Tuesday, April 22, 2025
ಸುದ್ದಿ

ವಾರಾಣಸಿಗೆ ನಾಳೆ ಪ್ರಧಾನಿ ಮೋದಿ ಭೇಟಿ: ₹3,880 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ-ಕಹಳೆ ನ್ಯೂಸ್

ವಾರಾಣಸಿ: ನಾಳೆ (ಶುಕ್ರವಾರ) ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಭೇಟಿ ನೀಡಲಿದ್ದು, ₹3,880 ಕೋಟಿ ವೆಚ್ಚದ 44 ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ಮೋದಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ವಾರಾಣಸಿ ವಿಭಾಗೀಯ ಆಯುಕ್ತ ಕೌಶಲ್‌ ರಾಜ್‌ ಶರ್ಮಾ, ‘ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಲಿದ್ದು, 130 ಕುಡಿಯುವ ನೀರಿನ ಯೋಜನೆಗಳು, 100 ಹೊಸ ಅಂಗನವಾಡಿ ಕೇಂದ್ರಗಳು, 356 ಗ್ರಂಥಾಲಯಗಳು, ನಾಲ್ಕು ಗ್ರಾಮೀಣ ರಸ್ತೆಗಳು ಮತ್ತು ಎರಡು ಕಾಲೇಜುಗಳನ್ನು ಉದ್ಘಾಟಿಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ವಿದ್ಯುತ್‌ ಮೂಲಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ 15 ಹೊಸ ಸಬ್‌ಸ್ಟೇಷನ್‌ಗಳ ನಿರ್ಮಾಣ, ಹೊಸ ಟ್ರಾನ್ಸ್‌ಫಾರ್ಮರ್‌ಗಳ ಸ್ಥಾಪನೆ ಮತ್ತು 1,500 ಕಿ.ಮೀ ಹೊಸ ವಿದ್ಯುತ್‌ ಮಾರ್ಗಗಳ ಸ್ಥಾಪನೆ ಸೇರಿದಂತೆ ₹2,250 ಕೋಟಿ ವೆಚ್ಚದ 25 ಯೋಜನೆಗಳಿಗೆ ಪ್ರಧಾನಿ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂರು ಹೊಸ ಮೇಲ್ಸೇತುವೆಗಳು, ವಿವಿಧ ರಸ್ತೆ ಅಗಲೀಕರಣ ಉಪಕ್ರಮಗಳು, ಶಾಲಾ ನವೀಕರಣ ಕಾರ್ಯಗಳು ಹಾಗೂ ಶಿವಪುರ ಮತ್ತು ಉತ್ತರ ಪ್ರದೇಶದ ಕಾಲೇಜಿನಲ್ಲಿ ಎರಡು ಕ್ರೀಡಾಂಗಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ರೋಹನಿಯಾದ ಮೆಹಂದಿಗಂಜ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ ಎಂದು ವಿವರಿಸಿದ್ದಾರೆ.

ಪ್ರಧಾನಿ ಮೋದಿ ಅವರ ಭೇಟಿ ಹಿನ್ನೆಲೆ ಭದ್ರತೆಗಾಗಿ ಪೊಲೀಸ್‌ ಮತ್ತು ಅರೆಸೈನಿಕ ಪಡೆಗಳಿಂದ ಸುಮಾರು 4,000 ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್ ಆಯುಕ್ತ ಮೋಹಿತ್ ಅಗರ್ವಾಲ್ ಮತ್ತು ಭದ್ರತಾ ವಿಭಾಗದ ಎಡಿಜಿ ರಘುವೀರ್ ಲಾಲ್ ಅವರು ತಿಳಿಸಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ