Saturday, March 29, 2025
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಗೀತಾ ಶಿವ ರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲು-ಕಹಳೆ ನ್ಯೂಸ್

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್‌ ಹೀರೋ ಶಿವ ರಾಜ್‌ಕುಮಾರ್‌ ಅವರ ಪತ್ನಿ ಗೀತಾ ಶಿವ ರಾಜ್‌ಕುಮಾರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಿವಣ್ಣ ಆರೋಗ್ಯದಲ್ಲಿ ಚೇತರಿಕೆ ಬಳಿಕ ಮತ್ತೆ ಅವರ ಸಿನಿಮಾ ಕೆಲಸಗಳಲ್ಲಿ ಜೊತೆಯಾಗಿದ್ದ ಗೀತಕ್ಕ ದಿಢೀರ್‌ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಗೀತಾ ಶಿವ ರಾಜ್‌ಕುಮಾರ್‌ ಅವರಿಗೆ ಸರ್ಜರಿಯಾಗಿದ್ದು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ. ಸದಾ ಆಯಕ್ಟೀವ್‌ ಆಗಿರುತ್ತಿದ್ದ ಗೀತಕ್ಕ ಅವರಿಗೆ ದಿಢೀರ್‌ ಏನಾಯ್ತು? ಸರ್ಜರಿ ಯಾಕೆ? ಈಗ ಹೇಗಿದ್ದಾರೆ? ಎನ್ನುವ ಪ್ರಶ್ನೆಗಳು ಅಭಿಮಾನಿಗಳಲ್ಲಿದ್ದು, ಈವರೆಗೂ ಸರ್ಜರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಅವರಿಗೆ ಸರ್ಜರಿಯಾದ ಬಗ್ಗೆ ಸ್ವತಃ ಗೀತಾ ಶಿವ ರಾಜ್‌ಕುಮಾರ್‌ ಅವರ ಸಹೋದರ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ನಿನ್ನೆ (ಮಾರ್ಚ್ 25) ಮಂಗಳವಾರ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ಬೃಹತ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಈ ಸಮಾರಂಭಕ್ಕೆ ನಾನು ಬೆಳಗ್ಗೆಯೇ ಬರಬೇಕಾಗಿತ್ತು. ಆದರೆ ಬರಲು ಆಗಲಿಲ್ಲ. ನಾನು ಮೊದಲೇ ಅನುಮತಿ ಪಡೆದುಕೊಂಡಿದ್ದೆ. ಗೀತಕ್ಕ ಅವರದ್ದು ಒಂದು ಸರ್ಜರಿ ಇತ್ತು. ನಿನ್ನೆ ಮತ್ತು ಇವತ್ತು ಎರಡು ದಿನ ಸರ್ಜರಿ ಇತ್ತು. ಈಗ ಅವರ ಸರ್ಜರಿ ಮುಗಿದಿದೆ. ಚೆನ್ನಾಗಿದ್ದಾರೆ. ನಾನು ಆಸ್ಪತ್ರೆಯಲ್ಲಿ ಇದ್ದೆ. ಈಗ ನೇರವಾಗಿ ಇಲ್ಲಿಗೆ ಬಂದಿದ್ದೇನೆ’ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಣ್ಣ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಗೀತಕ್ಕ

ಕೆಲವು ತಿಂಗಳ ಹಿಂದೆ ನಟ ಶಿವರಾಜ್‌ಕುಮಾರ್ ಅವರ ಅನಾರೋಗ್ಯ ಆತಂಕವನ್ನು ಹುಟ್ಟಿಸಿತ್ತು. ಕೆಲವು ತಿಂಗಳು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದ ಅವರು ಬಳಿಕ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದರು. ಡಿಸೆಂಬರ್ 24ರಂದು ಶಿವಣ್ಣಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಶಿವಣ್ಣ ಭಾರತಕ್ಕೆ ಬಂದು ಕೆಲ ದಿನಗಳು ಬೆಂಗಳೂರಿನಲ್ಲಿ ವಿಶ್ರಾಂತಿ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದರು.

ಶಿವಣ್ಣ ಚೇತರಿಸಿಕೊಳ್ಳುತ್ತಿದ್ದಂತೆ ಸಿನಿಮಾ ಕೆಲಸಗಳಲ್ಲಿ ಬ್ಯೂಸಿಯಾಗಿದ್ದು, ಗೀತಾ ಶಿವ ರಾಜ್‌ಕುಮಾರ್‌ ಕೂಡ ಅವರಿಗೆ ಸಾಥ್‌ ನೀಡುತ್ತಿದ್ದರು. ಶಿವಣ್ಣ ಅವರ ಜೊತೆ ಗೀತಕ್ಕ ಕೂಡ ಸಿನಿಮಾ ಹಾಗೂ ಇತರ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದರು. ಇದೀಗ ಗೀತಕ್ಕ ಅವರಿಗೆ ಸರ್ಜರಿ ಆಗಿದೆ ಎನ್ನುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ