ಎಪ್ರಿಲ್ 19 ರಿಂದ 23 ರ ತನಕ ಸಂಸೆ ಭಗವಾನ್ 1008 ಪಾಶ್ವನಾಥ ಸ್ವಾಮಿ ಬಸದಿ ಕಾರ್ಮಣ್ಣು ಸಂಸೆ ಯಲ್ಲಿ ಪಂಚಕಲ್ಯಾಣ ಪೂರ್ವಕ ನೂತನ ಜಿನ ಬಿಂಬ ಪ್ರತಿಷ್ಠಾ ಮಹೋತ್ಸವ-ಕಹಳೆ ನ್ಯೂಸ್

ಕಳಸ : ಸಂಸೆ ಭಗವಾನ್ 1008 ಪಾಶ್ವನಾಥ ಸ್ವಾಮಿ ಬಸದಿ ಕಾರ್ಮಣ್ಣು ಸಂಸೆ ಯಲ್ಲಿ ಎಪ್ರಿಲ್ 19 ರಿಂದ 23 ರ ತನಕ ಪಂಚಕಲ್ಯಾಣ ಪೂರ್ವಕ ನೂತನ ಜಿನ ಬಿಂಬ ಪ್ರತಿಷ್ಠಾ ಮಹೋತ್ಸವವು ಜರುಗಲಿದ್ದು.
ನೂತನ ಜಿನ ಬಿಂಬ ಗಳನ್ನು ಮಂಗಳವಾರ ( 2-4-25) ಸಂಸೆ ಶ್ರೀ ಪದ್ಮಾವತಿ , ವರಮಹಾಲಕ್ಷ್ಮಿ ಅಮ್ಮನವರ ದೇವಸ್ಥಾನ ದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮೆರವಣಿಗೆಯ ಮೂಲಕ ಕಾರ್ಮಣ್ಣು ದೇವಸ್ಥಾನ ಕ್ಕೆ ಪುರ ಪ್ರವೇಶ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಮಣ್ಣು ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಕಾರ್ಮಣ್ಣು ಕುಟುಂಬಸ್ಥರು, ಊರ- ಪರ ಊರಿನ ಧರ್ಮ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಧಾರಕಾರವಾಗಿ ಮಳೆ ಆಗಿದ್ದು ವಿಶೇಷ ವಾಗಿತ್ತು