Sunday, March 30, 2025
ಉಡುಪಿಜಿಲ್ಲೆಸುದ್ದಿ

ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ -ಕಹಳೆ ನ್ಯೂಸ್

ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.

ಉಮೇಶ್‌ (41) ವಂಚನೆಗೆ ಒಳಗಾದವರು. ಇವರು ಕೆಲಸದ ಬಗ್ಗೆ ತನ್ನ ಸ್ನೇಹಿತನಲ್ಲಿ ವಿಚಾರಿಸಿದ್ದು, ವಾಟ್ಸ್‌ ಆಯಪ್‌ ಮೂಲಕ ಕೆಲಸದ ಪಟ್ಟಿಯನ್ನು ಕಳುಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ವಿದೇಶದಲ್ಲಿ ಒಳ್ಳೆಯ ಉದ್ಯೋಗ ನೀಡುವುದಾಗಿ ವಂಚಕ ನಂಬಿಸಿದ್ದ. ಇದಕ್ಕಾಗಿ 2,32,060 ರೂ. ಹಣವನ್ನು ತೆಗೆದುಕೊಂಡಿದ್ದ. ಮಾ. 20ರಂದು ವಿದೇಶಕ್ಕೆ ತೆರಳಲು ಮುಂಬಯಿಗೆ ಹೋಗಿ ಅಪರಿಚಿತ ವ್ಯಕ್ತಿಗಳ ನಂಬರ್‌ಗೆ ಕರೆ ಮಾಡಿದ್ದು, ಫೋನ್‌ ಸ್ವಿಚ್‌ ಆಫ್‌ ಆಗಿತ್ತು. ಹಣ ಅಥವಾ ಉದ್ಯೋಗ ನೀಡದೆ ವಂಚಿಸಿದ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ