Tuesday, April 1, 2025
ಅಂಕಣದಕ್ಷಿಣ ಕನ್ನಡಪುತ್ತೂರುಮಂಗಳೂರುಸಿನಿಮಾಸುದ್ದಿ

ರವಿ ರಾಮಕುಂಜ ಅವರು ನಟನಾ ಕಲೆಗೆ ಬರಲು ದೊಡ್ಡ ತಿರುವು ಯಾವುದು ಗೊತ್ತಾ..? ಅದ್ಭುತ ಕಲಾವಿದ ರವಿ ರಾಮಕುಂಜ..!! – ಕಹಳೆ ನ್ಯೂಸ್

ಇವರು ಸ್ಟೇಜ್ ಮೇಲೆ ಬಂದ್ರು ಅಂದ್ರೆ ಹಾಸ್ಯದ ರಸದೌತಣ, ಸಿನಿಮಾದಲ್ಲಿ ಇವರಿದ್ದಾರೆ ಅಂದ್ರೆ ನಗುವೇ ಕಾರಣ. ಅಂತಹ ಒಬ್ಬ ಅದ್ಭುತ ಕಲಾವಿದರೇ ರವಿ ರಾಮಕುಂಜ. ಹೌದು ಸಿನಿಮಾ ಸೀರಿಯಲ್, ರಿಯಾಲಿಟಿ ಶೋಗಳ ಮೂಲಕ ತನ್ನದೇ ಆದ ನಟನೆಯ ಮೂಲಕ ಪ್ರಖ್ಯಾತಿಯನ್ನು ಪಡೆದ ರವಿರಾಮಕುಂಜ ಅವರು ಹುಟ್ಟಿದ್ದು ರಾಮಕುಂಜ ಗ್ರಾಮದಲ್ಲಿ. ಪಿಯುಸಿ ಶಿಕ್ಷಣವನ್ನು ಪಡೆದಿರುವ ಇವರು ಬಡತನದಲ್ಲೇ ಹುಟ್ಟಿ ಬೆಳದವರು. ಇವರಿಗೆ ಜೀವನದ ದಾರಿ ತೋರಿಸಿದ್ದು ತುಳು ರಂಗಭೂಮಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಐದನೇ ತರಗತಿ ಓದುತ್ತಿರುವಾಗಲೇ ಶಿಕ್ಷಕ ಸೀತಾರಾಮ ಗೌಡ ಅವರ ಮಾರ್ಗದರ್ಶನದಲ್ಲಿ ನಾಟಕಗಳಲ್ಲಿ ನಟನೆ ಮಾಡುತ್ತಿದ್ದ ರವಿ ರಾಮಕುಂಜ ಅವರು 2007ರಲ್ಲಿ ಪಿಬಿ ರೈ ನೇತೃತ್ವದ ಮಂಗಳೂರು ನಂದಿಕೇಶ್ವರ ನಾಟಕ ತಂಡದ ಒಬ್ಬರು ಕಲಾವಿದ ಅಂತಿಮ ಕ್ಷಣದಲ್ಲಿ ಪ್ರದರ್ಶನಕ್ಕೆ ಬಾರದೇ ಇದ್ದ ಕಾರಣ ರವಿ ರಾಮಕುಂಜ ಅವರಿಗೆ ಅಲ್ಲಿ ನಟಿಸಲು ಅವಕಾಶ ದೊರೆಯುತ್ತದೆ. ಇದು ಅವರ ಬದುಕಿಗೆ ದೊಡ್ಡ ತಿರುವು ನೀಡಿತು. ಮುದುಕನ ಮದುವೆ, ಕಿವುಡನ ಕಿತಾಪತಿ, ಬಸ್ ಕಂಡಕ್ಟರ್ ನಾಟಗಳಲ್ಲಿ ಇವರು ಮಾಡಿದ ಅಭಿನಯ ಖ್ಯಾತಿ ಪಡೆದಿದೆ. ಬಳಿಕ ತುಳು ರಂಗಭೂಮಿಯಲ್ಲಿ ಬೇಡಿಕೆಯ ಕಲಾವಿದನಾಗಿ ಹೊರಹೊಮ್ಮಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಚ್ಚ ನೆತ್ತರ್ ಇವರು ಅಭಿನಯಿಸಿದ ಮೊದಲ ತುಳು ನಾಟಕ. ಬಳಿಕ ಶಿವಾನಂದ ಶೆಟ್ಟಿ ಮಂಗಲ್ಪಾಡಿ ನೇತೃತ್ವದ ಅಮ್ಮ ಕಲಾವಿದೆರ್ ಮಂಗಳೂರು ತಂಡದಲ್ಲಿ ಸೇರಿಕೊಂಡು ನಮ್ಮ ಅಮ್ಮ ಚಿಕ್ಕಮ್ಮ, ಮದಿಮೆದ ದುಂಬನಾನಿ ನಾಟಕಗಳಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆ ಬಳಿಕ ಕೃಷ್ಣ ಜಿ ಮಂಜೇಶ್ವರ ನೇತೃತ್ವದ ಐಸಿರಿ ನಾಟಕ ಕಲಾವಿದರು ತಂಡದಲ್ಲಿ ಕೈ ಪತ್ತಿನಾರ್, ಜನನೇ ಬೇತೆ ಹಾಗೂ ಅಂಚಗೆ ಇಂಚಗೆ ನಾಟನಕಗಳಲ್ಲೂ ಪ್ರಮುಖ ಪಾತ್ರೆಗಳಲ್ಲಿ ನಟಿಸಿದ್ದಾರೆ. ಇನ್ನು ಟಿವಿ ಮಧ್ಯಮಗಳಲ್ಲಿ ಪ್ರಸಾರವಾಗುವ ಕಾಮಿಡಿ ಶೋಗಳಲ್ಲಿ ಭಾಗವಹಿಸಿ ಪ್ರಖ್ಯಾತಿಯನ್ನು ಪಡೆದಿದ್ದು ಅದರಲ್ಲಿ ಮಂತ್ರವಾದಿಯ ಪಾತ್ರ ಬಹು ಜನಪ್ರಿಯ ಪಾತ್ರವಾಗಿದೆ.

ಇನ್ನು ದುಬೈ, ಮಸ್ಕತ್, ಬಹರೈನ್, ಮುಂಬಯಿ ಹಾಗೂ ಮಹಾರಾಷ್ಟ್ರದ ಇತರ ಕಡೆಗಳಲ್ಲೂ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರವಿ ರಾಮಕುಂಜ ಅವರು ಕೇವಲ ಹಾಸ್ಯ ನಟರು ಮಾತ್ರವಲಲ್ಲದೇ ಸಂಗೀತ ನಿರ್ದೇಶಕರೂ ಆಗಿದ್ದಾರೆ. ಇವರ ಸಂಗೀತ ಹಾಗೂ ನಿರ್ದೇಶನದ ಬೂಡಿಯಾರ್ ರಾಧಾಕೃಷ್ಣ ಸಾರಥ್ಯದ ಪುತ್ತೂರು ಕಲಾವಿದರು ಅಭಿನಯಿಸುವ ದಾದಂದ್ ಪಾನೊಡು ನಾಟಕ ಬಹು ಜನಪ್ರಿಯ.

ಇನ್ನು ರವಿ ರಾಮಕುಂಜ ಅವರು ಕೇವಲ ನಾಟಕಗಳಲ್ಲಿ ಮಾತ್ರವಲ್ಲದೇ ಹಲವಾರು ಸಿನಿಮಗಾಳಲ್ಲೂ ನಟಿಸಿ ಸೈ ಎನಿಸಿಕೊಂಡ ಕಲಾವಿದರು. ಇವರ ಕಾಮಿಡಿ ಶೋಗಳನ್ನು ವೀಕ್ಷಿಸುತ್ತಿದ್ದ ಪಿಲಿಬೈಲು ಯಮುನಕ್ಕ ಖ್ಯಾತಿಯ ಸೂರಜ್ ರೈ ಅವರು ಇವರನ್ನು ಗುರುತಿಸಿ ಅಮ್ಮೆರ್ ಪೊಲೀಸಾ ತುಳು ಚಿತ್ರದಲ್ಲಿ ಅವಕಾಶ ನೀಡಿದ್ದಾರೆ. ಬಳಿಕ ಸಂದೇಶ್ ಶೆಟ್ಟಿ ಅಜ್ರಿಯವರ ಮೂಲಕ ಕತ್ತಲಕೋಣೆ ಕನ್ನಡ ಚಲನಚಿತ್ರದಲ್ಲೂ ಅಭಿನಯಿಸಿದ್ದಾರೆ. ಬಳಿಕ ವಿಐಪಿ ಲಾಸ್ಟ್ ಬೆಂಚ್ ಕನ್ನಡ ಸಿನಿಮಾದಲ್ಲಿ ಹಾಸ್ಯ ನಟನಾಗಿ ಕಾಣಿಸಿಕೊಂಡಿದ್ದಾರೆ.

ಹೀಗೆ ಕನ್ನಡದ ಲುಂಗಿ ಸಿನಿಮಾ, ತುಳುವಿನ ಇಂಗ್ಲೀಷ್ ಬರ್ಪುಜಿ, ಮಿಸ್ಟರ್ ಬೋರಿ, ಪಿರ್ಕಿಲು ಬತ್ತೆರ್, ಲಕ್ಕಿ ಬಾಬು, ಭೋಜರಾಜ್ ಎಂಬಿಬಿಎಸ್, ಗಬ್ಬರ್ ಸಿಂಗ್, ಹೀಗೆ ಸಾಕಷ್ಟು ಸಿನಿಮಗಳಲ್ಲಿ ನಟಿಸಿದ್ದಾರೆ. ಜೊತೆಗೆ ನ್ನಡ ಸೀರಿಯಲ್ಸ್, ಆಲಬ ಸಾಂಗ್ಸ್, ಶಾರ್ಟ್ ಮೂವೀಸ್ ಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು 2021ರಲ್ಲಿ ನಡೆದ 66ನೇ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಇವರಿಗೆ ಲಭಿಸಿದೆ. ಜೊತೆಗೆ ತುಳುನಾಡ ರಂಗಬೊಳ್ಳಿ ಎಂಬ ಬಿರುದು ಕೂಡಾ ಸಿಕ್ಕಿದೆ. ಇನ್ನು ಇವರು ಯಕ್ಷಗಾನ ಕಲಾವಿದರೂ ಹೌದು. ಯಕ್ಷನಂದನ ಗೋಕುಲ ನಗರದ ಕಲಾವಿದ. ಗೋಪಾಲಕೃಷ್ಣ ಭಟ್ ಹೊಸಮಜಲು ಇವರ ಯಕ್ಷಗಾನ ಗುರು. ಮುಖ್ಯವಾಗಿ ಇವರು ಯಾವುದೇ ಕಾರ್ಯಕ್ರಮಗಳಿಗೆ ಶುಭಾಶಯ ವಿಡಿಯೋ ಮಾಡಿದ್ದಲ್ಲಿ ಅದಕ್ಕೆ 150 ರೂ ಪಡೆಯುತ್ತಿದ್ದು, ಇದನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಳಸುತ್ತಿರುವುದು ಹೆಮ್ಮೆಯ ವಿಚಾರ.

ಒಟ್ಟಿನಲ್ಲಿ ತನ್ನ ನಟನಾ ಕೌಶಲ್ಯದ ಮೂಲಕ ಎಲ್ಲರ ಮನೆ ಮಾತಾಗಿರುವ ರವಿ ರಾಮಕುಂಜ ಅವರು ಇನ್ನಷ್ಟು ಪ್ರಸಿದ್ಧತೆಯನ್ನು ಪಡೆದು ಜಗತ್ ಪ್ರಸಿದ್ಧರಾಗಿ ಹೊರಹೊಮ್ಮಲಿ ಎಂಬುವುದ ನಮ್ಮ ಆಶಯ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ