ಪ್ರವೀಣ್ ನೆಟ್ಟಾರ್ ಕೊ*ಲೆ ಆರೋಪಿಗೆ ನ್ಯಾಯಾಲಯದ ಬಳಿ ಹಣೆಗೆ ಮುತ್ತು-ಕಹಳೆ ನ್ಯೂಸ್

ಬೆಳ್ತಂಗಡಿ: ಬೆಳ್ಳಾರೆ ಪ್ರವೀಣ್ ನೆಟ್ಟಾರ್ ಕೊ*ಲೆ ಪ್ರಕರಣದ ಆರೋಪಿ ಬೆಳ್ಳಾರೆ ನಿವಾಸಿ ಸಾಫಿ ಬೆಳ್ಳಾರೆಯನ್ನು ಎ.7 ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸಾಫಿ ಬೆಳ್ಳಾರೆಯನ್ನು ಬಾಡಿ ವಾರೆಂಟ್ ಮೂಲಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಕರೆತಂದು ಕೋರ್ಟ್‌ಗೆ ಹಾಜರು ಪಡಿಸಲಾಯಿತು.
ವಿಚಾರಣೆ ಬಳಿಕ ವಾಪಸು ಬೆಂಗಳೂರಿಗೆ ಕರೆದೊಯ್ಯಲಾಯಿತು. ಇದು 2017 ರಲ್ಲಿ ಆರ್.ಎಸ್.ಎಸ್ ಹಾಗೂ ಕಲ್ಲಡ್ಕ ಭಟ್ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ.
ಸಾಫಿ ಬೆಳ್ಳಾರೆಯು ಪ್ರವೀಣ್ ನೆಟ್ಟಾರ್ ಹ*ತ್ಯೆ ಪ್ರಕರಣದಲ್ಲಿ ಎರಡು ವರ್ಷದ ಹಿಂದೆ ಎನ್.ಐ.ಎ ಬಂಧಿಸಿ ನ್ಯಾಯಾಂಗ ಬಂಧನಲ್ಲಿರಿಸಿತ್ತು. ಈತನಿಗೆ ಇನ್ನೂ ಜಾಮೀನು ಮಂಜೂರಾಗಿಲ್ಲ.
ನೆಟ್ಟಾರು ಕೊ*ಲೆ ಆರೋಪಿಗೆ ಮುತ್ತು
ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಆರೋಪಿ ಸಾಫಿ ಬೆಳ್ಳಾರೆಯನ್ನು ಕರೆದು ತರುತ್ತಿರುವ ಸಂದರ್ಭ ಆತನಿಗೆ ಸಾಂತ್ವನ ಹೇಳಿ ಹಣೆಗೆ ಮುತ್ತಿಕ್ಕಿದ ಸಂಗತಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ. ಉಜಿರೆ ನಿವಾಸಿ ಎಂದು ಗುರುತಿಸಲಾಗಿದೆ.