ಓಂ ಶ್ರೀ ಗೆಳೆಯರ ಬಳಗ (ರಿ.) ನಾಯಿಲ ನರಿಕೊಂಬು 19ನೇ ವಾರ್ಷಿಕೋತ್ಸವ ಓಂ ಶ್ರೀ ಪರ್ಪ -ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಓಂ ಶ್ರೀ ಗೆಳೆಯರ ಬಳಗ (ರಿ.) ನಾಯಿಲ ನರಿಕೊಂಬು ಇದರ 19ನೇ ವಾರ್ಷಿಕೋತ್ಸವ “ಓಂ ಶ್ರೀ ಪರ್ಪ ” ಸಂಘದ ಕಟ್ಟಡದ ವಠಾರದಲ್ಲಿ ಜರಗಿತು.
ಬೆಳಿಗ್ಗೆ ಸತ್ಯನಾರಾಯಣ ಪೂಜಿ, ಮಧ್ಯಾಹ್ನ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.
ಸಂಜೆ ಶ್ರೀ ದುರ್ಗಾಪರಮೇಶ್ವರಿ ಸಾನಿಧ್ಯ ಜನತಾಗ್ರಹ ನರಿಕೊಂಬು ಇಲ್ಲಿನ ಶ್ರೀದೇವಿ ಪಾತ್ರಿ ಶ್ರೀ ಪ್ರವೀಣ್ ಸ್ವಾಮೀಜಿ ಕುಣಿತ ಭಜನಾ ಸ್ಪರ್ಧೆಯ ಉದ್ಘಾಟನೆ ಮಾಡಿದರು. ಜಿಲ್ಲೆಯ ಪ್ರಸಿದ್ಧ ಏಳು ಭಜನಾ ತಂಡಗಳ ನಡುವೆ ಸ್ಪರ್ಧೆಗಳು ಜರಗಿತು. ಈ ಸಂದರ್ಭದಲ್ಲಿ ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರದ ಆಡಳಿತ ಮುಕ್ತಸರಾದ ಕೆ ಸುಂದರಕುಲಾಲ್, ಕೃಷಿಕರಾದ ಲಕ್ಷ್ಮೀನಾರಾಯಣ ಭಟ್ ಪಲ್ಲತ್ತಿಲ, ಶ್ರೀ ದುರ್ಗಾ ಕಂಟ್ರಕ್ಷನ್ ಸೂರಿಕುಮೆರು ಮಾಲಕರಾದ ಗೋಪಾಲ ಮೂಲ್ಯ ನೆಲ್ಲಿ, ಲಕ್ಷ್ಮಿ ಗಣೇಶ್ ಸೌಂಡ್ಸ್ ನ ಲಿಂಗಪ್ಪ ಕೊಟ್ಟಾರಿ, ಶ್ರೀ ಕ್ಷೇತ್ರ ನಂದಾವರದ ಅಭಿವೃದ್ಧಿ ಸಮಿತಿಯ ಸದಸ್ಯರಾದ ಅರುಣ್ ಕುಮಾರ್ ಕುಕ್ಕುದಕಟ್ಟೆ, ನರಿ ಕೊಂಬು ಪಂಚಾಯತ್ ಸದಸ್ಯರಾದ ಉಷಾ ಲಕ್ಷ್ಮಿ ರಾಮನಾಥ್, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ಗಣೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ರಾತ್ರಿ ಮಂಗಳೂರು ಅಗ್ರಜ ಬಿಲ್ಡರ್ಸ್ ನ ಮಾಲಕ ಸಂದೇಶ್ ಶೆಟ್ಟಿ ಅರೆಬೆಟ್ಟು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾನಿಧಿ ಹಾಗೂ ಆರೋಗ್ಯನಿಧಿ ಎಂಬ ಕಾರ್ಯಕ್ರಮದ ಮೂಲ ಉದ್ದೇಶಗೋಸ್ಕರ “ಓಂ ಶ್ರೀ ಪರ್ವ ” ಎನ್ನುವ ಕಾರ್ಯಕ್ರಮ ಆಯೋಜಿಸಿದ್ದು ಅಭಿನಂದನದಾಯಕ ಕಾರ್ಯಕ್ರಮವಾಗಿದೆ ಎಂದರು.
.
ವಗ್ಗ ಕಾವಳಪಡೂರಿನ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಮೋದ್ ರೈ ಕಾಡಬೆಟ್ಟು ಸಂಘ-ಸಂಸ್ಥೆಗಳ ಸದಸ್ಯರು ಕನಿಷ್ಠ ಪಕ್ಷ ವಾರದಲ್ಲಿ ಎರಡು ಗಂಟೆ ಸಮಯವನ್ನು ಸಮಾಜದ ಚಿಂತನೆಗಾಗಿ ಮೀಸಲಿಡಬೇಕು ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಧಾರ್ಮಿಕ ಕ್ಷೇತ್ರದಲ್ಲಿ ಜಗನ್ನಾಥ್ ಬಂಗೇರ ನಿರ್ಮಾಲ್, ಸಾಮಾಜಿಕ ಕ್ಷೇತ್ರದಲ್ಲಿ ಶೈಲೇಶ್ ಪೂಜಾರಿ ಕುರ್ಚಿಗುಡ್ಡೆ, ಮಾಧ್ಯಮ ಕ್ಷೇತ್ರದಲ್ಲಿ ವಿ ಜೆ ವಿಕ್ಯಾತ್ ರವರನ್ನುಸನ್ಮಾನಿಸಿ ಗೌರವಿಸಲಾಯಿತು.
ಸ್ಥಳೀಯ ಸಾಧಕರಾದ ಅನಂತೇಶ್, ಸೋನಿಕ, ಕೃತಿಕಾ ಅಖಿಲ್, ಸೃಜನ್ ಪೂಜಾರಿ ರವರನ್ನು ಗೌರವಿಸಲಾಯಿತು.
ನರಿಕೊಂಬು ಗ್ರಾಮ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ನವಜೀವನ ಗೇಮ್ಸ್ ಕ್ಲಬ್ ಸಂಘವನ್ನು ಗುರುತಿಸಿ “ಓಂ ಶ್ರೀ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನೈಕ್, ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್,ಬಂಟ್ವಾಳ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಉಮೇಶ್ ಬೋಳಂತೂರು, ಬಂಟ್ವಾಳ ಸಮಾಜ ಸೇವ ಸಹಕಾರಿ ಸಂಘದ ಉಪಾಧ್ಯಕ್ಷರಾದ ಜನಾರ್ದನ ಬೊಂಡಾಲ, ಬಿಸಿ ರೋಡ್ ಸಿವಿಲ್ ಇಂಜಿನಿಯರ್ ಸುದೀರ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಫ್ಲವರ್ ಡೆಕೋರೇಷನ್ ಮಾಲಕರ ಸಂಘದ ಉಪಾಧ್ಯಕ್ಷ ಅನಿಲ್ ಕೊಟ್ಟಾರಿ, ರಾಮ್ ಗಣೇಶ್ ಆಟೋ ವರ್ಕ್ಸ್ ಮಾಲಕರಾದ ಉಮೇಶ್ ನೆಲ್ಲಿಗುಡ್ಡೆ, ಗ್ರಾಮ ಪಂಚಾಯತ್ ಸದಸ್ಯರಾದ ಅರುಣ್ ಬೋರುಗುಡ್ಡೆ, ಓಂ ಶ್ರೀ ಮಹಿಳಾ ಮಂಡಳಿ ಅಧ್ಯಕ್ಷರಾದ ನಳಿನಿ ಶುಭಾಕರ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಓಂ ಶ್ರೀ ಗೆಳೆಯರ ಬಳಗದ ಅಧ್ಯಕ್ಷ ಕಿರಣ್ ಅಟ್ಲೂರು ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ನಂತರ ಸ್ಥಳೀಯ ಅಂಗನವಾಡಿ ಪುಟಾಣಿಗಳು, ವಿದ್ಯಾರ್ಥಿಗಳು, ಮಹಿಳಾ ಮಂಡಳಿಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ. “ದೈವ ರಾಜ್ಯ ಶ್ರೀ ಬಬ್ಬು ಸ್ವಾಮಿ “ಭಕ್ತಿ ಪ್ರಧಾನ ತುಳು ನಾಟಕ ಜರಗಿತು.