ನಾರಾಯಣಗುರುಗಳು ಧಾರ್ಮಿಕ ಶೋಷಣೆಯ ಬಲಿಷ್ಠ ಕೋಟೆಯನ್ನು ಸದ್ದಿಲ್ಲದೆ ಬೇಧಿಸಿದರು : ಸಂತೋಷ್ ಕುಮಾರ್- ಕಹಳೆ ನ್ಯೂಸ್

ಬಂಟ್ವಾಳ : ಸಹಸ್ರಾರು ವರ್ಷಗಳಿಂದ ದೇವಸ್ಥಾನಗಳಿಗೆ ಪ್ರವೇಶ ನೀಡದೆ ಮೂಢನಂಬಿಕೆ, ಕಂದಾಚಾರದ ಮೂಲಕ ಧಾರ್ಮಿಕ ಶೋಷಣೆ ಮಾಡುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳು ಪರಂಪರಾಗತವಾಗಿ ರಕ್ಷಿಸಿಕೊಂಡು ಬಂದ ಬಲಿಷ್ಠವಾದ ಕೋಟೆಯನ್ನು ನಾರಾಯಣಗುರುಗಳು ಸದ್ದಿಲ್ಲದೆ ಭೇದಿಸಿದರು ಎಂದು ಪೂಂಜಲಕಟ್ಟೆ ನಾರಾಯಣ ಗುರು ವಸತಿ ಶಾಲೆಯ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ತಿಳಿಸಿದರು.
ಅವರು ಯುವವಾಹಿನಿ ಬಂಟ್ಟಾಳ ಘಟಕದ ಸಾಂಸ್ಕೃತಿಕ ನಿರ್ದೇಶಕ ಧನುಷ್ ಮದ್ವ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 38 ಮಾಲಿಕೆಯಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಗುರು ದತ್ತಸಾಯಿ, ಆದಿಶಕ್ತಿ ದುರ್ಗಾಪರಮೇಶ್ವರಿ ಹಾಗೂ ಪರಿವಾರ ಶಕ್ತಿಗಳ ಕ್ಷೇತ್ರ ಬಸವನಗುಡಿ ಪೂಂಜಾಲಕಟ್ಟೆಯ ಧರ್ಮದರ್ಶಿ ಕೃಷ್ಣಪ್ರಸಾದ್ ಶಾಂತಿ, ಯುವವಾಹಿನಿ ಬಂಟ್ವಾಳ ಘಟಕದ ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಮಧುಸೂದನ್ ಮಧ್ವ, ಕಿರಣ್ ಪೂಂಜರಕೋಡಿ,ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಅರುಣ್ ಮಹಾಕಾಳಿಬೆಟ್ಟು, ರಾಜೇಶ್ ಸುವರ್ಣ, ಸಂಘಟನ ಕಾರ್ಯದರ್ಶಿ ಉದಯ್ ಮೆನಾಡ್,ಸದಸ್ಯರಾದ ನಾಗೇಶ್ ಏಲಬೆ, ಯಶೋಧರ ಕಡಂಬಲ್ಕೆ, ಸುಲತಾ ಸಾಲ್ಯಾನ್, ಹರೀಶ್ ಅಜೆಕಲಾ, ಪ್ರಶಾಂತ್ ಏರಮಲೆ, ಜಗದೀಶ್ ತುಂಬೆ, ಸುದೀಪ್ ಸಾಲ್ಯಾನ್,ಯತೀಶ್ ಬೊಳ್ಳಾಯಿ,ಮತ್ತಿತರರು ಉಪಸ್ಥಿತರಿದ್ದರು.
ಹಾರ್ಮೋನಿಯಂ ನಲ್ಲಿ ರಾಜೇಶ್ ಅಮ್ಟೂರು ಮತ್ತು ತಬಲಾದಲ್ಲಿ ಅರ್ಜುನ್ ಅರಳ ಸಹಕರಿಸಿದರು
ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.