ಚಿನ್ನ, ಬೆಳ್ಳಿಯ ಅಭರಣ, ನಗದು ಮತ್ತು ಲ್ಯಾಪ್‌ಟಾಪ್ ಕಳವು ;ಆರೋಪಿಗಳ ಬಂಧನ -ಕಹಳೆ ನ್ಯೂಸ್

ಬೈಂದೂರು: ಉಪ್ಪುಂದ ಗ್ರಾಮದ ಬಪ್ಪೆಹಕ್ಕುವಿನ ಜನಾರ್ದನ ಗಾಣಿಗ ಅವರ ಮನೆಗೆ ಬೀಗ ಮುರಿದು ಕಪಾಟಿನಲ್ಲಿರಿಸಿದ್ದ ಚಿನ್ನ, ಬೆಳ್ಳಿಯ ಅಭರಣ, ನಗದು ಮತ್ತು ಲ್ಯಾಪ್‌ಟಾಪ್ ಕಳವು ಮಾಡಿದ್ದ ಆರೋಪಿಗಳನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ಯತಿರಾಜ್ ಜಿ. ಉಪ್ಪುಂದ, ಮಹೇಶ್ ಯಳಜಿತ್ ಹಾಗೂ ಕಾರ್ತಿಕ್ ನಾಗೂರು ಬಂಧಿತರು.
ಕಳವು ಮಾಡಲಾಗಿದ್ದ ಚಿನ್ನಾಭರಣ, ಲ್ಯಾಪ್‌ಟಾಪ್ ಮತ್ತು ಕೃತ್ಯಕ್ಕೆ ಬಳಸಿದ್ದ ಮೊಬೈಲ್‌ಗಳು ಸಹಿತ ಸುಮಾರು 3 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೈಂದೂರು ವೃತ್ತ ನಿರೀಕ್ಷಕ ಸವಿತ್ರ ತೇಜ ಮತ್ತು ಪಿಎಸ್‌ಐ ನೇತೃತ್ವದ ವಿಶೇಷ ತಂಡವು ಆರೋಪಿಗಳನ್ನು ಬಂಧಿಸಿದೆ.