Thursday, April 17, 2025
ಅಂಕಣದಕ್ಷಿಣ ಕನ್ನಡಬೆಂಗಳೂರುಮಂಗಳೂರುರಾಜ್ಯಸುದ್ದಿ

ಬಣ್ಣದ ಕುಂಚದಲ್ಲಿ ಶಬರಿ ಗಾಣಿಗ ಸಾಧನೆ ಚಿತ್ರ ; ಕ್ಯಾನ್ವಾಸ್ ಮೇಲೆ ನಿಮಿಷದಲ್ಲಿ ಶಬರಿ ಪೈಂಟಿಂಗ್ ಕಮಾಲ್..!! – ಕಹಳೆ ನ್ಯೂಸ್

ಆಕೆ ಕಣ್ಣು ಮುಚ್ಚಿ ಕಣ್ಣು ಬಿಡೋದ್ರೊಳಗಡೆ ಅದ್ಭುತ ಕಲಾಕೃತಿಯನ್ನ ಬಿಡಿಸೋ ಜಾಣೆ, ಹಾಡೋಕೆ ಶುರು ಮಾಡಿದರೆ ಕೋಗಿಲೆ ಸ್ವರದ ಇಂಪಾದ ಸಂಗೀತ. ಕ್ಯಾನ್ವಾಸ್ ಹಿಡಿದು ಕುಳಿತ್ರೆ ಕುತೂಹಲ ಕೆರಳಿಸುವ ಅದ್ಭುತವಾದ ಚಿತ್ರ. ಕರ್ನಾಟಕದ ಅತಿವೇಗದ ಚಿತ್ರಗಾರ್ತಿ ಎಂದೇ ಪ್ರಸಿದ್ಧಿ ಪಡೆದ ಈಕೆಯ ಹೆಸರು ಶಬರಿ ಗಾಣಿಗ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು..ಮೂರೇ ನಿಮಿಷದಲ್ಲಿ ಸುಂದರ ಚಿತ್ರ ಅರಳಿಸುವ ಚಾಕಚಕ್ಯತೆ ಇರುವ ಈಕೆ ಮೂಲತಃ ಮಂಗಳೂರಿನವರು. ಇಂಜಿನಿಯರ್ ಯೋಗೀಶ್ ಕುಮಾರ್ ಹಾಗೂ ಶಶಿಕಲಾ ದಂಪತಿ ಪುತ್ರಿ. ಎಳೆ ವಯಸ್ಸಿನಲ್ಲೇ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಈಕೆ ವೀಣಾ ಭಂಡಾರಿ, ಶಮಿರ್ ಆಲಿ, ಚಂದ್ರಾಡ್ಕರ್ ಅವರಿಂದ ಚಿತ್ರಕಲೆಯಲ್ಲಿ ತರಬೇತಿ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಯಿಲ್ ಕಲರ್, ವಾಟರ್ ಕಲರ್, ಆಯಿಲ್ ಪೇಂಟಿಂಗ್, ಗ್ಲಾಸ್ ಪೈಂಟಿಂಗ್, ಸೆರೆಮಿಕ್ ಪೈಂಟಿಂಗ್, ಗ್ಲೋ ಆರ್ಟ್ ಹೀಗೆ ವಿಭಿನ್ನ ಮಾದರಿಯ ಚಿತ್ರಕಲೆ ಈಕೆಗೆ ಕರಗತ. ಡಾ. ರಾಜ್ ಕುಮಾರ್, ಅಬ್ದುಲ್ ಕಲಾಂ, ಡಾ ಡಿ ವೀರೇಂದ್ರ ಹೆಗ್ಗಡೆ, ಚಿತ್ರನಟಿ ಕಲ್ಪನಾ, ಮದರ್ ತೆರೆಸಾ, ವಿರಾಟ್ ಕೊಹ್ಲಿ ಹಾಗೂ ಇನ್ನು ಹಲವು ಗಣ್ಯರ ಚಿತ್ರ ಬಿಡಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಕಲಾವಿದೆ. ಈಕೆ ಕೇವಲ ಚಿತ್ರಕಲಾವಿದೆಯಷ್ಟೇ ಅಲ್ಲ ಸುಮಧುರ ಕಂಠದ ಹಾಡುಗಾರ್ತಿಯೂ ಹೌದು. ಹಲವಾರು ಚಲನಚಿತ್ರಗಳು ಹಾಗೂ ಆಲ್ಬಂ ಸಾಂಗ್‍ಗಳಿಗೆ ಹಿನ್ನೆಲೆ ಗಾಯಕಿಯಾಗಿಯೂ ಹಾಡಿದ್ದಾರೆ.

 

ಜೊತೆಗೆ ಹಲವು ಸಿನಿಮಾಗಳಿಗೆ ವಾಯ್ಸ್ ಡಬ್ಬಿಂಗ್ ಕೂಡಾ ನೀಡಿದ್ದಾರೆ. ಚಿತ್ರಕಲೆ, ಸಂಗೀತ, ಕ್ರಾಫ್ಟ್, ಡ್ಯಾನ್ಸ್, ಶಿಕ್ಷಣ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು 2000ಕ್ಕೂ ಹೆಚ್ಚು ಬಹುಮಾನ ಪಡೆದಿರುವ ಉದಯೋನ್ಮುಖ ಪ್ರತಿಭೆ, ಜೊತೆಗೆ ಕಥಕ್ ಹಾಗೂ ಭರತನಾಟ್ಯ ಕಲಿತಿದ್ದು, ಗಿಟಾರ್, ಕೀಬೋರ್ಡ್ ಕೂಡಾ ನುಡಿಸುತ್ತಾರೆ.

ಚಿತ್ರಕಲೆಯಲ್ಲಿ ಈವರೆಗೆ 2 ಸಾವಿರಕ್ಕೂ ಅಧಿಕ ಬಹುಮಾನ ಪಡೆದಿದ್ದು, ರಾಜ್ಯದ ವಿವಿಧ ಕಡೆ ಮಾತ್ರವಲ್ಲದೇ ತಮಿಳುನಾಡು, ಗೋವಾ, ಕೇರಳ, ಮುಂಬೈ ಸೇರಿದಂತೆ ಮತ್ತಿತರ ಪ್ರತಿಷ್ಟಿತ ವೇದಿಕೆಗಳಲ್ಲಿ ಶೋ ನೀಡಿ ಸೈ ಎನಿಸಿಕೊಂಡಿದ್ದಾರೆ. ಕರ್ನಾಟಕ ಕಲಾಶ್ರೀ, ಸಿದ್ಧಿಶ್ರೀ, ಕನ್ನಡ ರಾಜ್ಯೋತ್ಸವ ಸಾಧಕ, ಯುವ ಸಾಧಕಿ, ಮಲ್ಲಿಕಾ, ಸಾಧನಾಶ್ರೀ, ಸುವರ್ಣ ಮಹಿಳಾ ಸಾಧಕಿ, ಕಲ್ಕೂರ, ಸ್ವಸ್ತಿಕ್ ಸೇರಿದಂತೆ ಅನೇಕ ಪ್ರಶಸ್ತಿಗಳು ಕೂಡಾ ಇವರನ್ನು ಅರಸಿ ಬಂದಿದೆ.

ಒಟ್ಟಿನಲ್ಲಿ ಕರ್ನಾಟಕದ ಅತಿವೇಗದ ಚಿತ್ರಗಾರ್ತಿ ಎಂದೇ ಪ್ರಸಿದ್ಧಿ ಪಡೆದಿರುವ ಶಬರಿ ಗಾಣಿಗ ಅವರು ವಿಶ್ವದಾದ್ಯಂತ ತಮ್ಮ ಹೆಸರನ್ನು ಅಚ್ಚೊತ್ತಿ ಕಂಡ ಕನಸೆಲ್ಲಾ ನನಸಾಗಲಿ ಎಂಬುವುದು ನಮ್ಮ ಹಾರೈಕೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ