
ಉಡುಪಿ : ವಿದ್ಯಾರ್ಥಿಯೊಬ್ಬ ದೈವಕ್ಕೆ ಚೀಟಿ ಬರೆದು ನನಗೆ ಇಂತಿಷ್ಟು ಅಂಕ ಬರುವಂತೆ ಮಾಡಿ ಪಾಸ್ ಮಾಡಿಸು ಅಂತ ಪತ್ರವೊಂದರಲ್ಲಿ ಬೇಡಿಕೊಂಡಿದ್ದಾನೆ.
ಪರೀಕ್ಷೆ ಅಂದ್ರೆ ಎಲ್ಲಾ ವಿದ್ಯಾರ್ಥಿಗಳಲ್ಲೂ ಅದೊಂದು ರೀತಿಯ ಟೆನ್ಷನ್ ಇದ್ದೇ ಇರುತ್ತದೆ. ಟಾಪರ್ ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್ ಗಿಂತ ಅಂಕ ಕಡಿಮೆ ಬಾರದಿರಲಿ ಅನ್ನೋ ಟೆನ್ಷನ್ ಇದ್ರೆ, ಸಾಮಾನ್ಯ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಹೇಗಾದ್ರೂ ಹೆಚ್ಚಿನ ಅಂಕ ಗಳಿಸಬೇಕು ಅನ್ನೋ ಚ್ಯಾಲೆಂಜ್ ಇರುತ್ತದೆ. ಆದ್ರೆ ಕಲಿಕೆಯಲ್ಲಿ ತೀರಾ ಹಿಂದೆ ಉಳಿದ ವಿದ್ಯಾರ್ಥಿಗಳು ಜಸ್ಟ್ ಪಾಸ್ ಆದ್ರೆ ಸಾಕು ಅಂತಿರ್ತಾರೆ. ಅಂತಹ ಒಬ್ಬ ವಿದ್ಯಾರ್ಥಿ ದೈವದ ಹುಂಡಿಯಲ್ಲಿ ಚೀಟಿ ಬರೆದು ಅಂಕಗಳ ಆಪ್ಷನ್ ಕೊಟ್ಟು ಇಷ್ಟಾದ್ರೂ ಕೊಡಿಸು ದೇವರೆ ಅಂತ ಬೇಡಿಕೊಂಡಿದ್ದಾನೆ.
ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಲಭ್ಯವಾಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಬದ್ಧತೆಯ ಬಗ್ಗೆ ಚರ್ಚೆ ನಡೆದಿದೆ. ಜಸ್ಟ್ ಪಾಸ್ ಮಾಡುವ ಅಂಕ ನೀಡು ಅಂತ ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಅಂಕಗಳ ಅಪ್ಷನ್ ನೀಡಿದ್ದಾನೆ. ಪ್ರತಿಯೊಂದು ಸಬ್ಜೆಕ್ಟ್ ಗೆ ಎಷ್ಟು ಎಷ್ಟು ಸಿಗಬೇಕು ಎಂದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಅಂತ ಹೊರ ಬೊಬ್ಬರ್ಯ ದೈವಕ್ಕೆ ಮನವಿ ಮಾಡಿಕೊಂಡಿದ್ದಾನೆ.