
ಬೆಂಗಳೂರು: ಲಾಂಗ್ ಹಿಡಿರುಮಾಡಿ ವಿವಾದ ಮೈಮೇಲೆ ಎಳೆದುಕೊಂಡಿರುವ ಬಿಗ್ ಬಾಸ್ ಕನ್ನಡ (Bigg Boss Kannada) ಖ್ಯಾತಿಯ ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರನ್ನು ಸೋಮವಾರ ಬಸವೇಶ್ವರ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಫ್‌ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆಯೂ ಇಬ್ಬರಿಗೆ ನೋಟಿಸ್ ನೀಡಿದ್ದರು.
ಇಬ್ಬರು ನಟರು ಕಿರುತೆರೆಯಲ್ಲಿ ಸದ್ದು ಮಾಡಿ, ರಿಯಾಟಲಿ ಶೋವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬುಜ್ಜಿ ಅನ್ನುವ ಹೆಸರಿನ ರಜತ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ 18 ಸೆಕೆಂಡ್ ಗಳ ವಿಡಿಯೋ ಪ್ರಕಟವಾದ ಬೆನ್ನಲ್ಲೇ ಸಾವರ್ಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಪ್ರದರ್ಶನ ಹಾಗೂ ಭಯಭೀತಿ ಸೃಷ್ಟಿಸಿದ ಕುರಿತಾಗಿ ಪ್ರಕರಣ ದಾಖಲು ಮಾಡಲಾಗಿತ್ತು.