Wednesday, April 23, 2025
ಜಿಲ್ಲೆಬೆಳಗಾವಿಸಂತಾಪಸುದ್ದಿ

ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು-ಕಹಳೆ ನ್ಯೂಸ್

ಬೆಳಗಾವಿ: ರಾಮನಗರದಲ್ಲಿರುವ ಧರ್ಮನಾಥ ಭವನದ ಬಳಿಯ ಚಂದ್ರಕಾಂತ ಕಾಗವಾಡ ಅವರ ಬಾಯ್ಸ್ ಹಾಸ್ಟೆಲ್‌ನಲ್ಲಿ ಎಂಜಿನಿಯರಿಂಗ್‌ ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ರಾತ್ರಿ ನಡೆದಿದೆ.

ರಾಯಭಾಗ ತಾಲ್ಲೂಕಿನಲ್ಲಿ ಭಾವನಸೌಂದತ್ತಿ ಗ್ರಾಮದ ನಿವಾಸಿ ಪ್ರಜ್ವಲ್ ಕುಪ್ಪಾನಟ್ಟಿ (20) ಆತ್ಮಹತ್ಯೆಗೆ ಶರಣಾದವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಮವಾರ ಕಾಲೇಜಿಗೆ ತೆರಳದೇ ಹಾಸ್ಟೆಲ್‌ನಲ್ಲಿಯೇ ಇದ್ದ ಪ್ರಜ್ವಲ್ ನೇಣು ಹಾಕಿಕೊಂಡಿರುವುದು ಸಂಜೆ ಬೆಳಕಿಗೆ ಬಂದಿದೆ. ಮಾಹಿತಿ‌ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಆತ್ಮಹತ್ಯೆ ನಿಖರ ಕಾರಣ ತಿಳಿದುಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಮಾಳಮಾರುತಿ‌ ಪೊಲೀಸ್ ಠಾಣೆಯಲ್ಲಿ‌‌ ಪ್ರಕರಣ‌ ದಾಖಲಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ