Tuesday, April 22, 2025
ಉತ್ತರ ಪ್ರದೇಶಸುದ್ದಿ

ಮಗಳೊಂದಿಗೆ ಮದುವೆಯಾಗಬೇಕಿದ್ದ ಭಾವಿ ಅಳಿಯನ ಜೊತೆ ಓಡಿಹೋದ ಅತ್ತೆ..!-ಕಹಳೆ ನ್ಯೂಸ್

ಇನ್ನು ಕೆಲವೇ ದಿನಗಳಲ್ಲಿ ತನ್ನ ಮಗಳೊಂದಿಗೆ ಮದುವೆಯಾಗಬೇಕಿದ್ದ ಭಾವಿ ಅಳಿಯನ ಜೊತೆ ಆಗಲೇ ಮದುವೆಯಾಗಿ ಮೂರು ಮಕ್ಕಳ ಮಹಿಳೆಯೊಬ್ಬರು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಈಗಾಗಲೇ ಮೂವರು ಮಕ್ಕಳಿದ್ದಾರೆ. ಮೊದಲು ಶಬ್ದಮ್ ಎಂದು ಕರೆಯಲ್ಪಡುತ್ತಿದ್ದ ಆ ಮಹಿಳೆ ಈಗ ಶಿವಾನಿ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾಳೆ. ಇದು ಆಕೆಗೆ ಮೂರನೇ ಮದುವೆಯಂತೆ..!

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಪ್ರದೇಶದ ಅಲಿಗಢದ ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಾಯಿ ಅನಿತಾ ತನ್ನ ಭಾವಿ ಅಳಿಯನೊಂದಿಗೆ ಓಡಿ ಹೋಗಿದ್ದಾಳೆ. ಮನೆಯಲ್ಲಿದ್ದ 3.5 ಲಕ್ಷ ರೂ.ಗೂ ಹೆಚ್ಚು ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳನ್ನು ಸಹ ತೆಗೆದುಕೊಂಡು ಪರಾರಿಯಾಗಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಾನಿಯು ಪಕ್ಕದ ಮನೆಯ 12ನೇ ತರಗತಿ ವಿದ್ಯಾರ್ಥಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದಳು, ಆಕೆ ಎರಡನೇ ಗಂಡನಿಗೆ ವಿಚ್ಛೇದನ ನೀಡಿ ಮೂವರು ಹೆಣ್ಣುಮಕ್ಕಳನ್ನು ಆತನ ಕಸ್ಟಡಿಯಲ್ಲಿ ಬಿಟ್ಟು, ಸ್ಥಳೀಯ ದೇವಸ್ಥಾನವೊಂದರಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗಿದ್ದಾಳೆ.

ಅನಿತಾ ಮಗಳಿಗೆ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. 10 ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಆಮಂತ್ರಣ ಪತ್ರಿಕೆಗಳನ್ನು ಸಹ ಮುದ್ರಿಸಿ, ಸಂಬಂಧಿಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಅನಿತಾ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಇದು ಇಡೀ ಕುಟುಂಬವನ್ನು ದಿಗ್ಧಮೆಗೊಳಿಸಿದೆ.

ನಾನು ಏಪ್ರಿಲ್ 16 ರಂದು ರಾಹುಲ್ ಜೊತೆ ಮದುವೆಯಾಗಬೇಕಿತ್ತು. ಆದರೆ ನನ್ನ ತಾಯಿ ಅವನೊಂದಿಗೆ ಓಡಿಹೋದರು. ರಾಹುಲ್ ಮತ್ತು ನನ್ನ ತಾಯಿ ಕಳೆದ ಮೂರು ನಾಲ್ಕು ತಿಂಗಳಿನಿಂದ ಫೋನ್ನಲ್ಲಿ ಸಾಕಷ್ಟು ಮಾತನಾಡುತ್ತಿದ್ದರು. ನಮ್ಮ ಅಲ್ವೇರಾದಲ್ಲಿ 3.5 ಲಕ್ಷ ರೂ. ನಗದು ಮತ್ತು 5 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಆಭರಣಗಳಿದ್ದವು. ಅವನು ಕೇಳಿದ್ದನ್ನೆಲ್ಲಾ ಅವಳು ಮಾಡಿದ್ದಾಳೆ. ನನ್ನ ತಾಯಿ ನಮ್ಮ ಎಲ್ಲಾ ಹಣವನ್ನು ತೆಗೆದುಕೊಂಡು ಓಡಿ ಹೋಗಿದ್ದಾಳೆಂದು ವಧು ನೊಂದು ನುಡಿದಿದ್ದಾಳೆ.

ಕೆಲವು ದಿನಗಳ ಹಿಂದೆ ಎರಡೂ ಕುಟುಂಬಗಳ ನಡುವೆ ಪಂಚಾಯಿತಿ ನಡೆದಿತ್ತು. ಮಹಿಳೆ ವಯಸ್ಕಳಾಗಿರುವುದರಿಂದ ಅವಳು ಬಯಸಿದ ಸ್ಥಳದಲ್ಲಿ ವಾಸಿಸಲು ಸ್ವತಂತ್ರಳು ಎಂದು ನಿರ್ಧರಿಸಲಾಯಿತು. ಶಿವಾನಿ ತನ್ನ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದು, ತನ್ನ ನಿರ್ಧಾರದಿಂದ ತೃಪ್ತಳಾಗಿದ್ದಾಳೆ ಎಂದು ಹೇಳಿದರು.

ವಿದ್ಯಾರ್ಥಿ ಕೂಡ ಅದನ್ನೇ ಹೇಳಿದ್ದು, ತಾವು ಸಂತೋಷವಾಗಿದ್ದೇವೆ ಮತ್ತು ಹಸ್ತಕ್ಷೇಪ ಬಯಸುವುದಿಲ್ಲ ಎಂದು ಹೇಳಿದ್ದಾನೆ. ಇಬ್ಬರೂ ಶಾಂತಿಯುತವಾಗಿ ಒಟ್ಟಿಗೆ ಬದುಕಬೇಕೆಂದು ನಾವು ಆಶಿಸುತ್ತೇವೆ ಎಂದು ಬಾಲಕನ ತಂದೆ ತಮ್ಮ ಮಗನ ನಿರ್ಧಾರವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅನಿತಾಳ ಪತಿ ಕುಮಾರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ. ಪೊಲೀಸರು ಅನಿತಾ ಮತ್ತು ರಾಹುಲ್ ಪತ್ತೆಗೆ ಬಲೆ ಬೀಸಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ