ಪುತ್ತೂರು: ರಕ್ತದಾನದಿಂದ ಮನಸ್ಸಿಗೆ ತೃಪ್ತಿ, ನೆಮ್ಮದಿ, ಉಲ್ಲಾಸ ದೊರಕುತ್ತದೆ. ಉತ್ತಮ ಕಾರ್ಯಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಸಂಸ್ಥೆಯಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ವಾಣಿಜ್ಯ ಮತ್ತು ಕೈಗಾರಿಕೋದ್ಯಮಗಳ ಸಂಘ ಸುಳ್ಯದ ಅಧ್ಯಕ್ಷ ಶ್ರೀ ಪಿ.ಬಿ.ಸುದಾಕರ್ ರೈ ಅವರು ನುಡಿದರು.
ಮೆಡಿಕಲ್ ಆಫೀಸ್ ರೋಟರೀ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರಿನ ಡಾ. ರಾಮಚಂದ್ರ ಭಟ್ ರವರು ಮತನಾಡಿ ರಕ್ತದಾನ ಕಾರ್ಯ ಮಾಡುವುದು ಪುಣ್ಯದ ಕಾರ್ಯ ಪ್ರತಿಯೊಬ್ಬರೂ ಯೋಗ್ಯ ವಯಸ್ಸಿನಲ್ಲಿ ರಕ್ತದಾನ ಮಾಡುವುದರ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
ಬೆಳ್ಳಿಹಬ್ಬ ಸಮಿತಿಯ ಗೌರವಾದ್ಯಕ್ಷರಾದ ಡಾ.ಉದಯಕುಮಾರ್ ಅವರು ಮಾತನಾಡಿ. ಧ್ಯಾನ ವ್ಯಾಯಾಮ ಮಾಡುವಷ್ಟೇ ಪ್ರಾಮುಖ್ಯತೆ ರಕ್ತದಾನಕ್ಕೆ ಇದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಜಾಗೃತಿ ವೇದಿಕೆಯ ಸವಣೂರು ವಲಯದ ಅಧ್ಯಕ್ಷ ಶ್ರೀ ರಾಕೇಶ್ ರೈ ಕೆಡೆಂಜಿ ಮಾತನಾಡಿ ಶಾಲೆಯಲ್ಲಿ ದೊರಕುವ ಜ್ಙಾನದೊಂದಿಗೆ ಸಾಮಾಜಿಕವಾಗಿ ನಾವು ಪಡೆದುಕೊಂಡ ಜ್ಙಾನ ನಮ್ಮನ್ನು ಎತ್ತರಕ್ಕೆ ಏರಿಸುತ್ತದೆ ಎಂದರು.
ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮೋಹನ ಅಗರಿ, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಪದ್ಮನಾಭ ನೆಟ್ಟಾರು, ಬೆಳ್ಳಿಹಬ್ಬ ವ್ಯವಸ್ಥಾ ಸಮಿತಿಯ ಸಂಚಾಲಕರುಗಳು ಹಾಗೆಯೇ ಮತ್ತಿತರರು ಉಪಸ್ಥಿತರಿದ್ದರು.