ನ.14ರಂದು ಬೆಳಿಗ್ಗೆ 8 ನೇ ತರಗತಿ ವಿದ್ಯಾರ್ಥಿನಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ವಾಮದಪದವಿನಲ್ಲಿ ನಡೆದಿತ್ತು. ಮಣ್ಣೂರು ನೇರಳಕಟ್ಟೆ ನಿವಾಸಿ ಚಂದ್ರ ಪೂಜಾರಿಯವರ ಮಗಳು ಶ್ರದ್ಧಾಳ ಸಾವು ಮೇಲ್ನೋಟಕ್ಕೆ ಬಾವಿಗೆ ಬಿದ್ದು ಆತ್ಮಹತ್ಯೆ ಎಂದು ಕಂಡರೂ ಇದೊಂದು ಪೂರ್ವಯೋಜಿತ ಕೊಲೆ ಎಂದು ಶಂಕಿಸಲಾಗಿದೆ.
ಕಾರಣ ಶ್ರದ್ಧಾಳ ತಾಯಿ ಸುಜಾತರಿಗೂ ಜೊಕ್ಕಿ ರೋಡ್ರಿಗಸ್ ಗು ಅಕ್ರಮ ಸಂಬಂಧ ಸುಮಾರು ಸಮಯದಿಂದ ಇರುವುದು ಎಲ್ಲಾರಿಗೂ ತಿಳಿದಿರುವ ವಿಷಯ. ಈ ವಿಷಯವು ಶ್ರದ್ಧಾಳಿಗೆ ಗೊತ್ತಾಗಿದ್ದು ಇತರರಿಗೂ ಹಾಗೂ ತಂದೆಗೂ ತಿಳಿಸಬಹುದೆಂದು ಜೊಕ್ಕಿ ರೋಡ್ರಿಗಸ್ ಅವಳನ್ನು ಕೊಂದು ಬಾವಿಗೆ ಹಾಕಿರುತ್ತಾನೆ ಎಂದು ಸಂಶಯ ಉಂಟಾಗಿದೆ.
ಆದ್ದರಿಂದ ಶ್ರದ್ಧಾಳ ಸಾವು ಹೇಗಾಗಿದೆ ಎಂದು ಸೂಕ್ತ ತನಿಖೆ ನಡೆಸಬೇಕೆಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ(ರಿ) ಪಿಲಾತಬೆಟ್ಟು ಇವರು ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿಗೆ ಮನವಿ ಸಲ್ಲಿಸಿದರು.