ಏ.6 ರಂದು ಮಂಗಳೂರು ಪುರಭವನದಲ್ಲಿ ಸನಾತನ ನೃತ್ಯ ಪ್ರೇರಣ ಮತ್ತು ಭರತನಾಟ್ಯ ಕಾರ್ಯಕ್ರಮ -ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ಏಪ್ರಿಲ್ 6 ಬಾನುವಾರ ಸಂಜೆ 6 ಗಂಟೆಗೆ ಸನಾತನ ನೃತ್ಯ ಪ್ರೇರಣಾ ಮತ್ತು ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ.
ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾಲಯ ನಡೆಸಿದ 2024 ನೇ ಸಾಲಿನ ಭರತನಾಟ್ಯದ ವಿದ್ವತ್ ಅಂತಿಮ ಪರೀಕ್ಷೆಯನ್ನು ತೇರ್ಗಡೆ ಸನಾತನ ನಾಟ್ಯಾಲಯದ ವಿದ್ಯಾರ್ಥಿಗಳಾದ ಸಿಂಚನಾ ಎಸ್ ಕುಲಾಲ್,ವಿಜಿತಾ ಕೆ ಶೆಟ್ಟಿ,ವೈಷ್ಣವಿ ತಂತ್ರಿ,ಜಾಹ್ನವಿ ಎಸ್ ಶೇಖ,ಧೃತಿ ಆರ್ ಶೇರಿಗಾರ್,ಸಂಹಿತಾ ಕೊಂಚಾಡಿ,ಸ್ನೇಹ ಪೂಜಾರಿ,ಮತ್ತು ಶಾರ್ವರಿ ವಿ ಮಯ್ಯ ಇವರನ್ನು ಅಭಿನಂದಿಸಲಾಗುವುದು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಪಿ .ಎಲ್.ಧರ್ಮ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಶ್ರೀ ಮಂಗಳಾದೇವಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಶ್ರೀ ಅರುಣ್ ಐತಾಳ್ ಮತ್ತು ನೃತ್ಯ ಭಾರತಿ ಕದ್ರಿಯ ಕರ್ನಾಟಕ ಕಲಾಶ್ರೀ ವಿದುಷಿ ಗೀತಾ ಸರಳಾಯ ಭಾಗವಹಿಸಲಿದ್ದಾರೆ.ಬಳಿಕ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶ್ರೀಲತಾ ನಾಗರಾಜ್ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನ ಜರಗಲಿದೆ.ಕಲಾಬಿಮಾನಿಗಳಿಗೆ ಹಾರ್ದಿಕ ಸ್ವಾಗತ ಕೋರಲಾಗಿದೆ.