Sunday, January 19, 2025
ಸುದ್ದಿ

ಮಾಲ್ಡೀವ್ಸ್​ ಸ್ಥಿರ, ಪ್ರಜಾಪ್ರಭುತ್ವ, ಶಾಂತಿ ಹಾಗೂ ಶ್ರೀಮಂತ ಗಣರಾಜ್ಯವೆನಿಸಿಕೊಳ್ಳಲಿ: ಪ್ರಧಾನಿ ಮೋದಿ – ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ಮೋದಿಯವರು ಇದೇ ಮೊದಲ ಬಾರಿಗೆ ಮಾಲ್ಡೀವ್ಸ್​ಗೆ ಭೇಟಿ ನೀಡುತ್ತಿದ್ದು, ಈಗಾಗಲೇ ಟ್ವೀಟ್​ ಮೂಲಕ ನೂತನ ಅಧ್ಯಕ್ಷ ಸೋಲಿಹ್​ ಅವರಿಗೆ ಶುಭ ಕೋರಿದ್ದಾರೆ. ಮಾಲ್ಡೀವ್ಸ್​ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ.

ಮಾಲ್ಡೀವ್ಸ್​ನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಇಬ್ರಾಹಿಂ ಮಹಮ್ಮದ್​ ಸೋಲಿಹ್​ ಅವರಿಗೆ ನಾನು ಶುಭ ಹಾರೈಸುತ್ತೇನೆ. ಅಭಿವೃದ್ಧಿ ಕೆಲಸಗಳ ಸಾಕ್ಷಾತ್ಕಾರಕ್ಕೆ ಅದರಲ್ಲೂ ಮೂಲಸೌಕರ್ಯಗಳು, ಆರೋಗ್ಯ, ಸಂಪರ್ಕ, ಮಾನವಸಂಪನ್ಮೂಲಗಳ ಅಭಿವೃದ್ಧಿ ಮಾಲ್ಡೀವ್ಸ್​ ಸರ್ಕಾರದ ಪ್ರಮುಖ ಗುರಿಯಾಗಲಿ. ಪ್ರಗತಿ ಕಾರ್ಯಗಳಲ್ಲಿ ಭಾರತ ಸರ್ಕಾರ ಜತೆಯಾಗುತ್ತದೆ ಎಂದು ಟ್ವೀಟ್​ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಲ್ಡೀವ್ಸ್​ ಸ್ಥಿರ, ಪ್ರಜಾಪ್ರಭುತ್ವ, ಶಾಂತಿ ಹಾಗೂ ಶ್ರೀಮಂತ ಗಣರಾಜ್ಯವೆನಿಸಿಕೊಳ್ಳಲಿ ಎಂದು ಆಶಿಸುತ್ತೇವೆ. ಒಳ್ಳೆಯದಾಗಲಿ ಎಂದು ಮೋದಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು