ಅಂದು ಬೀಡಿ ಕಟ್ಟಿ ಜೀವನ ಸಾಗಿಸುತ್ತಿದ್ದ ಯುವತಿ, ಇಂದು ಕರ್ನಾಟಕವೇ ಹೆಮ್ಮೆ ಪಡುವ ಅದ್ಭುತ ನಟಿ ದಿವ್ಯಾ ಅಂಚನ್..!! – ಕಹಳೆ ನ್ಯೂಸ್

ಆಕೆ ಬೀಡಿ ಕಟ್ಟುತ್ತಾ, ಮನೆ ಕೆಲಸ, ತೋಟದ ಕೆಲಸ ಜೊತೆಗೆ ಮನೆಯಲ್ಲೇ ಕ್ರಾಫ್ಟ್ ವರ್ಕ್ ಹಾಗೂ ಹೂ ಕಟ್ಟಿ ಬಡತನದಲ್ಲೇ ಜೀವನ ಸಾಗಿಸ್ತಾ ಇದ್ದ ಕರಾವಳಿಯ ಯುವತಿ. ಆದ್ರೆ ಇಂದು ಇಡೀ ಕರ್ನಾಟಕವೇ ಕೊಂಡಾಡುವ ಮನೆಮಗಳು. ಅವರೇ ಕಾಮಿಡಿ ಕಿಲಾಡಿಗಳು ಖ್ಯಾತಿಯ ದಿವ್ಯಾ ಅಂಚನ್.
ಹೌದು. ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ದಿವ್ಯಾ ಈಗ ಇಡೀ ಕರ್ನಾಟಕವೇ ಹೆಮ್ಮೆ ಪಡುವಂತಹ ನಟಿಯಾಗಿ ಬೆಳೆದಿದ್ದಾರೆ. ಅಂದಹಾಗೆ ದಿವ್ಯಾ ಅಂಚನ್ ಅವರು ವೇಣೂರಿನ ನೇರಳ್‌ಪಲ್ಕೆಯ ಭಾರತೀ ಎಂಬವರ ಮಗಳು. ಪ್ರಾಥಾಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆ ಕುಜ್ಞೋಡಿ ಹಾಗೂ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಾಮಿಕ ಶಾಲೆ ಬಜಿರೆ, ಸರಕಾರಿ ಪ್ರೌಢ ಶಾಲೆ ವೇಣೂರಿನಲ್ಲಿ ಪ್ರೌಢ ಶಿಕ್ಷಣ, ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರಿನಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆಯಲ್ಲಿ ಪಡೆದುಕೊಂಡಿದ್ದಾರೆ.
ಶಾಲಾ ದಿನಗಳಲ್ಲೇ ನಟನೆ ಅಂದರೆ ಅಪಾರ ಆಸಕ್ತಿ ಹೊಂದಿರುವ ದಿವ್ಯಾ ಅವರಿಗೆ ಅದಕ್ಕಿಂತಲೂ ಹೆಚ್ಚು ಡ್ಯಾನ್ಸ್ ಮತ್ತು ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ. ಕ್ರೀಡೆಗಳಲ್ಲಿ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಅಥ್ಲೆಟಿಕ್‌ನಲ್ಲಿ ಜಿಲ್ಲಾ ಮಟ್ಟದವರೆಗೆ ಭಾಗವಹಿಸಿದ್ದಾರೆ. ಕಾಲೇಜು ದಿನಗಳಲ್ಲಿ ಕ್ರೀಡಾ ದಿನಗಳಿದ್ದಾಗ ಚಾಂಪಿಯನ್ ಕಪ್ ಕೂಡಾ ದಿವ್ಯ ಅಂಚನ್ ಅವರ ಪಾಲಾಗುತ್ತಿತ್ತು.
ಹೀಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಮುಂದುವರಿಯುತ್ತಿದ್ದ ದಿವ್ಯಾ ಅವರು ದೊಡ್ಡ ವೇದಿಕೆ ಎಂದು ಪ್ರವೇಶ ಮಾಡಿದ್ದು ಕಲಾಕಾರ್ ವೇಣೂರು ಎಂಬ ನಟನಾ ತರಗತಿ ಮುಖೇನ. ಅನೀಶ್ ಪೂಜಾರಿ ವೇಣೂರು ಹಾಗೂ ಸ್ಮಿತೇಶ್ ಎಸ್ ಬಾರ್ಯ ಇವರಿಬ್ಬರ ನಿರ್ದೇಶನದ ನೇತ್ರಾವತಿ ಎಂಬ ನಾಟಕದಲ್ಲಿ ನೇತ್ರ ಎಂಬ ಮುಖ್ಯ ಪಾತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಜೊತೆಗೆ ಹಲವಾರು ಡ್ಯಾನ್ಸ್ ಶೋಗಳಲ್ಲೂ ಭಾಗವಹಿಸುತ್ತಿದ್ದರು.
ಬಳಿಕ ಅನೀಶ್ ಪೂಜಾರಿಯವರಿಂದ ತರಬೇತಿ ಪಡೆದು ಝೀ ಕನ್ನಡದ ಖ್ಯಾತ ರಿಯಾಲಿಟಿ ಶೋ ಕಾಮಿಡಿ ಕಿಲಾಡಿಗಳು ಸೀಸನ್ 3 ಕ್ಕೆ ಆಡಿಶನ್ ಕೊಟ್ಟಿದ್ದಾರೆ. ಮೊದಲ ಬಾರಿ ವೇದಿಕೆ ಪ್ರವೇಶಸಿದಾಗ ಮೆಗಾ ಆಡಿಷನ್ ನಲ್ಲಿ ಅಭಿನಯಿಸಿದ ಮೀನು ಮಾರುವ ಮಂಗಳೂರಿನ ಹೆಣ್ಣುಮಗಳ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಬಳಿಕ ಆ ಶೋಗಳಲ್ಲಿ ಸಾಕಷ್ಟು ಪಾತ್ರಗಳನ್ನು ಮಾಡಿ ಇಡೀ ಕರ್ನಾಟಕವೇ ಕೊಂಡಾಡುವAತೆ ಗಮನ ಸೆಳೆದಿದ್ದಾರೆ. ಈ ವೇದಿಕೆಯಿಂದಾಗಿ ದಿವ್ಯಾ ಅವರಿಗೆ ಕನ್ನಡ ಇಂಡಸ್ಟಿçಯ ಪರಿಚಯವಾಗಿ ಕನ್ನಡದ ಬೇರೆ ಬೇರೆ ಸೀರಿಯಲ್ಸ್, ಸಿನಿಮಾ, ವೆಬ್ ಸಿರೀಸ್ ಜೊತೆಗೆ ತುಳು ಹಾಗೂ ಕನ್ನಡ ಚಿತ್ರರಂಗದ ಹಿರಿಯ ನಟ ನಟಿಯರ ಜೊತೆಗೆ ಅಭಿನಯ ಮಾಡುವಂತಹ ಅವಕಾಶ ದೊರೆಯಿತು.
ಕನ್ನಡದ ಧಾರವಾಹಿಗಳಾದ ನೇತ್ರಾವತಿ, ಗೌರಿಪುರದ ಗಯ್ಯಾಳಿಗಳು, ಹಿಟ್ಲರ್ ಕಲ್ಯಾಣ, ಭೂಮಿಗೆ ಬಂದ ಭಗವಂತ, ಲಕ್ಷಿö್ಮÃ ಬಾರಮ್ಮ, ಅಂತರಪಟ ಹೀಗೆ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿ ಕರ್ನಾಟಕದ ಮನೆಮಾತಾಗಿದ್ದಾರೆ. ಇನ್ನು ಟ್ಯಾಕೀಸ್ ಆ್ಯಪ್‌ನ ವನಜ, ಮಾಯೆ 3, ಗಿಲ್ಬಿಸ್ಟಿಕ್ ಫ್ಯಾಮಿಲಿ, ಬಾಯಿಬಡ್ಕಿ, ಮಿಸ್ಟರ್ ಕೋದಂಡ, ಒಪೋಸಿಟ್ ಹೌಸ್ ಕುಮುದ, ಹಳ್ಳಿ ಶ್ರಾದ್ಧಾ ಎಂಬ ವೆಬ್ ಸಿರೀಸ್‌ಗಳಲ್ಲೂ ಅಭಿನಯಿಸಿದ್ದಾರೆ.
ತುಳುವಿನ ಕಸರತ್ತ್ ಸಿನಿಮಾ, ಕನ್ನಡದ ಮನಸಾಗಿದೆ, ಮಂಡ್ಯ ಹೈದ, ಕ್ಯಾಡ್ಬರೀಸ್, ಭಾರತೀ ಟೀಚರ್ 7ನೇ ತರಗತಿ, ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಕಾಮಿಡಿ ಕಿಲಾಡಿಗಳು ಚಾಂಪಿಯನ್‌ಶಿಪ್ ಸೀಸನ್ 2 ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದಾರೆ.
ಒಟ್ಟು 200ಕ್ಕೂ ಅಧಿಕ ಸ್ಟೇಜ್ ಶೋ ನೀಡಿರುವ ದಿವ್ಯಾ ಅವರಿಗೆ ಹಲವಾರು ವೇದಿಕೆಗಳಲ್ಲಿ ಸನ್ಮಾನ ಪುರಸ್ಕಾರಗಳೂ ಕೂಡಾ ಲಭಿಸಿವೆ. ಇಷೆಲ್ಲಾ ಧಾರವಾಹಿ, ವೆಬ್ ಸಿರೀಸ್, ಸಿನಿಮಾಗಳಲ್ಲಿ ನಟಿಸಿರುವ ದಿವ್ಯಾ ಅವರಿಗೆ ಇವತ್ತಿಗೂ ನೆಚ್ಚಿನ ನಟನೆ ಅಂದರೆ ಅದು ಝೀ ಕನ್ನಡದ ಕಾಮಿಡಿ ಕಿಲಾಡಿ ವೇದಿಕೆಯ ಮೆಗಾ ಆಡಿಷನ್ ನಲ್ಲಿ ಅಭಿನಯಿಸಿದ ಮೀನು ಮಾರುವ ಮಂಗಳೂರಿನ ಹೆಣ್ಣು ಮಗಳ ಪಾತ್ರ. ಇನ್ನು ದಿವ್ಯಾ ಅವರ ತಾಯಿ ಭಾರತಿಯವರಿಗೆ ತನ್ನ ಮಗಳನ್ನು ದೊಡ್ಡ ವೇದಿಕೆಯಲ್ಲಿ ಕಾಣುವ ಆಸೆ ಇತ್ತು. ಅವರ ಆಸೆ ಕನಸುಗಳನ್ನು ಈಡೇರಿಸುವ ಜವಾಬ್ದಾರಿಯನ್ನು ಹೊತ್ತ ದಿವ್ಯಾ ಕೊನೆಗೂ ತಮ್ಮ ತಾಯಿಯ ಕನಸನ್ನು ನನಸಾಗಿಸಿದ್ದಾರೆ.
ಅದೇನೆ ಆಗ್ಲಿ ನಟನೆ ಮೂಲಕ ಕರ್ನಾಟಕದ ಮನೆ ಮಾತಾಗಿರುವ ದಿವ್ಯಾ ಅವರಿಗೆ ಕಲಾ ಮಾತೆ ಶಾರದೆಯ ಆಶೀರ್ವಾದದಿಂದ ಇನ್ನಷ್ಟು ಅವಕಾಶಗಳು ದೊರೆತು ಅತ್ಯುನ್ನತ ಮಟ್ಟವನ್ನು ತಲುಪಿ ಹೆಸರು ಮಾಡಿ ಕೀರ್ತಿ ತರಲಿ ಎಂಬುವುದು ನಮ್ಮ ಆಶಯ.