
ಪುತ್ತೂರು : ಭವಿಷ್ಯದ ಬಗ್ಗೆ ಕಲ್ಪನೆಯಿರಲಿ. ಅದಕ್ಕಾಗಿ ಸರಿಯಾದ ಮಾರ್ಗವನ್ನು ಈಗಲೇ ಆರಿಸಿ. ಕೋರ್ಸ್ನ ಮಾಹಿತಿ ಇಲ್ಲದೆ ಇನ್ನೊಬ್ಬರನ್ನು ಹಿಂಬಾಲಿಸಬೇಡಿ. ನಿಮ್ಮ ಆಯ್ಕೆ ಯಾವುದೆಂದು ನಿಮಗೆ ತಿಳಿದಿರಲಿ. ನಿಮ್ಮ ಕೌಶಲ್ಯವನ್ನು ಆಧರಿಸಿ ಕೋರ್ಸ್ನ್ನು ಆಯ್ಕೆ ಮಾಡಿ ಎಂದು ವಿವೇಕಾನಂದ ಕಾಲೇಜಿನ ಬಿಬಿಎ ವಿಭಾಗದ ಮುಖ್ಯಸ್ಥರು ರೇಖಾ.ಪಿ. ಹೇಳಿದರು. ಉದ್ಯೋಗ ಕ್ಷೇತ್ರ ಬಹಳಷ್ಟು ಸ್ಪರ್ಧಾತ್ಮಕವಾಗಿದೆ, ಉತ್ತಮ ಅಂಕದ ಜೊತೆಗೆ ಉತ್ತಮ ಕೌಶಲ್ಯ ಇದ್ದರೆ ಮಾತ್ರ ಉದ್ಯೋಗ ಪಡೆಯಲು ಸಾಧ್ಯ. ಎಐ, ರೋಬೋಟ್‌ಗಳು ಹೆಚ್ಚು ಪ್ರಭಾವಶಾಲಿಯಾಗಿವೆ, ನಿಮ್ಮ ಬುದ್ದಿವಂತಿಕೆ ಅವುಗಳಿಗೆ ಪೈಪೋಟಿ ಕೊಡುವಂತಿರಬೇಕು. ನಿಮ್ಮ ಪ್ರೊಫೈಲ್ ಎಷ್ಟು ಬಲಿಷ್ಠವಾಗಿರುತ್ತದೆಯೋ ಅಷ್ಟು ಉತ್ತಮ ಉದ್ಯೋಗ ನಿಮ್ಮದಾಗುತ್ತದೆ ಎಂದರು.
ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಮಹಾವಿದ್ಯಾಲಯದ ಟ್ರೈನಿಂಗ್ ಮತ್ತು ಪ್ಲೇಸ್‌ಮೆಂಟ್ ಹಾಗೂ ಐಕ್ಯೂಎಸಿ ವತಿಯಿಂದ ನಡೆದ “ಎ ಪಾತ್ ಟುವರ್ಡ್ಸ್ ಪ್ರೊಫೆಷನಲ್ ಗ್ರೂಮಿಂಗ್ ಎನ್ನುವ ವಿಷಯಾಧಾರಿತ, ಪ್ಲೇಸ್ಮೆಂಟ್ ಆಂಡ್ ಕೆರಿಯರ್ ಕನೆಕ್ಟ್ ಎನ್ನುವ ಎರಡು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ವೇತಾ ಜೆ. ರಾವ್ ಮತ್ತು ಕಾಲೇಜಿನ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಸ್ಮಿತಾ ರೈ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು.