Monday, March 24, 2025
ಅಂಕಣದಕ್ಷಿಣ ಕನ್ನಡಪುತ್ತೂರುಮಂಗಳೂರುಯಕ್ಷಗಾನ / ಕಲೆಸುದ್ದಿ

ಸ್ಯಾಕ್ಸೋಫೋನ್ ಮಾಂತ್ರಿಕ ಎಂ.ವೇಣುಗೋಪಾಲ್ ಪುತ್ತೂರು – ಕಹಳೆ ನ್ಯೂಸ್

ಎಂ.ವೇಣುಗೋಪಾಲ್ ಪುತ್ತೂರು. ಹೆಸರಾಂತ ಸ್ಯಾಕ್ಸೋಫೋನ್ ವಾದಕರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾವಗಿರುವ ಇವರು, 7ನೇ ತರಗತಿಯಲ್ಲಿರುವಾಗಲೇ ಸ್ಯಾಕ್ಸೋಫೋನ್ ಕಚೇರಿ ನೀಡಿ ಎಲ್ಲರ ಗಮನ ಸೆಳೆದ ವಾದಕ.

ಜಾಹೀರಾತು
ಜಾಹೀರಾತು
ಜಾಹೀರಾತು

ತಂದೆ ಸ್ಯಾಕ್ಸೋಫೋನ್ ಮತ್ತು ಜಾನಪದ ನಾಗಸ್ವರ ಕಲಾವಿದ ಉಮೇಶ್ ದೇವಾಡಿಗ. ತಾಯಿ ಸರಸ್ವತಿ. ಪತ್ನಿ ಹರ್ಷಿತ ದೇವಾಡಿಗ ಹಾಗೂ ಮಗು ತಿಯಾಂಶಿ ವಿ ದೇವಾಡಿಗ ಒಳಗೊಂಡ ಸುಂದರ ಸಂಸಾರ ಇವರದ್ದು. ಪ್ರಾಥಾಮಿಕ ಶಿಕ್ಷಣವನ್ನು ಪುತ್ತೂರಿನ ಕೃಷ್ಣನಗರ ಶಾಲೆ, ಪ್ರೌಢ ಶಿಕ್ಷಣವನ್ನು ಸರಕಾರಿ ಜೂನಿಯರ್ ಕಾಲೇಜು ಕೊಂಬೆಟ್ಟು ಹಾಗೂ ಪದವಿಯನ್ನು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಮುಗಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತ ಸೀನಿಯರ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇವರು ಪ್ರತಿ ವರ್ಷ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ವಿಷು ದಿವಸದ ಉತ್ಸವದಂದು ಸ್ಯಾಕ್ಸೋಫೋನ್ ಕಲಾ ಸೇವೆ ನೀಡುತ್ತಾ ಬಂದಿದ್ದಾರೆ. ಇನ್ನು ಬಲ್ನಾಡು ಶ್ರೀ ಉಳ್ಳಾಲ್ತಿ ದೈವಸ್ಥಾನ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬೊಳುವಾರು ಶ್ರೀ ದುರ್ಗಾಪರಮೇಶ್ವರಿ-ಮಲರಾಯ ದೈವಸ್ಥಾನ, ಆತೂರು ಶ್ರೀ ಸದಾಶಿವ ದೇವಸ್ಥಾನ, ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನ, ಬೈಲಾಡಿ ಶ್ರೀ ಶಾಸ್ತಾರ ದೇವಸ್ಥಾನ, ಮರೀಲು ಶ್ರೀ ಪಂಚಮುಖಿ ಗಾಯತ್ರಿ ಗಣಪತಿ ಆಂಜನೇಯ ಕ್ಷೇತ್ರ, ನಾವೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಬನ್ನೂರು ಶಿವ ಪಾರ್ವತಿ ಭಜನಾ ಮಂದಿರ, ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಕುರಿಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಶ್ರೀ ದೇವತಾ ಸಮಿತಿ ವತಿಯಿಂದ ನಡೆಯುವ ಶ್ರೀ ಮಹಾಗಣೇಶೋತ್ಸವ ಮತ್ತು ಹಲವಾರು ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ.

ಇವರ ಕಲಾ ಸೇವೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪುತ್ತೂರು ತಾಲೂಕು ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕನ್ನಡ ಸಂಸ್ಕøತಿ ಇಲಾಖೆ ಮಡಿಕೇರಿ ಸಾಂಸ್ಕøತಿಕ ಸೌರಭ ಸನ್ಮಾನ, ಸ್ಪೂರ್ತಿ ಯುವಕ-ಯುವತಿ ಮಂಡಲ(ರಿ) ಬನ್ನೂರುನಲ್ಲಿ ಸನ್ಮಾನ, ಪುತ್ತೂರು ತಾಲೂಕು ಯುವಜನ ಒಕ್ಕೂಟದಲ್ಲಿ ಸನ್ಮಾನ, ಕನ್ನಡ ಸಾಹಿತ್ಯ ಸಂಭ್ರಮದಲ್ಲಿ ಸನ್ಮಾನ, ಕರ್ನಾಟಕ ರಾಜ್ಯ ದೇವಾಡಿಗರ ಸಂಘ(ರಿ) ಮಂಗಳೂರಿನಲ್ಲಿ ಸನ್ಮಾನ, ಶ್ರೀ ಏಕನಾಥೇಶ್ವರಿ ದೇವಸ್ಥಾನ ಬಾರ್ಕೂರಿನಲ್ಲಿ ಸನ್ಮಾನ, ಕಲಾಶ್ರಯ ದಾಸಕೋಡಿ ಕಲೋತ್ಸವದಲ್ಲಿ ಸನ್ಮಾನ, ದ.ಕ.ಜಿ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರಿನಲ್ಲಿ ಸನ್ಮಾನ, ಕದ್ರಿ ಸಂಗೀತ ಸೌರಭದಲ್ಲಿ ಕಚೇರಿ-ಸನ್ಮಾನ, 2023ರಲ್ಲಿ ರೋಟರಿ ಕ್ಲಬ್ ಪುತ್ತೂರಿನಲ್ಲಿ ಸನ್ಮಾನ, ಹೀಗೆ ಹಲವಾರು ಕಡೆಗಳಲ್ಲಿ ಸ್ಯಾಕ್ಸೋಫೋನ್ ಕಚೇರಿ ನಡೆಸಿ ಸನ್ಮಾನಗಳನ್ನು ಪಡೆದಿದ್ದಾರೆ.

ಇಷ್ಟೇ ಅಲ್ಲ ಕಲೆಯೊಂದಿಗೆ ಬೊಳುವಾರಿನಲ್ಲಿ ಶ್ರೀಮಹಾ ರೂಫಿಂಗ್ ಎಂಬ ಸ್ವಂತ ಉದ್ಯಮವನ್ನು ನಡೆಸುತ್ತಿದ್ದಾರೆ. ನಾಡಿನ ಹೆಸರಾಂತ ಕಲಾವಿದರಾದ ಕಲಾದೀಪ್ತಿ, ವಾದನ ಕಲಾನಿಧಿ, ಗೌರವ ಪುರಸ್ಕಾರಗಳನ್ನು ಪಡೆದ ವಿದ್ವಾನ್ ಕಾಂಚನ ಈಶ್ವರ್ ಭಟ್ ಇವರ ಬಳಿ ಕರ್ನಾಟಕ ಶಾಸ್ತ್ರೀಯ ವಾದ್ಯ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ವೇಣುಗೋಪಾಲ್ ಅವರು ಗಂಡುಕಲೆ ಯಕ್ಷಗಾನದಲ್ಲಿ ಆಸಕ್ತಿ ಇರುವ ಇವರು ತೆಂಕುತಿಟ್ಟಿನ ಯಕ್ಷಗಾನ ಕಲಾವಿದರಾದ ಸಿಡಿಲಮರಿ ಖ್ಯಾತಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ದಿ. ಶ್ರೀಧರ ಭಂಡಾರಿ ಪುತ್ತೂರು ಇವರ ಶಿಷ್ಯರೂ ಹೌದು..

ಕೊರೊನಾ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್‍ಗಳಿಗೆ ಕೃತಜ್ಞತೆ ಸಲ್ಲಿಸುವ ವಂದೇಮಾತರಂ ಎಂಬ ಕವರ್ ಸಾಂಗ್ ಮಾಡಿದ್ದಾರೆ. ಜೊತೆಗೆ ಹಲವಾರು ಕವರ್ ಸಾಂಗ್‍ಗಳಿಗೆ ಸ್ಯಾಕ್ಸೋಫೋನ್ ನುಡಿಸಿದ್ದಾರೆ. ಒಟ್ಟಿನಲ್ಲಿ ಇಷ್ಟೆಲ್ಲಾ ಹೆಸರು ಮಾಡಿರುವ ಎಂ.ವೇಣುಗೋಪಾಲ್ ಪುತ್ತೂರು ದೇಶ ವಿದೇಶಗಳಲ್ಲೂ ತಮ್ಮ ಸಾಧನೆ ಮೆರೆದು ಜಗತ್ ಪ್ರಖ್ಯಾತಿಯನ್ನು ಪಡೆಯಲಿ ಎಂಬುವುದು ನಮ್ಮ ಹಾರೈಕೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ