Recent Posts

Wednesday, November 13, 2024
ಸುದ್ದಿ

ತಮಿಳುನಾಡಿನಲ್ಲಿ ಗಜ ಚಂಡಮಾರುತದ ಅಟ್ಟಹಾಸ: ಜನಜೀವನ ಅಸ್ತವ್ಯಸ್ಥ – ಕಹಳೆ ನ್ಯೂಸ್

ತಮಿಳುನಾಡಿನಲ್ಲಿ ಗಜ ಚಂಡಮಾರುತನ ಆರ್ಭಟ ಹೆಚ್ಚಾಗಿದ್ದು ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ.

ಚಂಡಮಾರುತವು 120 ಕೆಎಂಪಿಎಚ್ ವೇಗದಲ್ಲಿ ಆವರಿಸುತ್ತಿದ್ದು, ನೈಸರ್ಗಿಕ ಮತ್ತು ವಿಕೋಪ ಕೇಂದ್ರದ ವರದಿ ಪ್ರಕಾರ ತಗ್ಗು ಪ್ರದೇಶದಲ್ಲಿರುವ 76,290 ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 300 ಕ್ಕೂ ಹೆಚ್ಚು ನಿರಾಶ್ರಿತರ ಕೇಂದ್ರಗಳಲ್ಲಿ ಇರಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾಗಪಟ್ಟಣಂ, ಪುದುಕೊಟ್ಟಯ್, ತಿರುವರೂರ್ ನಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು 20 ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿದೆ. ತಂಜಾವೂರಿನಲ್ಲಿ ಗಜನ ಅಟ್ಟಹಾಸಕ್ಕೆ ಬೋಟುಗಳು ನುಚ್ಚುನೂರಾಗಿದ್ದು, ಈಗಾಗ್ಲೇ 12 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗ್ತಿದೆ.