೊಲಿಗೆ ತರಬೇತಿ ಪಡೆದ ಶ್ರೀ ನಿಧಿ, ಕವಿತಾ ಸುಮಿತ್ರ ಅನಿಸಿಕೆ ವೆಕ್ತಿ ಪಡಿಸಿದರು ಹೊಲಿಗೆ ತರಬೇತಿ ಪಡೆದ ಸದಸ್ಯರು ಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಶ್ರೀ ನಿಧಿ ಚೈತ್ರ ಪ್ರಾರ್ಥಿಸಿ, ಜ್ಞಾನವಿಕಾಸ ತಾಲೂಕ್ ಸಮನ್ವಯಧಿಕಾರಿ ಶ್ರುತಿ ಸ್ವಾಗತಿಸಿ, ಕೇಂದ್ರದ ಸಂಯೋಜಕಿ ಗುಣವತಿ ವಂದಿಸಿದರು. ಶಿವರಾಜ್ ಗಟ್ಟಿ ಕಾರ್ಯಕ್ರಮ ನಿರೂಪಿಸಿದರು.