ಮಾ.18 ರಿಂದ ಮಾ.20ರ ವರೆಗೆ ಸಾರ್ಯಬೀಡು ಮನೆಯ ಸಾನಿಧ್ಯದಲ್ಲಿ ಕುಟುಂಬದ ರಾಜನ್ ದೈವ ಧೂಮಾವತಿ ಧರ್ಮದೈವ ಪಂಜುರ್ಲಿ, ಗ್ರಾಮದೈವ ಪಿಲಿಭೂತ ಮತ್ತು ಪರಿವಾರ ದೈವಗಳ ನೇಮೋತ್ಸವ-ಕಹಳೆ ನ್ಯೂಸ್

ಪುತ್ತೂರು:ಮಾ.18-03-2025 ರಿಂದ 20-03-2025 ರ ವರೆಗೆ ಸಾರ್ಯಬೀಡು ಮನೆಯ ಸಾನಿಧ್ಯದಲ್ಲಿ ಕುಟುಂಬದ ರಾಜನ್ ದೈವ ಧೂಮಾವತಿ ಧರ್ಮದೈವ ಪಂಜುರ್ಲಿ, ಗ್ರಾಮದೈವ ಪಿಲಿಭೂತ ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿರುವುದು.
ಮಾ.18 ರಂದು ಬೆಳಗ್ಗೆ 8.ಗಂ.ಗೆ ಗಣಪತಿ ಹೋಮ, ಬಳಿಕ 11 ಗಂಟೆಗೆ ನಾಗ ತಂಬಿಲ ಸೇವೆ, ಅದೇ ದಿವಸ ಸಂಜೆ 6.ಗಂಟೆಗೆ ದುರ್ಗಾ ಪೂಜೆ ನಂತರ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ.19 ರಂದು ಬೆಳಿಗ್ಗೆ 8ಗಂಟೆ ಗೆ.ಸಾರ್ಯ ಶ್ರೀಲಕ್ಷಿö್ಮÃವೆಂಕಟರಮಣ ಮಠದಿಂದ ಮುದ್ರೆ ತರುವುದು , ಬಳಿಕ ತುಳಸೀ ಪೂಜೆ ಮತ್ತು ಬೆ.10 ಗಂಟೆಗೆ ಶ್ರೀ ಶ್ರೀಲಕ್ಷ್ಮೀವೆಂಕಟರಮಣ ದೇವರ ಹರಿ ಸೇವೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಅದೇ ದಿವಸ ಸಂಜೆ 3ಗಂಟೆಗೆ ಸಾರ್ಯಬೀಡು ತರವಾಡು ಮನೆಯಲ್ಲಿ ಕುಟುಂಬದ ಕೂಡುವಿಕೆ ಬಳಿಕ ಸಂಜೆ 6 ಗಂಟೆಗೆ ಬಿಳಿಯೂರುಗುತ್ತಿನಿಂದ ಪಿಲಿಭೂತದ ಭಂಡಾರ ತರುವುದು. ರಾತ್ರಿ 7 ಗಂಟೆಗೆ ಸಾರ್ಯಬೀಡು ತರವಾಡು ಮನೆಗೆ ಆಗಮನ ಬಳಿಕ ಅನ್ನಸಂತರ್ಪಣೆ ,ರಾತ್ರಿ 9. ಗಂಟೆಗೆ ಪಿಲಿಭೂತ ನೇಮೋತ್ಸವ ನಂತರ ರಾತ್ರಿ 1 ಗಂಟೆಗೆ ವರ್ಣರ ಪಂಜುರ್ಲಿ ದೈವ ನೇಮೋತ್ಸವ ಬಳಿಕ ಬ್ರಾಹ್ಮಿ 3.ಗಂಟೆಗೆ ಧರ್ಮದೈವ ಪಂಜುರ್ಲಿ ನೇಮೋತ್ಸವ ನಡೆಯಲಿರುವುದು.
ಮಾ. 20 ರಂದು ಬೆಳಿಗ್ಗೆ 9ಗಂಟೆಗೆ ಕುಟುಂಬದ ರಾಜನ್‌ದೈವ ಧೂಮಾವತಿ ದೈವದ ನೇಮೋತ್ಸವ ನಂತರ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ 6.ಗಂಟೆಗೆ ಕಲ್ಲುರ್ಟಿ ಕೊರತಿ ದೈವಗಳ ನೇಮೋತ್ಸವ ನಂತರ ಅನ್ನಸಂತರ್ಪಣೆ ನಡೆಯಲಿರುವುದು.