Wednesday, March 19, 2025
ಚಿಕ್ಕಮಂಗಳೂರುಜಿಲ್ಲೆಸುದ್ದಿ

ತುಂಗಾ ನದಿ ತೀರದಲ್ಲಿ ನಡೆಯುತ್ತಿದೆ ಅಕ್ರಮ ಮರಳು ದಂಧೆ. DYSP, PSI ಭೇಟಿ ಪರಿಶೀಲನೆ-ಕಹಳೆ ನ್ಯೂಸ್

ಚಿಕ್ಕಮಗಳೂರು: ಅಕ್ರಮ ಮರಳು ದಂಧೆ ನಡೆಯುತ್ತಿರುವ ಘಟನೆ ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ ತುಂಗಾ ನದಿ ತಟದಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು ವಿಚಾರ ಗೊತ್ತುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ, ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರಾತ್ರಿ ವೇಳೆ ಮಾತ್ರ ಕಾರ್ಯಾಚರಣೆಗಿಳಿಯಲಿರೋ ದಂಧೆಕೋರರು, ನಿತ್ಯ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ನಲ್ಲಿ ಹತ್ತಾರು ಲೋಡ್ ಅಮರಳನ್ನು ಸಾಗಾಟ ಮಾಡಿ ಸರ್ಕಾರಿ ಜಾಗದಲ್ಲಿ ಶೇಖರಿಸಿ ಬಳಿಕ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಹಿತಿಗೆ ಸ್ಥಳೀಯರ ಬಳಕೆ:
ಪಕ್ಷಾತೀತವಾಗಿ ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಮರಳು ದಂಧೆ ನಡೆಸಲಾಗುತ್ತಿದು, ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡಲಾಗುತ್ತಿದ್ದು ಯಾರಾದರೂ ಬಂದರೆ ಈ ಕುರಿತು ಮಾಹಿತಿ ನೀಡಲು ಇಲ್ಲಿನ ಸ್ಥಳೀಯ ಯುವಕರನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ ಅದರಂತೆ ರಸ್ತೆಯುದ್ದಕ್ಕೂ ಅಲ್ಲಲ್ಲಿ ಇಬ್ಬರು ಹುಡುಗರನ್ನ ನಿಲ್ಲಿಸಿ ದಂಧೆಕೋರರು ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಸ್ತೆಗಳಲ್ಲಿ ಹೊಂಡ ನಿರ್ಮಾಣ:
ಅಕ್ರಮವಾಗಿ ಮರಳು ಸಾಗಾಟ ನಡೆಸಲು ನದಿ ಬಳಿಗೆ ಹೋಗುವ ಮಾರ್ಗಗಳಲ್ಲಿ ಪೊಲೀಸರು ಹೊಂಡಗಳನ್ನು ನಿರ್ಮಿಸಿದ್ದು ಇದರಿಂದ ಅಕ್ರಮ ಮರಳುಗಾರಿಕೆ ತಡೆಗೆ ಯತ್ನಿಸಿದ್ದು ದಂಧೆಕೋರರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ