Sunday, March 23, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇಪು ವಲಯದ ಮಾಣಿಲದಲ್ಲಿ ಟೈಲರಿಂಗ್ ತರಬೇತಿ ಸಮಾರೋಪ ಸಮಾರಂಭ-ಕಹಳೆ ನ್ಯೂಸ್

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ವಿಟ್ಲ ತಾಲೂಕಿನ ಕೇಪು ವಲಯದ ಮಾನಿಲ ವ್ಯವಸಾಯ ಸೇವಾ ಸಹಕಾರ ಭವನದಲ್ಲಿ ಕಳೆದ 3 ತಿಂಗಳಿನಿಂದ ಹೊಲಿಗೆ ತರಬೇತಿಯನ್ನು ಆರಂಭಿಸಿದ್ದು ಈ ತರಬೇತಿಯಲ್ಲಿ 20 ಮಂದಿ ಸದಸ್ಯರು ಪ್ರಯೋಜನವನ್ನು ಪಡೆದಿದ್ದು, ಬೆರಿಪದವು ಹೊಲಿಗೆ ಕೇಂದ್ರದ ಶಿಕ್ಷಕರಾದ ಶ್ರೀಮತಿ ಸರೋಜಿನಿ ಇವರು ತರಬೇತಿಯನ್ನು ನೀಡಿರುತ್ತಾರೆ.

ಈ ದಿನ ಹೊಲಿಗೆ ತರಬೇತಿಯ ಸಮಾರೋಪ ಕಾರ್ಯಕ್ರಮವು ಮಾನಿಲ ಒಕ್ಕೂಟದ ಅಧ್ಯಕ್ಷರಾದ ಕೃಷ್ಣ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಧರ ಬಾಳೆಕಲ್ಲು ನೇರವೆರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಲೂಕಿನ ಯೋಜನಾಧಿಕಾರಿಯವರಾದ ರಮೇಶ್ ಸರ್ ಯಾವುದೇ ವಿದ್ಯೆ ಕಲಿಯುವುದಕ್ಕೆ ವಯಸ್ಸಿನ ಅಂತರವಿಲ್ಲ ಮನಸಿದ್ದರೆ ಮಾರ್ಗ ಎಂಬಂತೆ ಮಹಿಳೆಯು ಸ್ವಾವಲಂಬಿಯಾಗಿ ಬದುಕಲು ಇದು ಪ್ರಾರಂಭವಾಗಿದೆ ಎಂದು ಶುಭ ಹಾರೈಸಿದರು. ಪಂಚಾಯತ್ ಸದಸ್ಯರಾದ ರಾಜೇಶ್ ಬಾಳೆಕಲ್ಲು ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಬೋಳಿಜಡ್ಕ ಸಂಘದ ಸದಸ್ಯರಾದ ನವೀನ್ ಕುಮಾರ್ ರವರ ಅಣ್ಣ ರವಿಚಂದ್ರ ರವರಿಗೆ ಕ್ಷೇತ್ರದಿಂದ ಮಂಜೂರಾದ ಕ್ರಿಟಿಕಲ್ ಫಂಡ್ ನ ಮಂಜೂರಾತಿ ಪತ್ರವನ್ನು ತಾಲ್ಲೂಕು ಯೋಜನಾಧಿಕಾರಿ ನೀಡಿದರು. ಟ್ರೈಲರಿಂಗ್ ತರಬೇತಿ ಪಡೆದುಕೊಂಡ ಸದಸ್ಯರು ಅನಿಸಿಕೆ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಧರ್ಭ ವಲಯ ಮೇಲ್ವಿಚಾರಕರಾದ ಜಗದೀಶ್, ಟೈಲರಿಂಗ್ ಶಿಕ್ಷಕಿ, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ, ಜ್ಞಾನ ವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಸದಸ್ಯರು , ಸೇವಾಪ್ರತಿನಿಧಿ ಗುಲಾಬಿ ಉಪಸ್ಥಿತರಿದ್ದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ