ಉಡುಪಿಯಲ್ಲಿ ಮೂರು ವಿಭಿನ್ನ ಬಣ್ಣಗಳು ಸೇರಿದಂತೆ ನಾಲ್ಕು ಕಲರ್ ನ ಕಲ್ಲಂಗಡಿ ಕೃಷಿಯನ್ನು ಮಾಡಿ ಯಶಸ್ವಿ-ಕಹಳೆ ನ್ಯೂಸ್

ಉಡುಪಿ: ಕಲ್ಲಂಗಡಿ ಹಣ್ಣು ಅಂದರೆ ಎಲ್ಲರಿಗೂ ಬಹಳ ಪ್ರಿಯವಾದ ಹಣ್ಣು.ಸಾಮಾನ್ಯವಾಗಿ ಕಲ್ಲಂಗಡಿ ಹಣ್ಣು ಕಾಣ ಸಿಗುವುದು ಕೆಂಪು ಬಣ್ಣದಲ್ಲಿ ಮಾತ್ರ.ಉಡುಪಿ ಜಿಲ್ಲೆಯ ಕೃಷಿಕರಾದ ಹಿರಿಯಡ್ಕದ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಮತ್ತು ಮಟ್ಟುವಿನ ಯಶೋದರ್ ಉಡುಪಿಯಲ್ಲಿ ಮೂರು ವಿಭಿನ್ನ ಬಣ್ಣಗಳು ಸೇರಿದಂತೆ ನಾಲ್ಕು ಕಲರ್ ನ ಕಲ್ಲಂಗಡಿ ಕೃಷಿಯನ್ನು ಮಾಡಿ ಯಶಸ್ವಿಯಾಗಿದ್ದಾರೆ.
ಕೃಷಿಕ ಯಶೋದರ್ ಅವರ ಸಾಧನೆ ಮೆಚ್ಚಲೆಬೇಕು. ಹೆಚ್ಚಾಗಿ ಮಟ್ಟು ಪ್ರದೇಶಕ್ಕೆ ಸಮುದ್ರ ಹತ್ತಿರವಾಗಿರುವುದರಿಂದ ಈ ಪ್ರದೇಶವು ಉಪ್ಪಿ ನೀರಿನಿಂದ ಕೂಡಿದೆ.ಈ ಪ್ರದೇಶದಲ್ಲಿ ಹೆಚ್ಚಾಗಿ ಮಟ್ಟು ಗುಳ್ಳ ಬಿಟ್ಟು ಬೇರೆ ಬೆಳೆಗಳು ಹೆಚ್ಚಾಗಿ ಬೆಳೆಯುದಿಲ್ಲ.ಆದರೆ ಈದೀಗ ಯಶೋದರ್ ಉಪ್ಪಿನೀರಿನ ಈ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಸುವ ಮೂಲಕ ಹೊಸ ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಯಶೋದರ್ ಮಾತನಾಡಿ ಈ ವರ್ಷ ನಾನು ಹಳದಿ ಕಲರ್ ಕಲ್ಲಂಗಡಿ ಹಣ್ಣು ಕೃಷಿ ಮಾಡಿದ್ದೇನೆ.ಅನ್ ಲೈನ್ ನೋಡಿ ಬೀಜ ತರಿಸಿ ಕೃಷಿ ಮಾಡಿದ್ದೇನೆ.ಉತ್ತಮಫಲ ಬಂದಿದೆ.ಮಾಮೂಲಿಯಾಗಿ ಗುಳ್ಳ ಬಿಟ್ಟು ಬೇರೆ ಎನು ಕೃಷಿ ಬೆಳೆಯವುದಿಲ್ಲ.ಇಲ್ಲಿ ಉಪ್ಪು ನೀರು ಆಗಿರುವುದರಿಂದ ಬೇರೆ ತರಕಾರಿ ಬೆಳೆಯಲು ಆಗುವುದಿಲ್ಲ.ಈಗ ಕಲ್ಲಂಗಡಿ ಬೀಜ ಬೆಲೆಯು ದುಬಾರಿಯಾಗಿರುವುದರಿಂದ ಜನರು ಇದನ್ನು ಬೆಳೆಯಲು ಹಿಂದೆ ಮುಂದೆ ನೋಡುವ ಪರಿಸ್ಥಿತಿ ಉಂಟಾಗಿದೆ ಎಂದರು.
ಇನ್ನು ಉಡುಪಿಯ ಹಿರಿಯಡ್ಕ ಸಮೀಪದ ಪ್ರಗತಿಪರ ಕೃಷಿಕ ಸುರೇಶ್ ನಾಯಕ್ ಕಲ್ಲಂಗಡಿ ಬೆಳೆದು ಸಾಧನೆಯನ್ನು ಮಾಡಿದ್ದಾರೆ. ಇಸ್ರೇಲ್ ಮತ್ತು ತೈವಾನ್ ನ ಮಾರುಕಟ್ಟೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಬಣ್ಣ ಬಣ್ಣದ ಕಲ್ಲಂಗಡಿ ಹಣ್ಣುಗಳನ್ನು ತನ್ನ ಗದ್ದೆಯಲ್ಲೂ ಬೆಳೆಸಿದ್ದಾರೆ.ಕರ್ನಾಟಕದ ಇತರೆ ಭಾಗಗಳಿಗೆ ಹೋಲಿಸಿದರೆ ಕರಾವಳಿ ಭಾಗದಲ್ಲಿ ಕೃಷಿ ಬೇಸಾಯ ತರಕಾರಿ ಹಣ್ಣಿನ ಬೆಳೆಗಳನ್ನು ಜನ ಕಡಿಮೆಯಾಗಿ ಬೆಳೆಯುತ್ತಾರೆ. ಆಹಾರದ ಬೆಳೆಗಳನ್ನು ಕರ್ನಾಟಕ ದೇಶದ ಬೇರೆ ಬೇರೆ ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.ಒಂದು ಕೆಜಿ ಬೀಜಕ್ಕೆ 70 ಸಾವಿರ ರೂಪಾಯಿಗಳಿದ್ದು, ಕಿಲೋ ಕಲ್ಲಂಗಡಿ 40 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಒಂದು ಉತ್ತರ ಭಾರತದ ಕೃಷಿ ಮೇಳಕ್ಕೆ ಬೆಟಿ ಕೊಟ್ಟಾಗ ತೈವಾನ್ ದೇಶದ ಕೇಸರಿ ಕಡುಕೆಂಪು ಮತ್ತು ಹಳದಿ ಬಣ್ಣದ ಕಲ್ಲಂಗಡಿ ಹಣ್ಣುಗಳ ಬೀಜವನ್ನು ಮಾರಾಟ ಮಾಡುತ್ತಿದ್ದರು. ಅಲ್ಲಿಂದ ಬೀಜ ತಂದು ಅಭಿವೃದ್ಧಿಪಡಿಸಿ ಸುಮಾರು 25 ಎಕರೆ ಗದ್ದೆಯಲ್ಲಿ ಮೂರು ಬಣ್ಣದ ಕಲ್ಲಂಗಡಿಗಳನ್ನು ಸುರೇಶ್ ನಾಯಕ್ ಬೆಳೆಸಿದ್ದೇನೆ.ಕಲರ್ ಕಲರ್ ಕಲ್ಲಂಗಡಿಗೆ ಎಲ್ಲ ಕಡೆ ಭಾರಿ ಡಿಮಾಂಡ್ ಸೃಷ್ಟಿಯಾಗಿದೆ ಎಂದು ಕೃಷಿಕ ಸುರೇಶ್ ನಾಯಕ್ ಮಾಹಿತಿ ನೀಡಿದರು.ನೇರಳೆ.. ಕಪ್ಪು, ಹಾಲುಬಿಳಿ ಬಣ್ಣಗಳಲ್ಲಿ ಕೂಡ ಕಲ್ಲಂಗಡಿ ಹಣ್ಣು ಇಸ್ರೇಲ್ ಕೃಷಿಕರು ಹೆಚ್ಚಾಗಿ ಬೆಳೆಸುತ್ತಾರೆ. ಮುಂದಿನ ವರ್ಷಗಳಲ್ಲಿ ಆ ಬಣ್ಣಗಳಲ್ಲೂ ಕಲ್ಲಂಗಡಿ ಬೆಳೆಸುತ್ತೇನೆ ಎಂದು ಸುರೇಶ ನಾಯಕ್ ಮಾಹಿತಿ ನೀಡಿದರು.