Saturday, November 23, 2024
ಸುದ್ದಿ

ಕಡಲ ಮಕ್ಕಳಿಗೆ ಮೀನಿನ ಸುಗ್ಗಿ: ನಾಡದೋಣಿಗಳ ಬಲೆಗೆ ಬಂಪರ್ ಮೀನು – ಕಹಳೆ ನ್ಯೂಸ್

ಉಡುಪಿ: ಉಡುಪಿಯಲ್ಲಿ ಕಡಲ ಮಕ್ಕಳಿಗೆ ಮೀನಿನ ಸುಗ್ಗಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಅರಬ್ಬೀ ಸಮುದ್ರದ ತಟದಲ್ಲೇ ರಾಶಿ ರಾಶಿ ಮೀನುಗಳು ಬಲೆಗೆ ಸಿಲುಕತೊಡಗಿದೆ. ಕಾಪು ತಾಲೂಕಿನ ಮಟ್ಟು ಕಡಲ ಕಿನಾರೆಯಲ್ಲಿ ಬೂತಾಯಿ ಮೀನಿನ ಬುಗ್ಗೆ ಬಲೆಗೆ ಸಿಕ್ಕಿ ಬಲೆ ಹಾಕಿದ್ದ ಮೀನುಗಾರರಿಗೆ ಬಂಪರ್ ಮೀನು ಸಿಕ್ಕಿದೆ.

ಸಮುದ್ರ ತೀರದಲ್ಲಿ ನಾಡದೋಣಿ ಮೀನುಗಾರರ ಎರಡು ದೋಣಿಗಳು ಜೋಡು ಬಲೆ ಕಟ್ಟಿ ಮೀನುಗಾರಿಕೆ ಮಾಡುತ್ತಾರೆ. ಈ ಸಂದರ್ಭದಲ್ಲಿ ಸಂಚಾರ ಹೊರಟ ಮೀನಿನ ಬುಗ್ಗೆ ನಾಡದೋಣಿಗಳ ಬಲೆಗೆ ಸಿಲುಕಿದೆ. ಇಡೀ ದೋಣಿಯ ಸುತ್ತಲೂ ರಾಶಿ ರಾಶಿ ಮೀನು ಸೆರೆ ಸಿಕ್ಕಿದ ವೀಡಿಯೋ ಲಭ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಣ್ಣು ಹಾಯಿಸಿದಲ್ಲೆಲ್ಲಾ ಬಲೆಯ ವ್ಯಾಪ್ತಿಯಿಂದ ಹಾರುವ ಮೀನು ಕಾಣುತ್ತಿದ್ದು ವೀಡಿಯೋ ಬಹಳ ಕುತೂಹಲ ಹುಟ್ಟಿಸುತ್ತದೆ. ಸಮುದ್ರದ ಮಧ್ಯೆಯಲ್ಲಿ ಮೀನಿನ ಬುಗ್ಗೆ ಕಾಣಿಸೋದು ಸಾಮಾನ್ಯ, ಆದ್ರೆ ಕಡಲ ಬದಿಯಲ್ಲಿ ಇಷ್ಟು ಗಾತ್ರದಲ್ಲಿ ಮೀನು ಸಿಕ್ಕಿದ್ದು ಮೀನುಗಾರರಿಗೇ ಆಶ್ಚರ್ಯ ತಂದಿದೆ. ವೀಡಿಯೋ ವಾಟ್ಸಾಪ್.. ಫೇಸ್ ಬುಕ್ ನಲ್ಲಿ ಹರಿದಾಡಲು ಶುರುವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು