ನಟಿಯಾಗಲು ಅವಕಾಶ ಕೇಳಿ ಬಂದ ಯುವತಿಗೆ ಮೋಸ: ಕುಂಭಮೇಳ ಸುಂದರಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ -ಕಹಳೆ ನ್ಯೂಸ್

ನವದೆಹಲಿ: ಮಹಾಕುಂಭದ ಬೆಡಗಿ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ.
ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣದಡಿ ನಿರ್ದೇಶಕ ಸನೋಜ್ ಮಿಶ್ರಾ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಡಿ ದೆಹಲಿ ಹೈಕೋರ್ಟ್ ಮೆಟ್ಟೇಲೇರಿದ್ದ ಸನೋಜ್ ಮಿಶ್ರಾಗೆ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.
ಇದರ ಬೆನ್ನಲ್ಲೇ ಪೊಲೀಸರು ಸನೋಜ್ ಮಿಶ್ರಾ ಅರೆಸ್ಟ್ ಮಾಡಿದ್ದಾರೆ.
ಈ ಹಿಂದೆ ಯುವತಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಕೊಡಿಸುವುದಾಗಿ ಮಹಾ ನಗರಿಗೆ ಕರೆಯಿಸಿಕೊಂಡಿದ್ದ ನಿರ್ದೇಶಕ ಸನೋಜ್ ಮಿಶ್ರಾ, ಆಕೆಯ ಮೇಲೆ ಸತತ ಬಳಸಿಕೊಂಡಿದ್ದ. ಇಷ್ಟೇ ಅಲ್ಲ ಆಕೆಯ ವಿಡಿಯೋ, ಫೋಟೋಗಳನ್ನು ಸೆರೆ ಹಿಡಿದು ಬೆದರಿಸಿದ. ನಿರ್ದೇಶಕ ಸಿನಿಮಾದಲ್ಲಿ ಚಾನ್ಸ್ ಕೊಡಿಸುವ ನೆಪ, ಆಡಿಶನ್ ನೆಪದಲ್ಲಿ ಹಲವು ಹೊಟೆಲ್‌ಗಳಲ್ಲಿ ಲೈಂಗಿಕವಾಗಿ ಬಳಸಿಕೊಂಡಿದ್ದ. ಇದೇ ಕಾರಣದಿಂದ ಹಲವು ಬಾರಿ ಅಬಾರ್ಶನ್ ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಇದಕ್ಕೆ ಕೆಲ ದಾಖಲೆಯನ್ನು ಸಂತ್ರಸ್ತೆ ಒದಗಿಸಿದ್ದಾಳೆ.
ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದ ಸನೋಜ್ ಮಿಶ್ರಾಗೆ ಹಿನ್ನಡೆಯಾಗಿದೆ. ಆರೋಪವನ್ನು ತಳ್ಳಿಹಾಕಲು ನಿರ್ದೇಶಕರ ಬಳಿ ಸೂಕ್ತ ಪುರಾವೆಗಳಿಲ್ಲ. ಇನ್ನು ನಿರ್ದೇಶಕರ ವಾದವನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ನಿರೀಕ್ಷಣಾ ಜಾಮೀನ ನಿರಾಕರಣೆಯಾದ ಬೆನ್ನಲ್ಲೇ ಸನೋಜ್ ಮಿಶ್ರಾರನ್ನು ಪೊಲೀಸರು ಬಂಧಿಸಿದ್ದಾರೆ.
ನಟಿಯಾಗಲು ಅವಕಾಶ ಕೇಳಿ ಬಂದು ಮೋಸ ಹೋಗಿದ್ದೇನೆ ಎಂದು ಯುವತಿಯೊಬ್ಬಳು ನೀಡಿದ್ದ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಸನೋಜ್ ಮಿಶ್ರಾರನ್ನು ಬಂಧಿಸಿದ್ದಾರೆ. ಮೊನಾಲಿಸಾಗೆ ಬಣ್ಣದ ಬದುಕಿನ ಆಸೆ ತೋರಿಸಿ ಕರಿಯರ್ ಹಾಳುವ ಮಾಡುವ ಸಾಧ್ಯತೆ ಇದೆ ಎಂದು ಹಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.