Tuesday, April 8, 2025
ಜಿಲ್ಲೆದಕ್ಷಿಣ ಕನ್ನಡಮಂಗಳೂರು

ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ನಿಂದ ಗೀತಾ ಬಾಯಿಗೆ ಆರ್ಥಿಕ ನೆರವು -ಕಹಳೆ ನ್ಯೂಸ್

ಮಂಗಳೂರು:ಡ್ರಾಮೆನ್ ನಾರ್ವೆಯಲ್ಲಿ ನಡೆಯಲಿರುವ ವಿಶ್ವ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಗೀತಾ ಬಾಯಿ ಅವರಿಗೆ ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ವತಿಯಿಂದ ಆರ್ಥಿಕ ಸಹಾಯದ ಚೆಕ್ ಅನ್ನು ಸಂಸ್ಥೆಯ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈಯವರು ಹಸ್ತಾಂತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕ್ರೀಡಾಪಟು ಗೀತಾ ಬಾಯಿ ಡ್ರಾಮೆನ್ ನಾರ್ವೆಯಲ್ಲಿ ನಡೆಯುವ ಈ ಸ್ಪರ್ಧಾ ಕೂಟದಲ್ಲಿ ಭಾಗವಹಿಸಲು ನಾಲ್ಕರಿಂದ ಐದು ಲಕ್ಷ ರೂಪಾಯಿ ಖರ್ಚು ಬರುತ್ತದೆ. ವೀಸಾ, ವಿಮಾನ ಪ್ರಯಾಣ, ವಸತಿ, ಜೆರ್ಸಿ ಸಹಿತ ಇತರ ಖರ್ಚುಗಳಿಗಾಗಿ ತಾನು ಸಂಘ, ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ಜನರು ನೀಡುವ ಧನಸಹಾಯದ ಮೇಲೆ ಅವಲಂಬಿತಳಾಗಬೇಕಿದೆ. ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಮತ್ತು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಗೆ ತಾನು ಅಭಾರಿಯಾಗಿದ್ದೇನೆ. ಭಾರತಕ್ಕಾಗಿ ಪದಕ ಗೆಲ್ಲಲು ಕಠಿಣ ಅಭ್ಯಾಸದಲ್ಲಿ ನಿರತಳಾಗಿದ್ದೇನೆ. ಸಹೃದಯಿಗಳ ಶುಭ ಹಾರೈಕೆಯಿಂದ ಪದಕ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹನುಮಂತ ಕಾಮತ್, ನರೇಶ್ ಪ್ರಭು, ಚೇತನ್ ಕಾಮತ್, ಕಿರಣ್ ಶೆಣೈ, ರಜತ್ ಭಂಡಾರಕಾರ್, ನಾಗೇಂದ್ರ ಶೆಣೈ, ಕಾರ್ತಿಕ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ