ಪುತ್ತೂರು:ವಿವೇಕಾನಂದ ಕಾಲೇಜಿಗೆ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಶಸ್ತಿ-ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ) ಕಾಲೇಜಿನ ಯಕ್ಷರಂಜಿನಿ ತಂಡದ ವಿದ್ಯಾರ್ಥಿಗಳು ಸುರತ್ಕಲ್ ಗೋವಿಂದದಾಸ್ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಫರ್ಧೆ ‘ಯಕ್ಷಯಾನ 2025’ ರಲ್ಲಿ ಬಬ್ರುವಾಹನ ಕಾಳಗ ಎನ್ನುವ ಪ್ರಸಂಗವನ್ನು ಪ್ರಸ್ತುತಪಡಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಜೊತೆಗೆ ಕಿರೀಟ ವೇಷದಲ್ಲಿ ಭವಿಷ್ ಭಂಡಾರಿಗೆ ಪ್ರಥಮ ಬಹುಮಾನ ಹಾಗೂ ಸ್ತಿçà ವೇಷ ವಿಭಾಗದಲ್ಲಿ ಭಾಗ್ಯಶ್ರೀ ಇವರಿಗೆ ತೃತೀಯ ಬಹುಮಾನವನ್ನು ಗಳಿಸಿರುತ್ತಾರೆ.
ಇವರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಸುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು
ಅಭಿನAದಿಸಿದ್ದಾರೆ. ಕಾಲೇಜಿನ ಯಕ್ಷರಂಜಿನಿಯ ಸಂಯೋಜಕ ವಿಂದ ಶರ್ಮಾ ಸಹಕರಿಸಿದ್ದಾರೆ.