
ಉಡುಪಿ ನಗರದ ಕರಾವಳಿ ಬೈಪಾಸ್ ಬಳಿ ನನಗೆ ಯಾರೂ ತೊಂದರೆ ಕೊಡಬೇಡಿ ನನಗೆ ಹೆದರಿಕೆ ಆಗುತ್ತಿದೆ ಎಂದು ರೋದಿಸುತ್ತಿದ್ದ ಯುವತಿಯೊಬ್ಬಳನ್ನು ವಿಶುಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.
ಯುವತಿಯ ಹೆಸರು ಸೌಮ್ಯ (19 ವರ್ಷ) ಹೈದರಾಬಾದ್ ಮೂಲದವಳೆಂದು ಹೇಳಿದ್ದು, ಮೈಯೆಲ್ಲ ಕೊಳಕ್ಕಾಗಿದ್ದು ರಾತ್ರಿ ರಸ್ತೆ ಬದಿಯಲ್ಲಿಯೇ ಕಳೆದಿರುವ ಬಗ್ಗೆ ಮೇಲ್ನೋಟಕ್ಕೆ ತೋರುತ್ತಿದ್ದು, ಯುವತಿಯು ತಾನು ಹೆದರಿ ಊರು ಬಿಟ್ಟು ಬಂದಿರುತ್ತೇನೆ ಎಂದಿದ್ದಾಳೆ. ರಕ್ಷಣಾ ಸಮಯದಲ್ಲಿ ಬಹಳಷ್ಟು ಹೆದರಿ ಅಳುತ್ತಿದ್ದಳು. ಈ ಬಗ್ಗೆ ವಿಶುಶೆಟ್ಟಿಯವರು ಮಹಿಳಾ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸಂಬಂಧಿಸಿದವರು ಯಾರಾದರು ಇದ್ದಲ್ಲಿ ಮಹಿಳಾ ಠಾಣೆ ಅಥವಾ ಸಖಿ ಸೆಂಟರ್ ರನ್ನು ಸಂಪರ್ಕಿಸುವಂತೆ ವಿಶುಶೆಟ್ಟಿಯವರು ವಿನಂತಿಸಿದ್ದಾರೆ.