Tuesday, March 25, 2025
ಜಿಲ್ಲೆದಕ್ಷಿಣ ಕನ್ನಡಬಂಟ್ವಾಳಸುದ್ದಿ

ಗೋವು ರಾಷ್ಟ್ರೀಯ ಪ್ರಾಣಿಯಾನ್ನಾಗಿ ಘೋಷಣೆ ಮಾಡಬೇಕು :ರಮಿತಾ ಶೈಲೇಂದ್ರ ಅಭಿಪ್ರಾಯ-ಕಹಳೆ ನ್ಯೂಸ್

ಬಂಟ್ವಾಳ:ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳ ಪೈಕಿ ಗೋವು ಶ್ರೇಷ್ಟ ಪ್ರಾಣಿಯಾಗಿದ್ದು ,ದಿನನಿತ್ಯ ಗೋಮಾತೆಗೆ ಗೋಪೂಜೆ ಮಾಡುವುದರಿಂದ ಪ್ರತ್ಯಕ್ಷ ಲಕ್ಷ್ಮೀಗೆ ಪೂಜೆ ಮಾಡಿದಂತೆ ಇದರಿಂದ ಲಕ್ಷ್ಮೀಯು ಸುಲಭವಾಗಿ ಒಲಿಯುತ್ತಾಳೆ . ಗೋವುಗಳ ಸಂಖ್ಯೆ ಹೆಚ್ಚಾದಂತೆ ಸಮಾಜದಲ್ಲಿ ಶಾಂತಿಯು ನೆಲೆಸಿ ರಾಷ್ಟ್ರವು ಸಮೃದ್ದ ಭರಿತವಾಗುತ್ತದೆ. ಭಾರತವು ಗೋಮಾತೆಗೆ ವಿಶೇಷವಾಗಿ ತಾಯಿಯ ಸ್ಥಾನ ನೀಡಿರುವುದರಿಂದ ಭಾರತ ಸಂಪದ್ಬರಿತ ರಾಷ್ಟ್ರವಾಗಿರುವುದನ್ನು ಮನಗಂಡ ಆಗಿನ ಕಾಲದ ಬ್ರಿಟಿಷರು ಭಾರತದಲ್ಲಿನ ಗೋವುಗಳ ಸಂಖ್ಯೆ ಕಡಿಮೆ ಮಾಡುವ ದುರುದ್ದೇಶದಿಂದ ಕಸಾಯಿಖಾನೆಯನ್ನು ತೆರೆಯುವ ಮೂಲಕ ಪಿತೂರಿ ನಡೆಸಿದರು. ಆದರೆ ಗೋವುಗಳನ್ನು ನಾಶ ಮಾಡುವ ಬ್ರಿಟಿಷರ ಕುತಂತ್ರ ಭಾರತದಲ್ಲಿ ಫಲಿಸಲಿಲ್ಲ . ಗೋಮಾತೆಯು ಭೂಮಾತೆಯ ಪ್ರತೀಕವಾಗಿದ್ದು, ಸಾಕ್ಷತ್ ಭಗವಂತನನ್ನು ಗೋಮಾತೆಯ ಮೂಲಕ ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಗೋ ಮಾತೆಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಪರಿಗಣಿಸಿ ಸ್ವೀಕರಿಸುವ ಮೂಲಕ ಈ ಬಗ್ಗೆ ಘೋಷಣೆ ಮಾಡುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಗ್ರಾಮ ವಿಕಾಸ ಮಂಗಳೂರು ವಿಭಾಗದ ಟೋಲಿ ಸದಸ್ಯೆ ರಮಿತಾ ಶೈಲೇಂದ್ರ ಕಾರ್ಕಳ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಗೋಸೇವಾ ಗತಿ ವಿಧಿ ಕರ್ನಾಟಕ ,ರಾಧ ಸುರಭಿ ಗೋಮಂದಿರ , ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ) ನಂದಿ ರಥಯಾತ್ರೆ ಆಯೋಜನಾ ಸಮಿತಿ ಸಿದ್ದಕಟ್ಟೆ,ಸಂಗಬೆಟ್ಟು ಮಂಡಲ ಬಂಟ್ವಾಳ ತಾಲೂಕು ವತಿಯಿಂದ ಸಿದ್ದಕಟ್ಟೆ ಪೇಟೆಯಲ್ಲಿ ಜರಗಿದ ನಂದಿರಥ ಯಾತ್ರೆ ಶೋಭಾಯಾತ್ರೆ ,ವಿಷ್ಣು ಸಹಸ್ರ ನಾಮ ಪಾರಾಯಣ ಹಾಗೂ ಗೋಕಥೆ ಬಗೆಗಿನ ಸಾಮೂಹಿಕ ಸಭಾ ಕಾರ್ಯಕ್ರಮದಲ್ಲಿ ಗೋವಿನ ವಿಶೇಷತೆ ಬಗ್ಗೆ ಬೌದ್ದಿಕ್ ನೀಡಿದರು . ರಾಮ ಸುರಭಿ ಗೋಮಂದಿರ ಪುದು ಬಂಟ್ವಾಳ , ರಾಷ್ಟ್ರೀಯ ಗೋಸೇವಾ ಸಂಸ್ಥಾನ್ ಟ್ರಸ್ಟ್ (ರಿ) ಸಂಸ್ಥಾಪಕರಾದ ಭಕ್ತಿ ಭೂಷಣ್ ದಾಸ್ ಮಾತಾನಾಡಿ ಗೋವಿನ ಪ್ರತಿಯೊಂದು ವಸ್ತುವು ಸಕಲ ರೋಗಗಳಿಗೆ ಮನೆ ಮದ್ದಾಗಿದ್ದು ,ಗೋವು ರಕ್ಷಣೆ ಮಾಡಿದರೆ ಮಾತ್ರ ಮನುಕುಲದ ರಕ್ಷಣೆ ಆಗುತ್ತದೆ . ಗೋವು ಸಂತತಿ ಇಲ್ಲದೇ ಮಾನವ ಸಂತತಿ ಬೆಳವಣಿಗೆ ಸಾಧ್ಯವಿಲ್ಲ . ಗೋವು ಇಲ್ಲದೇ ಮಾನವನು ಜೀವನ ನಡೆಸುವುದಕ್ಕೆ ಸಾಧ್ಯವೇ ಇಲ್ಲ. ಆದುದರಿಂದ ನಾವು ನಿತ್ಯ ಜೀವನದಲ್ಲಿ ಗೋಭಕ್ತಿ ಮತ್ತು ಗುರುಭಕ್ತಿಯನ್ನು ಮೈಗೂಡಿಸಿಗೊಂಡಾಗ ಜೀವನ ಸಾರ್ಥಕವಾಗಲು ಸಾಧ್ಯ. ನಂದಿಯ ನಾಲ್ಕು ಕಾಲುಗಳು ಧರ್ಮದ ನಾಲ್ಕು ಕಂಬಗಳು ಇದ್ದಂತೆ ನಂದಿಯು ಧರ್ಮದ ಪ್ರತೀಕವೇ ಸರಿ . ಈ ನಿಟ್ಟಿನಲ್ಲಿ ಗೋ ಉತ್ಪನ್ನಗಳನ್ನು ಬಳಸಿಕೊಂಡು ದೇಶಿಯ ತಳಿಗಳ ಸಂರಕ್ಷಣೆ ಮಾಡುವ ಮೂಲಕ ಗೋಮಾತೆಯನ್ನು ನಿತ್ಯ ನಿರಂತರ ಪೂಜಿಸೋಣ ಎಂದು ಹೇಳಿದರು .

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಗತಿಪರ ಹೈನುಗಾರಿಕೆದಾರರು ಹಾಗೂ ಆರಂಬೋಡಿ ಹಾಲು ಉತ್ಪಾದಕರ ಸಹಕಾರದ ಸಂಘದ ಉಪಾಧ್ಯಕ್ಷ ಪ್ರತಾಪ ಶೆಟ್ಟಿ ಕುಂಡಾಜೆ ಸಮಾರಂಭದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ನಂದಿ ರಥಯಾತ್ರೆ ಆಯೋಜನಾ ಸಮಿತಿ ಸಿದ್ದಕಟ್ಟೆ ಸಂಚಾಲಕರಾದ ಪ್ರಭಾಕರ ಪ್ರಭು ಸ್ವಾಗತಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದರು , ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿ ,ಉಮೇಶ್ ಗೌಡ ಮಂಚಕಲ್ಲು ಧನ್ಯವಾದವಿತ್ತರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ