Sunday, March 30, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಕೊಡಿ ಏರಿಸುವ ದಿನ ಹಾಗೂ ಬ್ರಹ್ಮರಥೋತ್ಸವದ ದಿನ ಡ್ರೋನ್‌ಗೆ ಅವಕಾಶ ಇಲ್ಲ, ದೇಗುಲದ ವಠಾರದ ಶುಚಿತ್ವಕ್ಕೆ ವಿಶೇಷ ಮುತು ವರ್ಜಿ-ಕಹಳೆ ನ್ಯೂಸ್

ಪುತ್ತೂರು: ಗರುಡಾಗಮನಕ್ಕೆ ಅಡ್ಡಿಯಾ ಗುವುದೂ ಸೇರಿ ಕೆಲವೊಂದು ಕಾರಣಗಳಿಗಾಗಿ ಕೊಡಿ ಏರಿಸುವ ದಿನ ಹಾಗೂ ಬ್ರಹ್ಮರಥೋತ್ಸವದ ದಿನ ಡ್ರೋನ್‌ಗೆ ಅವಕಾಶ ಇಲ್ಲ. ದೇಗುಲದ ವಠಾರದ ಶುಚಿತ್ವಕ್ಕೆ ವಿಶೇಷ ಮುತು ವರ್ಜಿ ವಹಿಸಲಾಗುವುದು ಎಂದು ಮಹಾ ಲಿಂಗೇಶ್ವರ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ ಹೇಳಿದರು.

ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ದೇಗುಲದಲ್ಲಿ ಶಾಸಕ ಅಶೋಕ್‌ ಕುಮಾರ್‌ ರೈ ಅಧ್ಯಕ್ಷತೆಯಲ್ಲಿ ಇಲಾಖಾ ಅಧಿಕಾರಿಗಳ ಸಭೆ ಯಲ್ಲಿ ಅವರು ಮಾತನಾಡಿದರು. ಜಾತ್ರೆಯ ವೇಳೆ ಬ್ರಹ್ಮರಥ ಸೇವೆ ಹಿಂದಿನ ವರ್ಷ 68ಕ್ಕೆ ತಲುಪಿತ್ತು. ಈ ವರ್ಷ ಈಗಾಗಲೇ 105 ಮಂದಿ ಹೆಸರು ನೋಂದಾಯಿಸಿದ್ದಾರೆ. ಇದು ಇನ್ನೂ ಹೆಚ್ಚಾಗಲಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಾ ಸಾಗುತ್ತಿದೆ. ಈ ಬಾರಿ ಶಿವರಾತ್ರಿಗೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿದ್ದರು ಜಾತ್ರೆ ಅವಧಿಯಲ್ಲಿ ಊಟದ ವ್ಯವಸ್ಥೆ ಕೆರೆ ಪಕ್ಕದ ಜಾಗದಲ್ಲಿ ಮಾಡಲಾಗುತ್ತಿದ್ದು ಬೃಹತ್‌ ಚಪ್ಪರ ನಿರ್ಮಾಣ ಆಗಲಿದೆ. ಎಲ್ಲ ರೀತಿಯ ಮುಂಜಾಗ್ರತ ಕ್ರಮವಾಗಿ ಹತ್ತಾರು ಸಿಸಿ ಕೆಮರಾ ಅಳವಡಿಸಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ತುರ್ತು ಸಂದರ್ಭ ದೇಗುಲದ ಗದ್ದೆ ಯಿಂದ ಹೊರ ಹೋಗಲು ವ್ಯವಸ್ಥೆ ಇರಬೇಕು ಎಂದು ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಗಮನ ಸೆಳೆದರು. ಜಾತ್ರಾ ಗದ್ದೆಗೆ ನೀರು ಹಾಕಲು ನಗರಸಭೆಗೆ ಸೂಚಿಸಲಾಯಿತು. ಶೌಚಾಲಯ ಕ್ಲೀನಿಂಗ್‌, ದೇಗುಲದ ಪಕ್ಕದ ತೋಡು ಶುಚಿಗೊಳಿಸುವುದೂ ಸೇರಿ ಶುಚಿತ್ವಕ್ಕೆ ಒತ್ತು ನೀಡಲು ಸೂಚಿಸಲಾಯಿತು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ವಿನಯ್‌ ಸುವರ್ಣ, ಪಿ.ವಿ. ದಿನೇಶ್‌ ಕುಲಾಲ್‌, ಮಹಾಬಲ ರೈ ವಳತ್ತಡ್ಕ, ಈಶ್ವರ್‌ ಬೇಡೆಕರ್‌, ಸುಭಾಶ್‌ ರೈ, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್‌, ತಹಶೀಲ್ದಾರ್‌ ಪುರಂದರ ಹೆಗ್ಡೆ, ಸಿಐ ಸುನಿಲ್‌ ಕುಮಾರ್‌, ಪಿ.ಎಸ್‌.ಐ. ಸೇಸಮ್ಮ, ತಾಲೂಕು ಆರೋಗ್ಯಾಧಿಕಾರಿ ಡಾ| ದೀಪಕ್‌ ರೈ, ಲೋಕೋಪಯೋಗಿ ಇಲಾಖೆಯ ಪ್ರಮೋದ್‌, ಕಂದಾಯ ನಿರೀಕ್ಷಕ ಗೋಪಾಲ್‌ ಉಪಸ್ಥಿತರಿದ್ದರು.

ಕೆರೆ ಆಸುಪಾಸು ಪಾರ್ಕಿಂಗ್‌ ಬೇಡ
ಶಾಸಕ ಅಶೋಕ್‌ ರೈ ಮಾತನಾಡಿ, ಕೆರೆ ಆಸುಪಾಸಿನ ಜಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನೀಡುವುದೆ ಬೇಡ. ಆ ಜಾಗ ಹಾಗೆಯೇ ಇರಲಿ ಎಂದಾಗ ಟ್ರಾಫಿಕ್‌ ಪಿ.ಎಸ್‌.ಐ. ಉದಯರವಿ, ಕೊಂಬೆಟ್ಟು, ಎಪಿಎಂಸಿ, ತೆಂಕಿಲ ಹಾಗೂ ಕಿಲ್ಲೆ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುವುದು ಎಂದರು.

ಹೆಚ್ಚುವರಿ ಬಸ್‌ ವ್ಯವಸ್ಥೆ
ಎ..16, 17ರಂದು ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ಕೆ.ಎಸ್‌.ಆರ್‌.ಟಿ.ಸಿ. ಅಧಿಕಾರಿ ತಿಳಿಸಿದರು. ಪ್ರತಿಕ್ರಿಯಿಸಿದ ಶಾಸಕರು, ಜಾತ್ರೆಯ ಉಳಿದ ದಿನಗಳಲ್ಲೂ ಹೆಚ್ಚುವರಿ ಬಸ್‌ ಓಡಿಸುವಂತೆ ಸೂಚಿಸಿದರು. ರಾತ್ರಿ 10 ಗಂಟೆಯವರೆಗೆ ಬಸ್‌ ವ್ಯವಸ್ಥೆ ಒದಗಿಸುವ ಬಗ್ಗೆ ತೀರ್ಮಾನಿಸಲಾಯಿತು.

ವಿದ್ಯುತ್‌ ಸಂಪರ್ಕಕ್ಕೆ ಪರವಾನಿಗೆ ಪಡೆಯಿರಿ
ದೇವಸ್ಥಾನಕ್ಕೆ ನೀಡಿದ ವಿದ್ಯುತ್‌ ಸಂಪರ್ಕದಿಂದ ಯಾರಿಗೂ ವಿದ್ಯುತ್‌ ಪಡೆದುಕೊಳ್ಳಲು ಅವಕಾಶ ನೀಡಬಾರದು. ಓವರ್‌ಲೋಡ್‌ ಸಮಸ್ಯೆಯನ್ನು ತಪ್ಪಿಸಲು ಈ ಕ್ರಮ ಅನಿವಾರ್ಯ ಎಂದು ಮೆಸ್ಕಾಂ ಪ್ರಭಾರ ಕಾರ್ಯನಿರ್ವಾಹಕ ಎಂಜಿನಿಯರ್‌ರಾಮಚಂದ್ರ ಹೇಳಿದರು.ರಸ್ತೆಯಲ್ಲಿ ವಿದ್ಯುತ್‌ ದೀಪ ಅಲಂಕಾರ ಮಾಡುವವರಿಗೆ ಇದುವರೆಗೆ ಯಾವುದೇ ಕಂಡೀಷನ್‌ ಹಾಕಿರಲಿಲ್ಲ. ಇದರಿಂದ ಟ್ರಿಪ್‌ ಸಮಸ್ಯೆ ಎದುರಾಗುತ್ತದೆ. ಆ ಸಮಯದಲ್ಲಿ ಸಮಸ್ಯೆಯ ಮೂಲ ಹುಡುಕಲು ಆಗುವುದಿಲ್ಲ. ಆದ್ದರಿಂದ ಹೊರಗೆ ದೀಪಾಲಂಕಾರಕ್ಕೆ ಪ್ರತ್ಯೇಕ ಜನರೇಟರ್‌ಅಥವಾ ಪ್ರತ್ಯೇಕ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲು ಸೂಚಿಸಬೇಕು.ಜಾತ್ರಾ ಗದ್ದೆ ಗುತ್ತಿಗೆದಾರರೇ ಸಂಪರ್ಕ ಪಡೆದುಕೊಂಡು, ಅವರು ಪ್ರತ್ಯೇಕವಾಗಿ ವಿದ್ಯುತ್‌ ಸಂಪರ್ಕ ನೀಡಬೇಕು ಎಂದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ