
ಕೈಕಂಬ: ಅನುಮತಿ ಇಲ್ಲದೆ ವಿವಿಧ ಜಾತಿಯ ಕಟ್ಟಿಗೆಯನ್ನು ಸಾಗಿಸುತ್ತಿದ್ದ ಲಾರಿಯನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿ ಕಾರಿಗಳು ಬಡಗುಳಿಪಾಡಿ ಗ್ರಾಮದ ಗಂಜಿಮಠದಲ್ಲಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಟ್ಟಿಗೆಯನ್ನು ಮೂಡುಬಿದಿರೆ ಕಡೆಯಿಂದ ಮಂಗಳೂರಿಗೆ ಸಾಗಿಸಲಾಗುತ್ತಿತ್ತು.
ವಶಕ್ಕೆ ಪಡೆದ ಕಟ್ಟಿಗೆ ಮತ್ತು ವಾಹನದ ಮೌಲ್ಯ 2.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ವಾಹನ ಚಾಲಕ ಹಮೀದ್ ವಾಲ್ಪಾಡಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.