ಬೆಂಗಳೂರಿನ ಜನತೆಗೆ’ತ್ರಿಬಲ್ ಶಾಕ್’ : ನಾಳೆಯಿಂದ ಹಾಲು, ವಿದ್ಯುತ್ ದರ ಹೆಚ್ಚಳ : ಜೊತೆಗೆ ಇನ್ಮುಂದೆ ಕಸಕ್ಕೂ ಬೀಳುತ್ತೆ ಟ್ಯಾಕ್ಸ್.!- ಕಹಳೆನ್ಯೂಸ್

ಬೆಂಗಳೂರು : ಬೆಂಗಳೂರಿನ ಜನತೆಗೆ ತ್ರಿಬಲ್ ಶಾಕ್ ಎದುರಾಗಿದ್ದು, ನಾಳೆಯಿಂದ ಹಾಲು, ವಿದ್ಯುತ್ ದರ ಹೆಚ್ಚಳದ ಜೊತೆ ಕಸಕ್ಕೂ ಟ್ಯಾಕ್ಸ್ ಬೀಳಲಿದೆ.
ನಾಳೆಯಿಂದ ನಂದಿನಿ ಹಾಲಿನ ದರ ಲೀ.ಗೆ 4 ರೂ
ಹೌದು. ದುಬಾರಿ ದುನಿಯಾದಲ್ಲಿ ಹೆಚ್ಚುತ್ತಿರುವ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ವಿದ್ಯುತ್ ದರ , ಹಾಲು, ದುಬಾರಿಯಾಗಲಿದೆ.
ರಾಜ್ಯದಲ್ಲಿ ನಂದಿನಿ ಹಾಲಿನ ದರ ಲೀ.ಗೆ 4ರೂ ಏರಿಕೆಯಾಗಿದ್ದು, ಏ.1 ರಿಂದಲೇ ಜಾರಿಗೆ ಬರಲಿದೆ.ರಾಜ್ಯದಲ್ಲಿ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂ ಹೆಚ್ಚಳಕ್ಕೆ ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ನಿರ್ಧರಿಸಲಾಗಿದೆ. ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನಂದಿನಿ ಹಾಲಿನ ಬೆಲೆ ಏರಿಕೆ ಶಾಕ್ ನೀಡಿದೆ.ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ನಿರಂತರವಾಗಿ ಬೇಡಿಕೆ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 4ರೂ. ಹೆಚ್ಚಳ ಮಾಡಲಾಗಿದೆ. ಈ ಮೂಲಕ ರೈತರು ಹಾಗೂ ಹಾಲು ಒಕ್ಕೂಟಗಳ ಮನವಿಯನ್ನು ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ರಾಜ್ಯದಲ್ಲಿ ‘ವಿದ್ಯುತ್ ದರ’ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಳ
ಬೆಂಗಳೂರು : ರಾಜ್ಯದ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಿಸಿ ‘KERC’ ಆದೇಶ ಹೊರಡಿಸಿದೆ. ಬೆಲೆ ಏರಿಕೆ ಬಿಸಿಯಿಂದ ತತ್ತರಿಸಿದ್ದ ರಾಜ್ಯದ ಜನತೆಗೆ ಇದೀಗ ಕೆಇಆರ್ ಸಿ ಕರೆಂಟ್ ಶಾಕ್ ನೀಡಿದೆ. ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ವ್ ಎಸ್ಕಾಮ್ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ ದರ ಜಾರಿಗೆ ಬರಲಿದೆ.
ಘನ ತ್ಯಾಜ್ಯ ವಿಲೇವಾರಿ ಶುಲ್ಕ
ಬಸ್, ಮೆಟ್ರೋ ಪ್ರಯಾಣ ದರ, ಹಾಲು, ವಿದ್ಯುತ್ ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರು ಜನತೆಗೆ ಮತ್ತೊಂದು ಬಿಸಿ ತಟ್ಟಲಿದೆ. ಏಪ್ರಿಲ್ 1ರಿಂದ ಘನ ತ್ಯಾಜ್ಯ ವಿಲೇವಾರಿ ಶುಲ್ಕ ವಿಧಿಸುವುದಾಗಿ ಬಿಬಿಎಂಪಿ ಘೋಷಿಸಿದೆ. ಬಿಬಿಎಂಪಿ ಬಜೆಟ್ ನಲ್ಲಿ ಆಸ್ತಿ ತೆರಿಗೆ ಸೇರಿದಂತೆ ಬೇರೆ ಯಾವುದೇ ನೇರವಾಗಿ ಸಾರ್ವಜನಿಕರಿಗೆ ಹೊರೆ ಆಗುವಂತಹ ಘೋಷಣೆಗಳನ್ನು ಬಿಬಿಎಂಪಿ ಮಾಡಿಲ್ಲ. ಆದರೆ, ಮನೆಗಳಿಂದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವುದಕ್ಕೆ ಮಾಸಿಕ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ.
ಹೀಗೆ ವಿಧಿಸುವ ಶುಲ್ಕವನ್ನು ಬಿಬಿಎಂಪಿ ಆಸ್ತಿ ತೆರಿಗೆಯೊಂದಿಗೆ ಸಂಗ್ರಹಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸುವಾಗ ಈ ಘನತ್ಯಾಜ್ಯ ವಿಲೇವಾರಿ ಶುಲ್ಕವನ್ನು ಕೂಡ ಪಾವತಿಸಲು ವ್ಯವಸ್ಥೆ ಮಾಡಲಾಗುವುದು ಎನ್ನಲಾಗಿದೆ.