ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ದಿಂದ ಅನುದಾನ-ಕಹಳೆ ನ್ಯೂಸ್

ವಿಟ್ಲ: ಸಮುದಾಯ ಅಭಿವೃದ್ಧಿ. ವಿಭಾಗ ದಿಂದ ಸಹಾಯಧನ ವಿತರಣೆ ದಿನಾಂಕ 26.03.25 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ,(ರಿ) ಧರ್ಮಸ್ಥಳ ದ ಸಮುದಾಯಭಿವೃಧಿ ವಿಭಾಗದಿಂದ ಹಿಂದೂ ರುದ್ರ ಭೂಮಿ ಯ ಕಟ್ಟಡ ರಚನೆ ಹಾಗೂ ಸಿಲಿಕಾನ್ ಚೆಂಬರ್ ಬಗ್ಗೆ ಸಮಿತಿಯು ಕ್ಷೇತ್ರಕ್ಕೆ ಬೇಡಿಕೆ ನೀಡಿದ್ದು 250000 ಲಕ್ಷದ ಮಂಜೂರಾತಿ ಪತ್ರ ವನ್ನೂ ಬೋಳಂತೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಾಲಿನಿ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕು ಯೋಜನಾಧಿಕಾರಿ ಶ್ರೀ ರಮೇಶ್ ರವರು ಹಸ್ತಾಂತರಿಸಿದ್ದು ರುದ್ರ ಭೂಮಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಯೋಜನೆ ಕೃಷಿ ಅಧಿಕಾರಿ ಚಿದಾನಂದ,ಒಕ್ಕೂಟ ದ ಅಧ್ಯಕ್ಷರಾದ ಶ್ರೀಮತಿ ಸೀತಾ ,ಸಮಿತಿ ಯ ಅಧ್ಯಕ್ಷರಾದ ಚಂದ್ರ ಹಾಸ ರೈ, ಕಾರ್ಯದರ್ಶಿ ಗಣೇಶ್ ನಾಯ್ಕ,ಉಪಾಧ್ಯಕ್ಷರಾದ ನೋಣಯ್ಯ ,ಕೋಶಾಧಿಕಾರಿ ಚೆನ್ನಪ್ಪ ಪೂಜಾರಿ,ಸೇವಪ್ರಟಿನಿಧಿ ಶ್ರೀಮತಿ ಲೀಲಾವತಿ ರವರು ಉಪಸ್ಥಿತರಿದ್ದರು ಇದೆ ಸಂದರ್ಭ ದಲ್ಲಿ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡ್,ಸಭಾಂಗಣ ರಚನೆಗೆ 75000,ಹಾಗೂ ಸರಕಾರಿ ಉನ್ನತಿ ಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು ಸಭಾಂಗಣ ರಚನೆಗೆ 100000 ಸಹಾಯ ಧನ ವಿತರಣೆ ಮಾಡಲಾಯಿತು