Tuesday, March 25, 2025
ಬೆಂಗಳೂರುವಾಣಿಜ್ಯಸುದ್ದಿ

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ನಂದಿನಿ : ಇ-ಕಾಮರ್ಸ್ ಡೆಲಿವರಿ ಆಪ್‌ಗಳ ಮೂಲಕ ದೋಸೆ-ಇಡ್ಲಿ ಹಿಟ್ಟು-ಕಹಳೆ ನ್ಯೂಸ್

ಸುಮಾರು 50 ವರ್ಷಗಳ ಇತಿಹಾಸವಿರುವ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಸಂಘ (ಕೆ.ಎಂ.ಎಫ್) ಭಾರತದ ಎರಡನೇ ಅತಿ ದೊಡ್ಡ ಹಾಲು ಒಕ್ಕೂಟವಾಗಿದೆ. ನಂದಿನಿ ಬ್ರ್ಯಾಂಡ್‌ ಕರ್ನಾಟಕದಲ್ಲಿ ಮಾತ್ರಲ್ಲದೇ ದೇಶದಾದ್ಯಂತ ಹಾಗೂ ಇತರೆ ರಾಜ್ಯಗಳಲ್ಲೂ ಜನಪ್ರಿಯವಾಗಿದೆ.

ಕನ್ನಡದ ಹೆಮ್ಮೆಯ ನಂದಿನಿ ಉತ್ತನ್ನಗಳು ಇತ್ತೀಚಿಗೆ ದೆಹಲಿ,ಉತ್ತರ ಪ್ರದೇಶಕ್ಕೆ ತನ್ನ ಸೇವೆಯನ್ನು ವಿಸ್ತರಮಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೀಗ ಮತ್ತೋಂದು ಹೆಜ್ಜೆ ಮುಂದಾಗಿ ಹೋಗಿ ತನ್ನ ಉತ್ತನ್ನಗಳನ್ನು ಡೆಲಿವರಿ ಮಾಡುವ ಆಪ್‌ಗಳು ಮೂಲಕ ಇ-ಕಾಮರ್ಸ್ ವೇದಿಕೆಯಲ್ಲಿ ಮಾರಾಟ ಮಾಡಲು ಹೊರಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಖಾಸಗಿ ಬ್ರ್ಯಾಂಡ್‌ಗಳಿಗೆ ಪೈಪೋಟಿ ನೀಡಲು ಕೆಎಂಎಫ್ ತನ್ನ ಮಾರಾಟವನ್ನು ಮತ್ತಷ್ಟು ವಿಸ್ತರಿಸಲು ಸಜ್ಜಾಗುತ್ತಿದೆ. ನಂದಿನಿ ಇನ್ಮುಂದೆ ಎಲ್ಲಾ ಚಿಲ್ಲರೆ ಮಳಿಗೆಗಳು, ಆಪ್‌ಗಳು, ಇ-ಕಾಮರ್ಸ್ ಗಳು ಮತ್ತು ಮಾಲ್‌ಗಳಲ್ಲಿ ಲಭ್ಯವಿರಲಿದೆ.

ಏ.1ರಿಂದಲ್ಲೇ ನಂದನಿ ಉತ್ತನ್ನಗಳು ಇ-ಕಾಮರ್ಸ್ ವೇದಿಕೆಗಳಾದ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌, ಬ್ಲಿಂಕಿಟ್, ಬಿಗ್‌ಬಾಸ್ಕೆಟ್ ಮತ್ತು ಜೆಪ್ಟೊದಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಗೂ ಪ್ರಮುಖ ಸೂಪರ್‌ ಮಾರ್ಕೆಟ್‌ಗಳಲ್ಲಿ ನಂದಿನಿ ದೋಸೆ-ಇಡ್ಲಿ ಹಿಟ್ಟು ಬಿಡುಗಡೆಯಾಗಲಿದೆ.ಗ್ರಾಹಕರ ಕೈಗೆ ಸುಲಭವಾಗಿ ಸಿಗುತ್ತದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಾದ ಪ್ರೊಟೀನ್ ಭರಿತ ನಂದಿನಿ ಇಡ್ಲಿ-ದೋಸೆ ಹಿಟ್ಟು ಬಳಕೆಗೆ ಗ್ರಾಹಕರಿಂದ ಭಾರೀ ಬೇಡಿಕೆ ಬರುತ್ತಿದೆ. ಗ್ರಾಹಕರ ಕೈಗೆ ಇದು ಇನ್ನೂ ಸುಲಭವಾಗಿ ಬಹುಬೇಗನೆ ಗ್ರಾಹಕರ ಕೈಗೆ ಸಿಗಬೇಕು ಎಂದು ಕರ್ನಾಟಕ ಹಾಲು ಒಕ್ಕೂಟ ನಿರ್ಧಾರ ಮಾಡಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಣೆ ಮಾಡಿದೆ.

ಹಾಲು ಉತ್ಪಾದನೆಯಲ್ಲಿ ದೇಶದಲ್ಲಿ ಪ್ರಸಿದ್ಧಿ ಪಡೆದಿರುವ ನಂದಿನಿ ಬ್ರ್ಯಾಂಡ್ ಹೆಸರಿನಲ್ಲಿಯೇ ದೋಸೆ -ಇಡ್ಲಿ ಹಿಟ್ಟು ಮಾರಾಟ ಮಾಡಲಾಗುತ್ತಿದ್ದು, ಈವರೆಗೆ ಪ್ರತಿದಿನ ಸರಾಸರಿ 4,600 ಕೆ.ಜಿ. ಹಿಟ್ಟನ್ನು ಮಾರಾಟ ಮಾಡಲಾಗುತ್ತಿತ್ತು. ಇದೀಗ ಈ ಮಾರಾಟವನ್ನು ಮುಂದಿನ 3 ತಿಂಗಳಲ್ಲಿ 15,000 ಕೆ.ಜಿ.ಗೆ ಹೆಚ್ಚಿಸಲು ಕೆಎಂಎಫ್ ಯೋಜನೆ ರೂಪಿಸಿದೆ. ಹೀಗಾಗಿ, ಬೆಂಗಳೂರಿನಲ್ಲಿರುವ 750 ನಂದಿನಿ ಮಳಿಗೆಗಳ ಮೂಲಕ ನಂದಿನಿ ಇಡ್ಲಿ-ದೋಸೆ ಹಿಟ್ಟನ್ನು ಮಾರಾಟ ಮಾಡುತ್ತಿದ್ದ ಕೆಎಂಎಫ್ ಏ.1ರಿಂದ ಎಲ್ಲ ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು, ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು, ಚಿಲ್ಲರೆ ಅಂಗಡಿಗಳಿಗೆ ಪೂರೈಕೆ ಮಾಡಲು ಸಿದ್ಧವಾಗಿದೆ. ಈ ಮೂಲಕ ಮೂಲಕ ಖಾಸಗಿ ಬ್ರ್ಯಾಂಡ್‌ಗಳಾದ ಐಡಿ, ಅಸಲ್ ಮತ್ತು ಎಂಟಿಆರ್ ನಂತಹ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲ ಹೊರಟಿದೆ.

ನಾವು ಬೆಂಗಳೂರಿನಲ್ಲಿರುವ 750 ನಂದಿನಿ ಮಳಿಗೆಗಳ ಮೂಲಕ ಉತ್ಪನ್ನವನ್ನು ಪ್ರತ್ಯೇಕವಾಗಿ ಮಾರಾಟ ಮಾಡುತ್ತಿದ್ದೇವೆ. ಏಪ್ರಿಲ್ ಮೊದಲ ವಾರದಿಂದ, ನಾವು ನಂದಿನಿಯ ಪ್ರೊಟೀನ್ ಭರಿತ ಇಡ್ಲಿ-ದೋಸೆ ಬ್ಯಾಟರ್ ಅನ್ನು ಎಲ್ಲಾ ತ್ವರಿತ-ವಾಣಿಜ್ಯ ವೇದಿಕೆಗಳಲ್ಲಿ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಲಭ್ಯವಾಗುವಂತೆ ಮಾಡುತ್ತೇವೆ” ಎಂದು ಕೆಎಂಎಫ್‌ನ ಹಿರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತಿಯನ್ನು ತಿಳಿಸಿದ್ದಾರೆ.

ಬಿಡುಗಡೆಯಾದ ಪ್ರಾರಂಭದ ದಿನಗಳಲ್ಲಿ ಇಡ್ಲಿ-ದೋಸೆ ಹಿಟ್ಟಿನ ಉತ್ಪಾದನಾ ಸಾಮರ್ಥ್ಯವನ್ನು 5,000 ಕೆ.ಜಿ.ಯಿಂದ ಆರಂಭಿಸಿದ್ದು, ಇದೀಗ 10,000 ಕೆಜಿಗೆ ಹೆಚ್ಚಳ ಮಾಡಲಾಗಿದೆ. ಮತ್ತುಷ್ಟು ಹೆಚ್ಚಳ ಮಾಡಲು ಉತ್ಪಾದನಾ ಘಟಕಗಳ ಸ್ಥಾಪನೆಗೆ ಸ್ಥಳ ಶೋಧನೆ ಮಾಡಲಾಗುತ್ತಿದೆ ಎಂದು ಕೆಎಂಎಫ್ ಅಧಿಕಾರಿ ಮಾಹಿತಿಯನ್ನು ತಿಳಿಸಿದ್ದಾರೆ.

ನಂದಿನಿ ಇಡ್ಲಿ – ದೋಸೆ ಹಿಟ್ಟಿಗೆ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಅಳೆಯಲು ಕೆಎಂಎಫ್‌ ತನ್ನ ನಂದಿನಿ ಮಳಿಗೆಗಳಿಗೆ ಹಿಟ್ಟಿನ ಮಾರಾಟವನ್ನು ಕಡಿಮೆ ಪ್ರಮಾಣಕ್ಕೆ ಸೀಮಿತಗೊಳಿಸಿತ್ತು. ಆದರೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಇದೀಗ ಎಲ್ಲಾ ಪ್ರಮುಖ ಸೂಪರ್‌ಮಾರ್ಕೆಟ್‌ಗಳು ಮತ್ತು ಕ್ವಿಕ್‌ ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳಿಗೂ ಮಾರಾಟವನ್ನು ವಿಸ್ತರಿಸಲು ಹೊರಟಿದೆ. ಇದರಿಂದ ಈಗಿರುವ ಮಾರಾಟ ಮೂರು ಪಟ್ಟು ಹೆಚ್ಚಾಗುವ ಸಾದ್ಯತೆ ಇದೆ.

ನಗರದಲ್ಲಿ ಹೆಚ್ಚಿನ ಜನರು ಕೆಲಸದ ಒತ್ತಡದಿಂದಾಗಿ ಸಮಯವನ್ನು ವ್ಯರ್ಥ ಮಾಡುವುದಿಲ್ಲ.ಇದಕ್ಕಾಗಿ ಅವರು ರೆಡಿ ಇರುವ ಅಡುಗೆಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ನಂದಿನಿ ಬ್ರ್ಯಾಂಡ್ ಗುಣಮಟ್ಟದಲ್ಲಿ ಹೆಚ್ಚಿನ ಖ್ಯಾತಿಯನ್ನುಗಳಿಸಿದೆ ಮತ್ತು ಕರ್ನಾಟಕ ಮತ್ತು ಅದರಾಚೆಗಿನ ಗ್ರಾಹಕರು ಅದರ ಮೇಲೆ ಇಟ್ಟಿರುವ ನಂಬಿಕೆಯನ್ನು ಇಟ್ಟಿದ್ದಾರೆ ಆದರಿಂದ ನಂದನಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದ್ದರಿಂದ ಜನರು ಹೆಚ್ಚಾಗಿ ನಂದಿನಿ ಉತ್ಪನ್ನಗಳನ್ನು ಖರೀದಿ ಮಾಡುತ್ತಾರೆ.

ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮದರ್ ಡೈರಿ ಇತ್ತೀಚೆಗೆ ದೆಹಲಿಯಲ್ಲಿ ‘ಸಫಲ್’ ಬ್ರಾಂಡ್ ಅಡಿಯಲ್ಲಿ ತನ್ನ ಇಡ್ಲಿ-ದೋಸೆ ಬ್ಯಾಟರ್ ಅನ್ನು ಕೂಡ ಪರಿಚಯ ಮಾಡಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಪೈಪೋಟಿ ಇದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ