Monday, March 31, 2025
ಜಿಲ್ಲೆಶೃಂಗೇರಿಸುದ್ದಿ

ಕೇರಳದಿಂದ ಬಂದು ತಾಯಿಯ ಭೇಟಿ ಮಾಡಿದ ನಕ್ಸಲ್‌ ಬಿ.ಜಿ. ಕೃಷ್ಣಮೂರ್ತಿ -ಕಹಳೆ ನ್ಯೂಸ್

ಶೃಂಗೇರಿ: ಕೇರಳದಲ್ಲಿ ಬಂಧನಕ್ಕೆ ಒಳಗಾಗಿದ್ದ ನಕ್ಸಲ್‌ ಬಿ.ಜಿ. ಕೃಷ್ಣಮೂರ್ತಿಯನ್ನು ಕೇರಳ ಜೈಲಿನಿಂದ ಬಿಗಿ ಪೊಲೀಸ್‌ ಭದ್ರತೆಯಲ್ಲಿ ಗುರುವಾರ ಶೃಂಗೇರಿಗೆ ಕರೆತರಲಾಗಿದ್ದು 2 ಗಂಟೆ ಕಾಲ ತಾಯಿಯೊಂದಿಗೆ ಕಳೆಯಲು ಅವಕಾಶ ಕಲ್ಪಿಸಲಾಯಿತು.

ನೆಮ್ಮಾರು ಗ್ರಾಮ ಪಂಚಾಯತ್‌ನ ಹೆಮ್ಮಿಗೆ ಚಂದ್ರಕಾಂತ್‌ 2004ರಲ್ಲಿ ನಕ್ಸಲರಿಂದ ಹಲ್ಲೆಗೊಳಗಾಗಿದ್ದು, ಈ ಸಂಬಂಧ 2021ರಲ್ಲಿ ಕೇರಳ ಪೊಲೀಸರಿಂದ ಕೃಷ್ಣಮೂರ್ತಿ ಬಂಧನಕ್ಕೆ ಒಳಗಾಗಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾಯಿ ಸುಶೀಲಮ್ಮ ಅವರನ್ನು ಭೇಟಿ ಮಾಡಬೇಕು ಎಂದು 2 ವರ್ಷದ ಹಿಂದೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದು, ನ್ಯಾಯಾ ಧೀಶರು ಮನವಿ ಪುರಸ್ಕರಿಸಿ, ಭೇಟಿಗೆ ಅವಕಾಶ ಕಲ್ಪಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ