Friday, September 20, 2024
ಸುದ್ದಿ

ಮೊಬೈಲ್ ಟವರ್ ಅಳವಡಿಕೆ, ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ: ಸಚಿವ ಖಾದರ್ – ಕಹಳೆ ನ್ಯೂಸ್

ಮಂಗಳೂರು: ವಸತಿ ಪ್ರದೇಶದಲ್ಲಿ ಮೊಬೈಲ್ ಟವರ್ ಅಳವಡಿಸಲು ಸರಿಯಾದ ಯಾವುದೇ ನಿಯಮ ಇಲ್ಲ , ಸ್ಥಳೀಯ ಸಂಸ್ಥೆ ಪರವಾನಗಿ ಇಲ್ಲದಿದ್ದರೂ ನಿರ್ಮಾಣ ಆಗುತ್ತಿದೆ.

ಇದರಿಂದ ಜನರಿಗೆ ಅನಗತ್ಯ ಭಯ ಇದೆ. ಹಾಗಾಗಿ ರಾಜ್ಯದಲ್ಲಿ ಮಾದರಿಯಾದ ಸಮಗ್ರ ನೀತಿ ರೂಪಿಸುವ ಸರ್ಕಾರ ಚಿಂತನೆ ಮಾಡಿದೆ. ಬಿಬಿಎಂಪಿ, ನಗರಾಭಿವೃದ್ಧಿ ಸಚಿವರು ಇರುವ ಸಮಿತಿ ಈ ಬಗ್ಗೆ ಮುಂದುವರಿಯಲಿದೆ ಕರಡು ನಿಯಮ ಸಿದ್ಧವಾಗಿದೆ, ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಸಾಯಿಖಾನೆ ವಿವಾದ ವಿಚಾರ

ಜಾಹೀರಾತು

ಪ್ರಧಾನಿ ಮೋದಿಗೆ ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಿಯವರಿಗೆ ಈ ಬಗ್ಗೆ ಇನ್ನೊಂದು ರಿಮೈಂಡರ್ ಹಾಕುತ್ತೇನೆ ಪ್ರಧಾನಿ ಬಿಡಿ, ಸ್ಥಳೀಯ ಜನಪ್ರತಿನಿಧಿಗಳೇ ಈ ಬಗ್ಗೆ ಏನೂ ಹೇಳಿಲ್ಲ ನನಗೆ. ಈ ಬಗ್ಗೆ ಯಾವುದೇ ಪತ್ರ ಅಥವಾ ಮನವಿ ಮಾಡಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರೆಶ್ನೆಗೆ ಉತ್ತರಿಸಿದರು.

ಗೋವಾದಲ್ಲಿ‌ ಕರ್ನಾಟಕದ‌ ಮೀನುಗಳಿಗೆ ತಡೆ ವಿಚಾರ

ಗೋವ‌ ಮೀನುಗಾರಿಕಾ ಸಚಿವರೊಂದಿಗೆ ಶೀಘ್ರ ಮಾತುಕತೆ ಮಾಡಲಿದ್ದೇವೆ , ಕರ್ನಾಟಕದ ಮೀನುಗಾರಿಕಾ ಸಚಿವರೊಂದಿಗೆ‌ ಈ ಬಗ್ಗೆ ಮಾತಾಡಲು ತಿಳಿಸಿದ್ದೇನೆ ನಾಳೆ ಕರ್ನಾಟಕ ಮೀನುಗಾರಿಕ ಸಚಿವರನ್ನು ಭೇಟಿ ಮಾಡುವೆ ಬಳಿಕ ಅವರು ಗೋವಾ ಮೀನುಗಾರಿಕ ಸಚಿವರೊಂದಿಗೆ ಮಾತಾಡಲಿದ್ದಾರೆ ಶೀಘ್ರದಲ್ಲೇ ಪರಿಹಾರವಾಗಲಿದೆ ಎಂದರು.