Monday, March 31, 2025
ಉಡುಪಿಜಿಲ್ಲೆಸುದ್ದಿ

ಮಾನವಿಯತೆಗೆ ಆದರ್ಶವಾದ ಉಡುಪಿ ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರು ಅದ ಡಾ.ಚಂದ್ರಶೇಖರ್-ಕಹಳೆ ನ್ಯೂಸ್

ಉಡುಪಿ: ಎರಡು ದಿನಗಳ ಹಿಂದೆ ಕಟಫಾಡಿಯಲ್ಲಿ ರಿಕ್ಷಾ ಚಲಾಯಿಸುವ ವ್ಯಕ್ತಿಗೆ ಮಧ್ಯರಾತ್ರಿ ತೀವ್ರ ಹೃದಯ ಬೇನೆ ಆಗಿದ್ದು ಉಸಿರಾಟದ ತೊಂದರೆಯಿಂದ ಸಂಕಟ ಪಡುತ್ತಿದ್ದಾಗ ಅವರ ಹೆಂಡತಿ ಉಡುಪಿ ಜಿಲ್ಲೆ ಸರಕಾರಿ ಆಸ್ಪತ್ರೆಗೆ ರಾತ್ರಿ 4ಗಂಟೆ ಸಮಯದಲ್ಲಿ ಹೋದಾಗ ಪರಿಶೀಲನೆ ನಡೆಸಿದ ಡ್ಯೂಟಿ ಡಾಕ್ಟರ್ ಕೂಡಲೇ ಚಿಕಿತ್ಸೆ ನೀಡಬೇಕು,ಈ ಬಗ್ಗೆ ನಮ್ಮಲ್ಲಿ ವ್ಯವಸ್ಥೆ ಇಲ್ಲದೆ ಇರುವ ಕಾರಣ ಬೇರೆ ಆಸ್ಪತ್ರೆ ಗೆ ಹೋಗಬೇಕು ಎಂದಾಗ ಅದೇ ಸಮಯಕ್ಕೆ ಜಿಲ್ಲೆಯ ಸಾವಿರಾರು ಮತ್ತು ಸಿಬ್ಬಂದಿ ವರ್ಗಗಳಿಂದ ತುಂಬಿರುವ 5ಸ್ಟಾರ್ ರೀತಿಯ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗೆ ಹೋದಾಗ ಪರಿಶೀಲಿಸಿದ ಡಾಕ್ಟರ್ ಕೂಡಲೇ ಚಿಕಿತ್ಸೆ ನೀಡಬೇಕು ಆಯುಷ್ಮಾನ ಕಾರ್ಡ್ನಿಂದ ಆಗುದಿಲ್ಲ 2ಲಕ್ಷದವರೆಗೂ ಖರ್ಚು ಇದೆ ಕೂಡಲೇ ಹಣ ಕಟ್ಟಿ ಎಂದಾಗ ಹಣದ ವ್ಯವಸ್ಥೆ ಮತ್ತೆ ಮಾಡುತ್ತೇವೆ ಎಂದರೂ, ಹಣ ಕಟ್ಟಿದ ಆದನಂತರ ಚಿಕಿತ್ಸೆ ಆರಂಭವಾಗುವುದು ಎಂದು ಖಡಾಖಂಡಿತವಾಗಿ ಹೇಳಿದಾಗ, ಕೂಡಲೇ ಆದರ್ಶ ಆಸ್ಪತ್ರೆಗೆ ಬಂದಾಗ ಮೊದಲು ಚಿಕಿತ್ಸೆ ನೀಡಿ ಹಣದ ವ್ಯವಸ್ಥೆ ಆಯುಷ್ಮಾನ್ ಆಗಲಿ,ಇನ್ನಿತರ ಅರೋಗ್ಯ ವಿಮೆ ಆಗಲಿ,ಮೊದಲು ಚಿಕಿತ್ಸೆ ಪ್ರಾರಂಭ ಮಾಡುವ ನಂತರ ಹಣದ ಬಗ್ಗೆ ಮಾತನಾಡುವ ಎಂದು ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ಚಂದ್ರಶೇಖರ್ ಅವರ ಮಾನವೀಯತೆಯ ಬಗ್ಗೆ ರೋಗಿಯ ಕುಟುಂಬದವರು ವಂದಿಸಿದರು,ಮಾನವೀಯತೆ ಎನ್ನು ಜೀವಂತವಾಗಿದೆ ಎಂದು ತೋರಿಸಿಕೊಟ್ಟ ನಿರ್ದೇಶಕರು ತಮ್ಮ ಸಿಬ್ಬಂದಿ ವರ್ಗದವರಿಗೆ ಕೂಡಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿ ,ಇನ್ಸೂರೆನ್ಸ್ ಸೌಲಭ್ಯಗಳ ಪರಿಶೀಲಿಸಲು ಹೇಳಿದರು ಹಾಗೂ ತಮ್ಮ ಆಸ್ಪತ್ರೆಯಿಂ ದ ಯಾವ ರೀತಿಯ ಪ್ರಮಾಣಿಕ ಚಿಕಿತ್ಸೆ, ಬಿಲ್ಲು ಇನ್ನಿತರ ವ್ಯವಸ್ತೆ ಗಳಾಗಲಿ ಮಾಡುತ್ತೇವೆ ಎಂದು ಭರವಸೆ ನೀಡಿದರು.ರೋಗಿಯ ಕುಟುಂಬಕ್ಕೆ ದೈರ್ಯ ತುಂಬುವ ಕೆಲಸ ಮಾಡಿದರು.

ಜನಸಾಮಾನ್ಯರಿಗೆ,ಹೃದಯಾಘಾತ,ಅಪಘಾತ ಮುಂತಾದ ಸಂಕಟ ಸಮಯದಲ್ಲಿ ಕೇಂದ್ರ ಸರಕಾರದಿಂದ ಆಯುಷ್ಮನ್ ಆರೋಗ್ಯ ವಿಮೆ ಯಾವುದೇ ತೊಂದರೆ ಇಲ್ಲದಂತೆ ಪಡೆದುಕೊಳ್ಳಲು ಸುಲಭ ವ್ಯವಸ್ಥೆ ಆಗಬೇಕು, ರಾಜಕೀಯ ವ್ಯಕ್ತಿ ಗಳು ಮಧ್ಯವರ್ತಿ ಗಳ ಮೊರೆ ಹೋಗುವ ಪ್ರತಿದಿನ ಜನಸಾಮಾನ್ಯರು ಪರದಾಡುವ ಸಮಸ್ಯೆಗಳ ಬಗ್ಗೆ ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಚಿಂತನೆ ನಡೆಸಿ ವ್ಯವಸ್ಥೆಯನ್ನು ಸರಿಪಡಿಸಿ ಕೊಟ್ಟಾಗ ಜನಸಾಮಾನ್ಯರಿಗೆ ದೊಡ್ಡ ಸೇವೆ ದೊರಕುತ್ತದೆ ಅರೋಗ್ಯ ಸಮಸ್ಯೆ ಯ ತೀವ್ರತೆ ಅರಿತು ಇರುವ ವ್ಯವಸ್ಥೆ ಗಳ್ನ್ನು ಜನ ಸಾಮಾನ್ಯ ರಿಗೆ ಪಡಕೊಳ್ಳುವಲ್ಲಿ ನಾವೆಲ್ಲರೂ ಸರ್ಮಿಸೋಣ ಎನ್ನುದೆ ಕಹಳೆ ನ್ಯೂಸ್ ಚಾನಲ್ ನ ಉದ್ದೇಶ ಮತ್ತು ಆಶಯ ವಾಗಿದೆ ಈ ಬಗ್ಗೆ ಸಂಬಂಧಪಟ್ಟವರು ಸ್ಪಂದಿಸಿ ಜನಸಾಮಾನ್ಯರ ಕಷ್ಟ ನಿವಾರಿಸಿ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ