60ನೇ ಬೆಂಗ್ರೆ ವಾರ್ಡಿನ ತಣ್ಣೀರುಬಾವಿ ಬೆಂಗ್ರೆ ಮಹಾಜನ ಸಂಘದ ಬದಿಯಿಂದ ಸಮುದಾಯ ಭವನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ-ಕಹಳೆ ನ್ಯೂಸ್

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ತಣ್ಣೀರುಬಾವಿ ಬೆಂಗ್ರೆ ಮಹಾಜನ ಸಂಘದ ಬದಿಯಿಂದ ಸಮುದಾಯ ಭವನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ರವರು ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ಇಲ್ಲಿ ಆಗಬೇಕಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸ್ಥಳೀಯ ಪ್ರಮುಖರು ಗಮನಕ್ಕೆ ತಂದ ನಂತರ ಅಗತ್ಯ ಅನುದಾನವನ್ನು ಹೊಂದಿಸಿಕೊಂಡು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು ಶೀಘ್ರದಲ್ಲಿ ಪೂರ್ಣಗೊಳ್ಳುವ ಭರವಸೆ ಇದೆ ಎಂದರು.
ರಮೇಶ್ ಹೆಗ್ಡೆ, ಪ್ರವೀಣ್ ನಿಡ್ಡೇಲ್, ಗಂಗಾಧರ ಸಾಲ್ಯಾನ್, ಲೋಕೇಶ್ ಸುವರ್ಣ, ಮೀರಾ ಕರ್ಕೇರ, ಚೇತನ್ ಬೆಂಗ್ರೆ, ನರಸಿಂಹ ಶ್ರೀಯಾನ್, ಭಾಸ್ಕರ್ ಚಂದ್ರ ಶೆಟ್ಟಿ, ಯೋಗೀಶ್ ಕಾಂಚನ್, ಮೋಹನ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಕೇಶವ ಗುರಿಕಾರ, ಹರಿಶ್ಚಂದ್ರ ಪುತ್ರನ್, ಸುರೇಂದ್ರ ಪಾಂಗಳ್, ಸುಂದರ ಸಾಲ್ಯಾನ್, ಪುಂಡಲಿಕ ಮೆಂಡನ್, ಮನೋಜ್ ಬೆಂಗ್ರೆ, ಸುಕೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.