
ಮಾಣಿ : ಬಂಟ್ವಾಳ ತಾಲೂಕಿನ ಮಾಣಿ ಪೆರಾಜೆ ಶ್ರೀ ರಾಮಚಂದ್ರಾ ಪುರಮಠದ ವತಿಯಿಂದ ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು ಒಂದು ಸಾವಿರ ಪುನಾರ್ಪುಳಿ ಗಿಡಗಳ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿಬಿದ್ದಿದೆ. ಸ್ಥಳೀಯರು ನೀರುಹಾಕಿ ಬೆಂಕಿನಂದಿಸಲು ಪ್ರಯತ್ನಿಸಿದರೂ ಬಿಸಿಲಿನ ಧಗೆಗೆ ಬೆಂಕಿ ಗುಡ್ಡಕ್ಕೆ ಹರಡಿಕೊಂಡಿತು.ಬಳಿಕ ಬಂಟ್ವಾಳ ಫೈರ್ ಸರ್ವಿಸ್ ನವರು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಫಲಭರಿತ ಸುಮಾರು 50 ಗಿಡಗಳು ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ ಸುಟ್ಟು ಹೋಗಿವೆ. ಹತ್ತಿರದಲ್ಲೇ ,ಮನೆಗಳು ಹಾಗೂ ಏರ್ಟೆಲ್ ನವರ ಟವರ್ ಇದ್ದು ಸುತ್ತಲೂ ಬೆಂಕಿ ಆವರಿಸಿದ್ದು ಹಾನಿಯಾಗಲಿಲ್ಲ. ಮಠದ ಆಡಳಿತ ಕ್ರಿಯಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಸ್ಥಳಕ್ಕಾಗಮಿಸಿ ಸಹಕರಿಸಿದರು.