Wednesday, March 26, 2025
ಕ್ರೈಮ್ದಕ್ಷಿಣ ಕನ್ನಡಬಂಟ್ವಾಳಮಂಗಳೂರುಸುದ್ದಿ

ವಿಟ್ಲ, ಮುಡಿಪು ಮತ್ತು ಮಂಗಳೂರು ನಡುವೆ ಒಂದೇ ಟಯರ್‌ನಲ್ಲಿ ‘ಸಾರಾ’ ಎಂಬ ಖಾಸಗಿ ಬಸ್ ಸಂಚಾರ ; ಬಸ್ ತಡೆ ಹಿಡಿದು ಸಾರ್ವಜನಿಕರ ಆಕ್ರೋಶ – ಕಹಳೆ ನ್ಯೂಸ್

ಬಂಟ್ವಾಳ, ಮಾ.24 : ವಿಟ್ಲ ಮತ್ತು ಮುಡಿಪು ನಡುವೆ ಸತತ ಎರಡು ದಿನಗಳಿಂದ ಒಂದೇ ಹಿಂಬದಿಯ ಟೈರ್‌ನೊಂದಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ವಿಟ್ಲ, ಮುಡಿಪು ಮತ್ತು ಮಂಗಳೂರು ನಡುವೆ ಸಂಚರಿಸುವ ‘ಸಾರಾ’ ಎಂಬ ಖಾಸಗಿ ಬಸ್ಸಿನ ಬಸ್ಸಿನ ಹಿಂದಿನ ಎಡಭಾಗದಲ್ಲಿ ಒಂದೇ ಚಕ್ರದಲ್ಲಿ ಸಂಚರಿಸುತ್ತಿತ್ತು. ಇನ್ನೊಂದು ಟಯರ್ ಒಡೆದು ವಿಚಿತ್ರ ಶಬ್ದ ಬರುತ್ತಿದ್ದರೂ ಚಾಲಕ, ನಿರ್ವಾಹಕ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಶನಿವಾರ ಮಧ್ಯಾಹ್ನದಿಂದ ರವಿವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು ಮಧ್ಯೆ ಹಿಂಬದಿಯ ಒಂದೇ ಟಯರ್ ನಲ್ಲಿ ಸಂಚರಿಸುತ್ತಿದ್ದುದ್ದನ್ನು ಗಮನಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಯಾಣಿಕರ ಜೀವದ ಜೊತೆ ಬಸ್ ಚಾಲಕ ಹಾಗೂ ನಿರ್ವಾಹಕ ಚೆಲ್ಲಾಟ ಆಡುತ್ತಿದ್ದರೆಂದು ಪ್ರಯಾಣಿಕರು ಆರೋಪಿಸಿ, ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆ ಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನೆ ಬಗ್ಗೆ ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ