Monday, March 31, 2025
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ: ಗುಡುಗು, ಗಾಳಿ ಸಹಿತ ಉತ್ತಮ ಮಳೆ – ಕಹಳೆ ನ್ಯೂಸ್

ಬೆಳ್ತಂಗಡಿ: ತಾಲೂಕಿನಲ್ಲಿ ಬುಧವಾರ ಮಧ್ಯಾಹ್ನ ಬಳಿಕ ಮೋಡ ಕವಿದ ವಾತಾವರಣದೊಂದಿಗೆ ಹಲವು ಭಾಗಗಳಲ್ಲಿ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.

ಗುರುವಾಯನಕೆರೆಯಿಂದ ಕಕ್ಕಿಂಜೆ ವಿದ್ಯುತ್‌ ಪೂರೈಸುವ 33 ಕೆ.ವಿ. ಟವರ್‌ನ ಮೇಲೆ ಮುಂಡಾಜೆಯ ಪರಮುಖ ಎನ್ನುವಲ್ಲಿ ಮರ ಉರುಳಿ ಬಿದ್ದು ಟವರ್‌ಗೆ ಹಾನಿ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಕಕ್ಕಿಂಜೆ ವಿದ್ಯುತ್‌ ಸಬ್‌ ಸ್ಟೇಷನ್‌ ವ್ಯಾಪ್ತಿಯ ಚಾರ್ಮಾಡಿ, ನೆರಿಯ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ ಕಲ್ಮಂಜ, ಕಡಿರುದ್ಯಾವರ, ಮಿತ್ತಬಾಗಿಲು, ಮಲವಂತಿಗೆ ಮೊದಲಾದ ಗ್ರಾಮಗಳ ಸಾವಿರಾರು ಗ್ರಾಹಕರಿಗೆ ವಿದ್ಯುತ್‌ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂಡಾಜೆ, ಚಾರ್ಮಾಡಿ, ನೆರಿಯ, ನಡ, ಧರ್ಮಸ್ಥಳ, ಉಜಿರೆ, ಕಡಿರುದ್ಯಾವರ, ನಾರಾವಿ, ಬೆಳ್ತಂಗಡಿ ಸಹಿತ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ