Monday, March 31, 2025
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಪುಂಜಾಲಕಟ್ಟೆ-ಚಾರ್ಮಾಡಿ ರಸ್ತೆ ಕಾಮಗಾರಿ 2 ತಿಂಗಳಲ್ಲಿ ಪೂರ್ಣ:ಮುಲ್ಲೈ ಮುಗಿಲನ್ -ಕಹಳೆ ನ್ಯೂಸ್

ಬೆಳ್ತಂಗಡಿ: ಪುಂಜಾಲ ಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಮಳೆಗಾಲಕ್ಕೆ ಮುನ್ನ ಮುಗಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದರು.

ತಾಲೂಕು ಕಚೇರಿಗೆ ದಿಢೀರ್‌ ಭೇಟಿ ನೀಡಿದ ಅವರು, ತಹಶೀಲ್ದಾರ್‌ ಸಹಿತ ಅಧಿಕಾರಿಗಳೊಂದಿಗೆ ಪ್ಲಾಟಿಂಗ್‌ ಸಮಸ್ಯೆ ಕುರಿತು ಸಭೆ ನಡೆಸಿ ಬಳಿಕ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಈ ಕಾಮಗಾರಿ ಮುಗಿದ ಬಳಿಕ ಚಾರ್ಮಾಡಿ ಘಾಟಿ ಅಭಿವೃದ್ಧಿ ಆರಂಭಿಸುವುದಾಗಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ಲಾಟಿಂಗ್‌ ಸಮಸ್ಯೆ
ಅತೀ ದೊಡ್ಡ ತಾಲೂಕಾದ ಬೆಳ್ತಂಗಡಿಯಲ್ಲಿ 1,680 ಕಡತ ಹಾಗೂ ಸರಕಾರಿ ಸರ್ವೇ ನಂಬರ್‌ಗಳಲ್ಲಿ 7,090 ಕಡತ ಪ್ಲಾಟಿಂಗ್‌ ಬಾಕಿಯಿದ್ದು ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಪ್ಲಾಟಿಂಗ್‌ಗೆ 30,529 ಕಡತಗಳಿದ್ದು ತಾಲೂಕಿನಲ್ಲೇ 7,090 ಅರ್ಜಿಗಳಿವೆ. ಇದಕ್ಕೆ ವನ್‌ ಟು ಫೈವ್‌ ಫಾರಂ ಮೂಲಕ ಪ್ಲಾಟಿಂಗ್‌ ನಡೆಸಬೇಕಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಲ್ಲೆಯಲ್ಲಿ 9,315 ವನ್‌ ಟು ಫೈವ್‌ ಫಾರಂ ಕೆಲಸ ಪೂರೈಸಿ ಅದನ್ನು ಸರ್ವೇ ಇಲಾಖೆಗೆ ಸಲ್ಲಿಸಲಾಗಿದೆ. ಉಳಿದ ಕಡತಗಳನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ. ಸರಕಾರದಿಂದ ಮಂಜೂರಾದ ಜಾಗಗಳಿಗೆ ಈ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ಪ್ಲಾಟಿಂಗ್‌ ಮಾಡಲಾಗುತ್ತಿತ್ತು. ಈಗ ಇಲಾಖೆಯಿಂದ ಸ್ವಯಂ ಪ್ರೇರಿತವಾಗಿ ಮಾಡಲಾಗುತ್ತಿದೆ ಎಂದರು.

ಕಡತ ವಿಲೇವಾರಿಗೆ ಸರ್ವರ್‌, ಸಿಬಂದಿ ಸಮಸ್ಯೆ ಇಲ್ಲ
ಬೆಳ್ತಂಗಡಿ ತಾಲೂಕಿನ ಕಂದಾಯ ಇಲಾಖೆಯಲ್ಲಿ ಸರ್ವರ್‌ ಮತ್ತು ಸಿಬಂದಿಯ ಹೆಚ್ಚಿನ ಸಮಸ್ಯೆ ಇಲ್ಲ. ವಿಎಗಳ ಮುಷ್ಕರದ ಸಂದರ್ಭ ಸಮಸ್ಯೆ ಉಂಟಾಗಿರಬಹುದು. ಆದರೆ ಈಗ ಹೆಚ್ಚಿನ ಕಡತಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಪಂಚಾಯತ್‌ನಲ್ಲಿ ಸರ್ವರ್‌ ಸಮಸ್ಯೆ ಇದ್ದರೆ ಗಮನಕ್ಕೆ ತರುವಂತೆ ತಿಳಿಸಿದರು.

ಬೇಸಗೆಯಲ್ಲಿ ನೀರಿನ ಅಭಾವ ಬಾರದಂತೆ ಸಭೆ ಕರೆದು ಸೂಕ್ತ ವ್ಯವಸ್ಥೆ ಕಲ್ಪಿಸಲು ಪ್ರತೀ ತಾಲೂಕು ಆಡಳಿತಕ್ಕೆ ಸೂಚಿಸಲಾಗಿದೆ. ಮಳೆ ಹಾನಿ ಪ್ರದೇಶಗಳ ಕುರಿತು ಹೆಚ್ಚಿನ ಒತ್ತು ನೀಡಿ ಅಗತ್ಯ ಸೌಕರ್ಯ ಕಲ್ಪಿಸಲೂ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ