Wednesday, April 2, 2025
ರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

I Love You -2 ಎನ್ನುತ್ತಾ ಇಬ್ಬರು ಯುವತಿಯರನ್ನು ಮದುವೆಯಾದ ಯುವಕ-ಕಹಳೆ ನ್ಯೂಸ್

ತೆಲಂಗಾಣ: ಇಬ್ಬರು ಯುವತಿಯರ ಪ್ರೀತಿಯಲ್ಲಿ ಬಿದ್ದ ಯುವಕನೊಬ್ಬ ನಾನು ಇಬ್ಬರನ್ನೂ ಪ್ರೀತಿಸುತ್ತೇನೆಂದು ಹೇಳಿ ಯುವಕನೋರ್ವ ತಾನು ಪ್ರೀತಿಸಿದ ಇಬ್ಬರು ಯುವತಿಯರನ್ನೂ ಕುಟುಂಬದ ಆಶೀರ್ವಾದದೊಂದಿಗೆ ಒಂದೇ ಮಂಟಪದಲ್ಲಿ ಮದುವೆಯಾದ ಅಪರೂಪದ ಘಟನೆ ತೆಲಂಗಾಣದ ಲಿಂಗಪುರ ತಾಲೂಕಿನ ಗುಮ್ನೂರ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಯುವಕ ಸೂರ್ಯದೇವ್ ಕುಟುಂಬ ಮತ್ತು ಸ್ಥಳೀಯ ಸಮುದಾಯದ ಸಂಪೂರ್ಣ ಬೆಂಬಲದೊಂದಿಗೆ ಇಬ್ಬರು ಯುವತಿಯರಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೂರ್ಯದೇವ್ ಅಕ್ಕಪಕ್ಕದ ಗ್ರಾಮಗಳ ಇಬ್ಬರು ಯುವತಿಯರಾದ ಲಾಲ್‌ದೇವಿ ಮತ್ತು ಜಲಕರ್ ದೇವಿ ಎಂಬುವವರನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ಎರಡು ಗ್ರಾಮಗಳ ಜನರು ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಂತಿಮವಾಗಿ ಗಿರಿಜನ ಸಮುದಾಯದ ಹಿರಿಯರು ಹಾಗೂ ಗ್ರಾಮಸ್ಥರು ಇಬ್ಬರು ಮಹಿಳೆಯರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಸ್ಪರ ಮೂರು ಕುಟುಂಬಗಳ ಒಪ್ಪಂದದ ನಂತರ ಈ ಮೂವರ ಮದುವೆಗೆ ಅಧಿಕೃತವಾಗಿ ಮುದ್ರೆ ಒತ್ತಲಾಗಿದೆ. ತಮ್ಮ ಹಿರಿಯರ ಆಶೀರ್ವಾದದೊಂದಿಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಸಾಂಪ್ರದಾಯಿಕ ಬುಡಕಟ್ಟು ಪದ್ದತಿಯಂತೆ ಗುರುವಾರ ವಿವಾಹ ನೆರವೇರಿಸಲಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ