ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು:ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಬಿಜೆಪಿ ವತಿಯಿಂದ ದೇಶಾದ್ಯಂತ ವಾಜಪೇಯಿಯವರು ಜೀವಿತಾವಧಿಯಲ್ಲಿ ಭೇಟಿ ಮಾಡಿದ್ದ ಬಿಜೆಪಿಯ ಹಿರಿಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದ್ದು, ಮಂಗಳೂರು ನಗರ ದಕ್ಷಿಣ ಬಿಜೆಪಿ ವತಿಯಿಂದ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ನವಾಯತ್ ಬಂದರು ವಾರ್ಡಿನ ದಿ. ವೆಂಕಟೇಶ ಕಾಮತ್ ರವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರನ್ನು ಗೌರವಿಸಲಾಯಿತು.
ನಂತರ ಮಾತನಾಡಿದ ಶಾಸಕರು, ಜನಸಂಘದ ಕಾಲದಿಂದಲೂ ಇವರ ಕುಟುಂಬ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದು ದೇಶ ಕಂಡ ಮಹಾನ್ ನಾಯಕ ವಾಜಪೇಯಿಯವರು ದಿ. ವೆಂಕಟೇಶ ಕಾಮತ್ ರವರೊಂದಿಗೆ ಬಹಳ ಆತ್ಮೀಯ ಸ್ನೇಹ ಸಂಬಂಧ ಹೊಂದಿದ್ದರು. ಇಂದು ಅವರು ನಮ್ಮೊಂದಿಗೆ ಇಲ್ಲವಾಗಿದ್ದು ಈ ಕ್ಷೇತ್ರದಲ್ಲಿ ಪಕ್ಷ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಎಂದಿಗೂ ಮರೆಯಲಾಗದ್ದು ಎಂದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ, ಪ್ರೇಮಾನಂದ ಶೆಟ್ಟಿ, ಯತೀಶ್ ಅರ್ವರ್, ಪೂರ್ಣಿಮಾ, ಶಕೀಲಾ ಕಾವಾ, ಸತೀಶ್ ಪ್ರಭು, ಅಶ್ವಿತ್ ಕೊಟ್ಟಾರಿ, ಗೌತಮ್ ಕೋಡಿಕಲ್, ಪೂರ್ಣಿಮಾ ರಾವ್, ರವಿಶಂಕರ್ ಮಿಜಾರ್, ಭಾಸ್ಕರ ಚಂದ್ರ ಶೆಟ್ಟಿ, ನಿತಿನ್ ಕುಮಾರ್, ರಾಜಗೋಪಾಲ್ ರೈ, ನಾರಾಯಣ ಗಟ್ಟಿ, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು