Monday, April 7, 2025
ಮುಂಬೈರಾಜ್ಯರಾಷ್ಟ್ರೀಯಸುದ್ದಿ

141 ಕಿ.ಮೀ ದೂರದಲ್ಲಿರುವ ದ್ವಾರಕಾಗೆ ಪಾದಯಾತ್ರೆ ಹೊರಟ ಅನಂತ್ ಅಂಬಾನಿ-ಕಹಳೆ ನ್ಯೂಸ್

ಮುಂಬಯಿ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಹಾಗೂ ರಿಲಯನ್ಸ್ ಇಂಡಸ್ಟ್ರಿಯ ನಿರ್ದೇಶಕ ಅನಂತ್ ಅಂಬಾನಿ ಅವರು ಪಾದಯಾತ್ರೆಯೊಂದನ್ನು ಆರಂಭಿಸಿದ್ದಾರೆ.

ಅನಂತ್ ಅಂಬಾನಿ ಮಾರ್ಚ್ 27 ರಂದು ಜಾಮ್‌ನಗರದಿಂದ 141 ಕಿಲೋಮೀಟರ್ ದೂರದಲ್ಲಿರುವ ದ್ವಾರಕಾಗೆ ಪಾದಯಾತ್ರೆ ಆರಂಭಿಸಿದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ದೈವಭಕ್ತರೂ ಆಗಿರುವ ಅನಂತ್ ಅಂಬಾನಿ ಇದೆ ಬರುವ ಏಪ್ರಿಲ್ 10 ರಂದು ದ್ವಾರಕಾ ತಲುಪಲಿದ್ದಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನಂತ್ ಅಂಬಾನಿ ಅವರು ಭಗವಾನ್ ಶ್ರೀಕೃಷ್ಣನ ಪರಮ ಭಕ್ತರಾಗಿದ್ದು ಅದಕ್ಕೆಂದೇ ತಮ್ಮ 30ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ಬದಲು ಧಾರ್ಮಿಕವಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಶ್ರೀಕೃಷ್ಣನ ದ್ವಾರಕಾ ನಗರಕ್ಕೆ ಯಾತ್ರೆ ಕೈಗೊಂಡಿದ್ದಾರೆ.

ರಾತ್ರಿ ಹೊತ್ತು ಪಾದಯಾತ್ರೆ:
ಹಗಲು ಹೊತ್ತು ಪಾದಯಾತ್ರೆ ನಡೆಸಿದರೆ ಒಂದೆಡೆ ವಾಹನಗಳಿಂದ ಟ್ರಾಫಿಕ್ ಸಮಸ್ಯೆ ಇನ್ನೊಂದೆಡೆ ಜನಜಂಗುಳಿ ಈ ಎಲ್ಲವನ್ನು ಅರಿತ ಅನಂತ್ ಅಂಬಾನಿ ರಾತ್ರಿ ಹೊತ್ತು ಯಾತ್ರೆ ನಡೆಸಲು ನಿರ್ಧರಿಸಿದ್ದಾರೆ.

ನಿತ್ಯ 10 ರಿಂದ 12 ಕಿಲೋಮೀಟರ್ ನಡಿಗೆ:
ಜಾಮ್ ನಗರದಿಂದ ಪಾದಯಾತ್ರೆ ಕೈಗೊಂಡ ಅನಂತ್ ಅಂಬಾನಿ ಅರೋಗ್ಯದ ದೃಷ್ಟಿಯಿಂದ ನಿತ್ಯ ಹತ್ತರಿಂದ ಹನ್ನೆರಡು ಕಿಲೋಮೀಟರ್ ಯಾತ್ರೆ ನಡೆಸಲಿದ್ದಾರಂತೆ, ಜೊತೆಗೆ ಪೊಲೀಸ್ ಭದ್ರತೆ ಜೊತೆಗೆ Z+ ಭದ್ರತೆ ನೀಡಲಾಗಿದೆ ಎಂದು ಹೇಳಲಾಗಿದೆ.

ಆರನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ

ಇಂದಿಗೆ ಆರನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ ಈಗಾಗಲೇ 60 ಕಿಲೋಮೀಟರ್ ಕ್ರಮಿಸಿದ್ದಾರೆ. ಮುಂದಿನ ಏಳು, ಎಂಟು ದಿನಗಳಲ್ಲಿ ದ್ವಾರಕಾ ತಲುಪಲಿದ್ದಾರೆ. ಏಪ್ರಿಲ್ 8 ರ ವೇಳೆಗೆ ಅನಂತ್ ಅಂಬಾನಿ ದ್ವಾರಕಾ ತಲುಪಲಿದ್ದು ಇದೆ ವೇಳೆಗೆ ಅನಂತ್ ಅಂಬಾನಿ ಪತ್ನಿ ರಾಧಿಕಾ ಮರ್ಚೆಂಟ್ ದ್ವಾರಕಾ ತಲುಪಲಿದ್ದಾರೆ. ಇದಾದ ಬಳಿಕ ಇಬ್ಬರೂ ಸೇರಿ ಏಪ್ರಿಲ್ 10ರಂದು ಶ್ರೀಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ